Advertisement
ರನ್‌ರೇಟ್‌ನಲ್ಲಿ ಸ್ಕಾಟ್ಲೆಂಡ್ ಮುಂದಿದೆ (+0.759). ಜಿಂಬಾಬ್ವೆಗೆ ದ್ವಿತೀಯ ಸ್ಥಾನ (0.000). ವೆಸ್ಟ್ ಇಂಡೀಸ್ ಮೂರಕ್ಕೇರಿತು (-0.275). ಐರ್ಲೆಂಡ್‌ಗೆ ಅಂತಿಮ ಸ್ಥಾನ (-0.468). ಎಲ್ಲ ತಂಡಗಳು ಇನ್ನೊಂದು ಪಂದ್ಯವನ್ನು ಆಡಲಿಕ್ಕಿದೆ. ಮೊದಲೆರಡು ಸ್ಥಾನ ಸಂಪಾದಿಸುವ ಅವಕಾಶ ಯಾರಿಗಿದೆ ಎಂಬುದು ಎಲ್ಲರ ನಿರೀಕ್ಷೆ.
ಮೊದಲ ಪಂದ್ಯದಲ್ಲಿ ಸ್ಕಾಟ್ಲೆಂಡ್‌ಗೆ ಶರಣಾಗಿದ್ದ ವೆಸ್ಟ್ ಇಂಡೀಸ್ ಇಲ್ಲಿ 7 ವಿಕೆಟ್ ನಷ್ಟಕ್ಕೆ 153 ರನ್ ಗಳಿಸಿತು. ಜಿಂಬಾಬ್ವೆ 18.2 ಓವರ್‌ಗಳಲ್ಲಿ 122ಕ್ಕೆ ಕುಸಿಯಿತು. 45 ರನ್ ಮಾಡಿದ ಆರಂಭಕಾರ ಜಾನ್ಸನ್ ಚಾರ್ಲ್ಸ್ ವಿಂಡೀಸ್ ಸರದಿಯ ಟಾಪ್ ಸ್ಕೋರರ್. ರೋವ¾ನ್ ಪೊವೆಲ್ 28 ರನ್ ಹೊಡೆದರು. ಸಿಕಂದರ್ ರಝಾ 19ಕ್ಕೆ 3 ವಿಕೆಟ್ ಉರುಳಿಸಿ ಹೆಚ್ಚಿನ ಯಶಸ್ಸು ಸಾಧಿಸಿದ್ದು ಜಿಂಬಾಬ್ವೆ ಬೌಲಿಂಗ್ ಸರದಿಯ ವಿಶೇಷವಾಗಿತ್ತು.
Related Articles
Advertisement
ಸಂಕ್ಷಿಪ್ತ ಸ್ಕೋರ್: ವೆಸ್ಟ್ ಇಂಡೀಸ್-7 ವಿಕೆಟಿಗೆ 153 (ಚಾರ್ಲ್ಸ್ 45, ಪೊವೆಲ್ 28, ಅಖೀಲ್ ಹುಸೇನ್ ಔಟಾಗದೆ 23, ರಝಾ 19ಕ್ಕೆ 3, ಮುಝರಬನಿ 38ಕ್ಕೆ 2). ಜಿಂಬಾಬ್ವೆ-18.2 ಓವರ್‌ಗಳಲ್ಲಿ 122 (ಜೊಂಗ್ವೆ 29, ಮದೆವೇರ್ 27, ಜೋಸೆಫ್ 16ಕ್ಕೆ 4, ಹೋಲ್ಡರ್ 12ಕ್ಕೆ 3).
ಪಂದ್ಯಶ್ರೇಷ್ಠ: ಅಲ್ಜಾರಿ ಜೋಸೆಫ್.