Advertisement

ಪಾಕ್‌ ಗೆಲುವು; ಸರಣಿ ಸಮಬಲ

09:25 PM Aug 25, 2021 | Team Udayavani |

ಕಿಂಗ್‌ಸ್ಟನ್‌ (ಜಮೈಕಾ): ಆತಿಥೇಯ ವೆಸ್ಟ್‌ ಇಂಡೀಸ್‌ ಎದುರಿನ ಮೊದಲ ಟೆಸ್ಟ್‌ ಪಂದ್ಯವನ್ನು ಒಂದು ವಿಕೆಟ್‌ ಅಂತರದಿಂದ ಕಳೆದುಕೊಂಡು ಪರಿತಪಿಸುತ್ತಿದ್ದ ಪಾಕಿಸ್ಥಾನ, ಇಲ್ಲಿನ “ಸಬೀನಾ ಪಾರ್ಕ್‌’ನಲ್ಲಿ ನಡೆದ ದ್ವಿತೀಯ ಟೆಸ್ಟ್‌ನಲ್ಲಿ 109 ರನ್‌ ಗೆಲುವು ಸಾಧಿಸಿ ಸರಣಿಯನ್ನು ಸಮಬಲದೊಂದಿಗೆ ಮುಗಿಸಿದೆ.

Advertisement

ಗೆಲುವಿಗೆ 329 ರನ್ನುಗಳ ಗುರಿ ಪಡೆದ ವೆಸ್ಟ್‌ ಇಂಡೀಸ್‌ 219ಕ್ಕೆ ತನ್ನ ದ್ವಿತೀಯ ಸರದಿಯನ್ನು ಮುಗಿಸಿತು. ಮೊದಲ ಇನ್ನಿಂಗ್ಸ್‌ನಲ್ಲಿ 6 ವಿಕೆಟ್‌ ಉಡಾಯಿಸಿದ್ದ ಶಾಹೀನ್‌ ಅಫ್ರಿದಿ, ಮತ್ತೆ ಕೆರಿಬಿಯನ್ನರ ಮೇಲೆ ಘಾತಕವಾಗಿ ಎರಗಿ 4 ವಿಕೆಟ್‌ ಹಾರಿಸಿದರು.

47 ರನ್‌ ಮಾಡಿದ ಜಾಸನ್‌ ಹೋಲ್ಡರ್‌ ಅವರದೇ ವಿಂಡೀಸ್‌ ಸರದಿಯ ಗರಿಷ್ಠ ಗಳಿಕೆ. ನಾಯಕ ಕ್ರೆಗ್‌ ಬ್ರಾತ್‌ವೇಟ್‌ 39 ರನ್‌ ಹೊಡೆದರು.

ಇದು ಕಿಂಗ್‌ಸ್ಟನ್‌ನಲ್ಲಿ ಆಡಿದ 6 ಟೆಸ್ಟ್‌ಗಳಲ್ಲಿ ಪಾಕಿಸ್ಥಾನ ಗೆದ್ದ 3ನೇ ಪಂದ್ಯ. ಉಳಿದ ಮೂರನ್ನು ವಿಂಡೀಸ್‌ ಜಯಿಸಿದೆ.

ಸಂಕ್ಷಿಪ್ತ ಸ್ಕೋರ್‌: ಪಾಕಿಸ್ಥಾನ-302 ಮತ್ತು 6 ವಿಕೆಟಿಗೆ 176 ಡಿಕ್ಲೇರ್‌. ವೆಸ್ಟ್‌ ಇಂಡೀಸ್‌ 150 ಮತ್ತು 219 (ಹೋಲ್ಡರ್‌ 47, ಬ್ರಾತ್‌ವೇಟ್‌ 39, ಮೇಯರ್ 32, ಅಫ್ರಿದಿ 43ಕ್ಕೆ 4, ನೌಮಾನ್‌ ಅಲಿ 52ಕ್ಕೆ 3, ಹಸನ್‌ ಅಲಿ 37ಕ್ಕೆ 2). ಪಂದ್ಯಶ್ರೇಷ್ಠ, ಸರಣಿಶ್ರೇಷ್ಠ: ಶಾಹೀನ್‌ ಅಫ್ರಿದಿ.

Advertisement
Advertisement

Udayavani is now on Telegram. Click here to join our channel and stay updated with the latest news.

Next