Advertisement

ಟಿ20 ಕಿರೀಟ ಏರಿಸಿಕೊಂಡ ಕೆರಿಬಿಯನ್ನರು

11:15 PM Oct 20, 2021 | Team Udayavani |

ಮೊದಲೆರಡು ಏಕದಿನ ವಿಶ್ವಕಪ್‌ನಲ್ಲಿ ಪಾರಮ್ಯ ಸಾಧಿಸಿದ್ದ ವೆಸ್ಟ್‌ ಇಂಡೀಸಿಗೆ ಟಿ20 ವಿಶ್ವಕಪ್‌ ಎತ್ತಲು 3 ಕೂಟಗಳನ್ನು ಕಾಯಬೇಕಾಯಿತು. 2012ರಲ್ಲಿ ಶ್ರೀಲಂಕಾದಲ್ಲಿ ನಡೆದ ಪಂದ್ಯಾವಳಿಯಲ್ಲಿ ಅದು ಆತಿಥೇಯ ಲಂಕೆಯನ್ನೇ ಮಣಿಸಿ ಮೊದಲ ಸಲ ಕಿರೀಟ ಏರಿಸಿಕೊಂಡಿತು. ಡ್ಯಾರನ್‌ ಸಮ್ಮಿ ಅಂದಿನ ವಿಂಡೀಸ್‌ ಸಾರಥಿಯಾಗಿದ್ದರು.

Advertisement

ಟಿ20 ವಿಶ್ವಕಪ್‌ ಇತಿಹಾಸದಲ್ಲಿ 2 ಸಲ ಚಾಂಪಿಯನ್‌ ಎನಿಸಿಕೊಂಡ ಏಕೈಕ ತಂಡವೆಂಬುದು ವೆಸ್ಟ್‌ ಇಂಡೀಸ್‌ ಹೆಗ್ಗಳಿಕೆ. 2016ರ ಕೊನೆಯ ಆವೃತ್ತಿಯಲ್ಲೂ ವಿಂಡೀಸ್‌ ಕಪ್‌ ಎತ್ತಿತು. ಅದೀಗ ಹಾಲಿ ಚಾಂಪಿಯನ್‌ ಎಂಬ ಹಿರಿಮೆಯನ್ನೂ ಹೊಂದಿದೆ.

ತವರಲ್ಲೇ ಎಡವಿದ ಲಂಕಾ
ಆತಿಥೇಯ ತಂಡವಾಗಿದ್ದರಿಂದ ಶ್ರೀಲಂಕಾಕ್ಕೆ ಟ್ರೋಫಿ ಗೆದ್ದೇ ಗೆಲ್ಲುತ್ತೇನೆನ್ನುವ ಭರವಸೆಯೊಂದಿತ್ತು. ವೆಸ್ಟ್‌ ಇಂಡೀಸ್‌ ಮೇಲೆ ಹೇಳಿಕೊಳ್ಳುವಂತಹ ನಿರೀಕ್ಷೆಗಳೇ ನಿರಲಿಲ್ಲ. ಆದರೆ ಫೈನಲ್‌ನಲ್ಲಿ ಮಾಹೇಲ ಜಯವರ್ಧನೆ ನಾಯಕತ್ವದ ಶ್ರೀಲಂಕಾ 36 ರನ್‌ ಸೋಲಿಗೆ ತುತ್ತಾಯಿತು.

ಇದನ್ನೂ ಓದಿ:ಆಸ್ಟ್ರೇಲಿಯದ ಮೇಲೂ ಸವಾರಿ ಮಾಡಿದ ಭಾರತ

ಸಂಕ್ಷಿಪ್ತ ಸ್ಕೋರ್‌: ವೆಸ್ಟ್‌ ಇಂಡೀಸ್‌-6 ವಿಕೆಟಿಗೆ 137 (ಮರ್ಲಾನ್‌ ಸ್ಯಾಮ್ಯುಯೆಲ್ಸ್‌ 78, ಅಜಂತ ಮೆಂಡಿಸ್‌ 12ಕ್ಕೆ 4). ಶ್ರೀಲಂಕಾ 18.4 ಓವರ್‌ಗಳಲ್ಲಿ 101 (ಜಯವರ್ಧನೆ 33, ಸುನೀಲ್‌ ನಾರಾಯಣ್‌ 9ಕ್ಕೆ 3, ಡ್ಯಾರೆನ್‌ ಸ್ಯಾಮಿ 6ಕ್ಕೆ 2).
ಪಂದ್ಯಶ್ರೇಷ್ಠ: ಮಾರ್ಲಾನ್‌ ಸಾಮ್ಯುಯೆಲ್ಸ್‌.
ಸರಣಿಶ್ರೇಷ್ಠ: ಶೇನ್‌ ವಾಟ್ಸನ್‌.

Advertisement

ಭಾರತ ಮತ್ತೆ ವಿಫ‌ಲ
ಗುಂಪು ಹಂತದಲ್ಲಿ ಒಟ್ಟು 12 ತಂಡಗಳಿದ್ದವು. ಸೂಪರ್‌-8 ಹಂತಕ್ಕೆ ತೇರ್ಗಡೆ ಹೊಂದಿದ ಭಾರತ ಅಲ್ಲಿ ಆಸ್ಟ್ರೇಲಿಯ, ಪಾಕಿಸ್ಥಾನ, ದಕ್ಷಿಣ ಆಫ್ರಿಕಾದೊಂದಿಗೆ ಸ್ಥಾನ ಪಡೆದಿತ್ತು. ಇಲ್ಲಿ ಎರಡು ಪಂದ್ಯ ಗೆದ್ದರೂ ಭಾರತ ಸೆಮಿಫೈನಲ್‌ಗೇರಲು ವಿಫ‌ಲವಾಯಿತು. ಸೆಮಿಫೈನಲ್‌ನಲ್ಲಿ ಪಾಕಿಸ್ಥಾನ ವಿರುದ್ಧ ಶ್ರೀಲಂಕಾ, ಆಸ್ಟ್ರೇಲಿಯ ವಿರುದ್ಧ ವೆಸ್ಟ್‌ ಇಂಡೀಸ್‌ ಗೆದ್ದು ಫೈನಲ್‌ಗೇರಿದವು.

ಇದು ಏಶ್ಯ ಖಂಡದಲ್ಲಿ ನಡೆದ ಮೊದಲ ಟಿ20 ವಿಶ್ವಕಪ್‌ ಪಂದ್ಯಾವಳಿಯಾಗಿತ್ತು.

 

Advertisement

Udayavani is now on Telegram. Click here to join our channel and stay updated with the latest news.

Next