Advertisement
ಭಾರತ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಕುಲದೀಪ್, ಜಡೇಜ ಸಹಿತ ಬೌಲರ್‌ಗಳ ಅಮೋಘ ದಾಳಿಗೆ ತತ್ತರಿಸಿದ ಆತಿಥೇಯ ತಂಡವು ಕೇವಲ 23 ಓವರ್‌ಗಳಲ್ಲಿ 114 ರನ್ನಿಗೆ ಆಲೌಟಾಯಿತು.
ಭಾರತೀಯ ದಾಳಿಗೆ ವೆಸ್ಟ್‌ಇಂಡೀಸ್ ಆರಂಭದಿಂದಲೇ ಕುಸಿಯತೊಡಗಿತು. ಮೊತ್ತ 7 ತಲುಪಿದಾಗ ಆರಂಭಿಕ ಕೈಲ್ ಮೇಯರ್ ಔಟಾದರು. ಆಬಳಿಕ ಬ್ರ್ಯಾಂಡನ್ ಕಿಂಗ್ ಮತ್ತು ಅಲಿಕ್ ಅಥನಾಝ್ ದ್ವಿತೀಯ ವಿಕೆಟಿಗೆ 38 ರನ್ ಪೇರಿಸಿ ತಂಡವನ್ನು ಆಧರಿಸುವ ಪ್ರಯತ್ನ ನಡೆಸಿದರು. ಈ ಜೋಡಿಯನ್ನು ಮುಕೇಶ್ ಮುರಿದರು. ಅದೇ ಮೊತ್ತಕ್ಕೆ ಬ್ರ್ಯಾಂಡನ್ ಕೂಡ ಔಟಾದ ಕಾರಣ ತಂಡ ಒತ್ತಡಕ್ಕೆ ಬಿತ್ತು.
Related Articles
Advertisement
45 ಎಸೆತ ಎದುರಿಸಿದ ಹೋಪ್ 43 ರನ್ ಗಳಿಸಿ ಕುಲದೀಪ್‌ಗೆ ವಿಕೆಟ್ ಒಪ್ಪಿಸಿದರು. 4 ಬೌಂಡರಿ ಮತ್ತು 1 ಸಿಕ್ಸರ್ ಬಾರಿಸಿದರು. ಉತ್ತಮ ಸ್ಪಿನ್ ಸಂಘಟಿಸಿದ ಕುಲದೀಪ್ ತನ್ನ ಮೂರು ಓವರ್‌ಗಳ ದಾಳಿಯಲ್ಲಿ ಕೇವಲ 6 ರನ್ ನೀಡಿ ನಾಲ್ಕು ವಿಕೆಟ್ ಉರುಳಿಸಿದರು. ರವೀಂದ್ರ ಜಡೇಜ 37 ರನ್ನಿಗೆ 3 ವಿಕೆಟ್ ಕಿತ್ತರು.
ಸಂಕ್ಷಿಪ್ತ ಸ್ಕೋರು:ವೆಸ್ಟ್‌ಇಂಡೀಸ್ 23 ಓವರ್‌ಗಳಲ್ಲಿ 114 ಆಲೌಟ್ (ಅಲಿಕ್ ಅಥನಾಝ್ 22, ಶೈ ಹೋಪ್ 43, ರವೀಂದ್ರ ಜಡೇಜ 33ಕ್ಕೆ 3, ಕುಲದೀಪ್ ಯಾದವ್ 6ಕ್ಕೆ 4). ಭಾರತ 22.5 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 118 ರನ್