Advertisement

ಬಾಂಗ್ಲಾದೇಶ ವಿರುದ್ಧ 5 ವಿಕೆಟ್‌ಗಳಿಂದ ಗೆದ್ದ ವೆಸ್ಟ್‌ ಇಂಡೀಸ್‌ : ವಿಂಡೀಸ್‌ಗೆ ಟಿ20 ಸರಣಿ

11:23 PM Jul 08, 2022 | Team Udayavani |

ಗಯಾನಾ: ಪ್ರವಾಸಿ ಬಾಂಗ್ಲಾದೇಶ ವಿರುದ್ಧದ 3ನೇ ಅಂತಿಮ ಟಿ20 ಪಂದ್ಯವನ್ನು 5 ವಿಕೆಟ್‌ಗಳಿಂದ ಗೆದ್ದ ವೆಸ್ಟ್‌ ಇಂಡೀಸ್‌ ಸರಣಿಯನ್ನು 2-0 ಅಂತರದಿಂದ ತನ್ನದಾಗಿಸಿಕೊಂಡಿದೆ.

Advertisement

ಇಲ್ಲಿನ “ಪ್ರೊವಿಡೆನ್ಸ್‌ ಸ್ಟೇಡಿಯಂ’ನಲ್ಲಿ ನಡೆದ ಮುಖಾಮುಖೀಯಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಬಾಂಗ್ಲಾದೇಶ 5 ವಿಕೆಟಿಗೆ 163 ರನ್‌ ಮಾಡಿದರೆ, ವೆಸ್ಟ್‌ ಇಂಡೀಸ್‌ 18.2 ಓವರ್‌ಗಳಲ್ಲಿ 5 ವಿಕೆಟಿಗೆ 169 ರನ್‌ ಬಾರಿಸಿ ಗೆದ್ದು ಬಂದಿತು.
ನಿಕೋಲಸ್‌ ಪೂರಣ್‌ ಅವರ ಸ್ಫೋಟಕ ಬ್ಯಾಟಿಂಗ್‌ ವಿಂಡೀಸ್‌ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ಕೇವಲ 39 ಎಸೆತ ಎದುರಿಸಿದ ಪೂರಣ್‌ 5 ಫೋರ್‌, 5 ಸಿಕ್ಸರ್‌ ನೆರವಿನಿಂದ ಅಜೇಯ 74 ರನ್‌ ಹೊಡೆದರು. 55 ರನ್‌ ಮಾಡಿದ ಆರಂಭಕಾರ ಕೈಲ್‌ ಮೇಯರ್ ಕೆರಿಬಿಯನ್‌ ಸರದಿಯ ಮತ್ತೋರ್ವ ಪ್ರಮುಖ ಸ್ಕೋರರ್‌. ಪಂದ್ಯಶ್ರೇಷ್ಠ, ಸರಣಿಶ್ರೇಷ್ಠ ಪ್ರಶಸ್ತಿಗಳೆರಡೂ ಪೂರಣ್‌ ಪಾಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next