ಇಂಗ್ಲೆಂಡ್ 19.3 ಓವರ್‌ಗಳಲ್ಲಿ 132ಕ್ಕೆ ಕುಸಿದರೆ, ವೆಸ್ಟ್ ಇಂಡೀಸ್ 19.2 ಓವರ್‌ಗಳಲ್ಲಿ 6 ವಿಕೆಟಿಗೆ 133 ರನ್ ಬಾರಿಸಿತು. ವಿಂಡೀಸ್ ಮೊದಲೆರಡು ಪಂದ್ಯಗಳನ್ನು ಜಯಿಸಿತ್ತು. ಬಳಿಕ ಇಂಗ್ಲೆಂಡ್ 2 ಪಂದ್ಯಗಳಲ್ಲಿ ಜಯ ಸಾಧಿಸಿ ಸರಣಿಯನ್ನು ಸಮಬಲಕ್ಕೆ ತಂದಿತ್ತು.
Advertisement
ಚೇಸಿಂಗ್ ವೇಳೆ ಶೈ ಹೋಪ್ ಅಜೇಯ 43 ರನ್, ಶರ್ಫೇನ್ ರುದರ್‌ಫೋರ್ಡ್ 30, ಜಾನ್ಸನ್ ಚಾರ್ಲ್ಸ್ 27 ರನ್ ಮಾಡಿದರು. ವಿಂಡೀಸ್ ಬೌಲಿಂಗ್ ಸರದಿಯಲ್ಲಿ ಮಿಂಚಿದ ಗುಡಕೇಶ್ ಮೋಟಿ (24ಕ್ಕೆ 3) ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು. ಸತತ ಸೆಂಚುರಿ ಬಾರಿಸಿದ ಇಂಗ್ಲೆಂಡ್ ಆರಂಭಕಾರ ಫಿಲ್ ಸಾಲ್ಟ್ ಸರಣಿಶ್ರೇಷ್ಠರೆನಿಸಿದರು. ಅಂತಿಮ ಪಂದ್ಯದಲ್ಲೂ ಸಾಲ್ಟ್ ಇಂಗ್ಲೆಂಡ್ ಸರದಿಯ ಟಾಪ್ ಸ್ಕೋರರ್ ಆಗಿದ್ದರು (38).