Advertisement

ವಿಂಡೀಸಿಗೆ ಲಂಕಾ ತಿರುಗೇಟು

08:08 PM Mar 25, 2021 | Team Udayavani |

ನಾರ್ತ್‌ಸೌಂಡ್‌ (ಆ್ಯಂಟಿಗುವಾ): ಮೊದಲ ಟೆಸ್ಟ್‌ ಪಂದ್ಯದಲ್ಲಿ ಆತಿಥೇಯ ವೆಸ್ಟ್‌ ಇಂಡೀಸ್‌ ವಿರುದ್ಧ ಶ್ರೀಲಂಕಾ ತಿರುಗಿ ಬಿದ್ದಿದೆ. ದ್ವಿತೀಯ ಇನ್ನಿಂಗ್ಸ್‌ನಲ್ಲಿ ಅಮೋಘ ಬ್ಯಾಟಿಂಗ್‌ ಪ್ರದರ್ಶನ ನೀಡಿದ ಲಂಕಾ, 375 ರನ್ನುಗಳ ಟಾರ್ಗೆಟ್‌ ನೀಡುವ ಮೂಲಕ ಗೆಲುವಿನ ಸಾಧ್ಯತೆಯೊಂದನ್ನು ತೆರೆದಿರಿಸಿದೆ.

Advertisement

4ನೇ ದಿನದಾಟದ ಅಂತ್ಯಕ್ಕೆ ವಿಂಡೀಸ್‌ ಒಂದು ವಿಕೆಟಿಗೆ 34 ರನ್‌ ಮಾಡಿದ್ದು, ಪಂದ್ಯವನ್ನು ಉಳಿಸಿಕೊಳ್ಳಬೇಕಾದ ಒತ್ತಡದಲ್ಲಿದೆ.

102 ರನ್‌ ಹಿನ್ನಡೆಗೆ ಸಿಲುಕಿದ ಶ್ರೀಲಂಕಾ ದ್ವಿತೀಯ ಇನ್ನಿಂಗ್ಸ್‌ನಲ್ಲಿ 476 ರನ್‌ ಪೇರಿಸುವ ಮೂಲಕ ಪಂದ್ಯಕ್ಕೆ ಮರಳಿತು. ಚೊಚ್ಚಲ ಟೆಸ್ಟ್‌ ಆಡಲಿಳಿದ ಪತುಮ್‌ ನಿಸ್ಸಂಕ 103, ನಿರೋಷನ್‌ ಡಿಕ್ವೆಲ್ಲ 96, ಒಶಾದ ಫೆರ್ನಾಂಡೊ 91, ಲಹಿರು ತಿರಿಮನ್ನೆ 76 ರನ್‌ ಬಾರಿಸಿ ಕೆರಿಬಿಯನ್‌ ಬೌಲರ್‌ಗಳ ಮೇಲೆ ತಿರುಗಿ ಬಿದ್ದರು. ವಿಂಡೀಸ್‌ 8 ಮಂದಿ ಬೌಲರ್‌ಗಳನ್ನು ದಾಳಿಗಿಳಿಸಿದರೂ ಲಂಕೆಗೆ ತಡೆಯೊಡ್ಡಲಾಗಲಿಲ್ಲ.

ಸಂಕ್ಷಿಪ್ತ ಸ್ಕೋರ್‌: ಶ್ರೀಲಂಕಾ-169 ಮತ್ತು 476 (ನಿಸ್ಸಂಕ 103, ಡಿಕ್ವೆಲ್ಲ 96, ಫೆರ್ನಾಂಡೊ 91, ತಿರಿಮನ್ನೆ 76, ರೋಚ್‌ 74ಕ್ಕೆ 3, ಕಾರ್ನ್ವಾಲ್‌ 137ಕ್ಕೆ 3). ವೆಸ್ಟ್‌ ಇಂಡೀಸ್‌-271 ಮತ್ತು ಒಂದು ವಿಕೆಟಿಗೆ 34.

Advertisement

Udayavani is now on Telegram. Click here to join our channel and stay updated with the latest news.

Next