Advertisement

ವೆಸ್ಟ್‌ ಇಂಡೀಸ್‌ –ಇಂಗ್ಲೆಂಡ್‌ ಟೆಸ್ಟ್ : ಜೋ ರೂಟ್‌ 25ನೇ ಟೆಸ್ಟ್‌ ಶತಕ

10:40 PM Mar 17, 2022 | Team Udayavani |

ಬ್ರಿಜ್‌ಟೌನ್‌ (ಬಾರ್ಬಡಾಸ್‌): ಇಂಗ್ಲೆಂಡ್‌ ನಾಯಕ ಜೋ ರೂಟ್‌ 25ನೇ ಟೆಸ್ಟ್‌ ಶತಕ ದಾಖಲಿಸಿದ್ದಾರೆ. ವೆಸ್ಟ್‌ ಇಂಡೀಸ್‌ ವಿರುದ್ಧದ ದ್ವಿತೀಯ ಟೆಸ್ಟ್‌ ಪಂದ್ಯದಲ್ಲಿ ಅವರು ಭರ್ಜರಿ 151 ರನ್‌ ಮಾಡಿ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ. ದ್ವಿತೀಯ ದಿನದ ಲಂಚ್‌ ವೇಳೆ ಇಂಗ್ಲೆಂಡ್‌ 3 ವಿಕೆಟಿಗೆ 369 ರನ್‌ ಮಾಡಿದೆ. ಬೆನ್‌ ಸ್ಟೋಕ್ಸ್‌ 89 ರನ್‌ ಮಾಡಿ ಆಡುತ್ತಿದ್ದಾರೆ. ಡೇನಿಯಲ್‌ ಲಾರೆನ್ಸ್‌ 91 ರನ್ನಿಗೆ ಔಟಾಗಿ ಸೆಂಚುರಿ ತಪ್ಪಿಸಿಕೊಂಡರು.

Advertisement

25ನೇ ಶತಕ ಸಾಧನೆಯೊಂದಿಗೆ ವಿವಿಯನ್‌ ರಿಚರ್ಡ್ಸ್‌, ಗ್ರೆಗ್‌ ಚಾಪೆಲ್‌, ಮೊಹಮ್ಮದ್‌ ಯೂಸುಫ್ ಅವರನ್ನೆಲ್ಲ ರೂಟ್‌ ಹಿಂದಿಕ್ಕಿದರು. ಇವರೆಲ್ಲ 24 ಶತಕ ಬಾರಿಸಿದ್ದಾರೆ. ಸಮಕಾಲೀನ ಕ್ರಿಕೆಟ್‌ನ ಇಬ್ಬರು ಖ್ಯಾತ ಬ್ಯಾಟರ್‌ಗಳಾದ ಡೇವಿಡ್‌ ವಾರ್ನರ್‌ ಮತ್ತು ಕೇನ್‌ ವಿಲಿಯಮ್ಸನ್‌ ಕೂಡ 24 ಶತಕ ಹೊಡೆದ್ದಾರೆ.  ಜೋ ರೂಟ್‌ ಮೊದಲ ಟೆಸ್ಟ್‌ ನಲ್ಲೂ ಸೆಂಚುರಿ ಹೊಡೆದಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next