ಸೌಥಂಪ್ಟನ್: ಇಲ್ಲಿನ ಏಜಸ್ ಬೌಲ್ ಅಂಗಳದಲ್ಲಿ ನಡೆಯುತ್ತಿರುವ ಇಂಗ್ಲೆಂಡ್ – ವೆಸ್ಟ್ ಇಂಡೀಸ್ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಪ್ರವಾಸಿ ವಿಂಡೀಸ್ ಪಡೆ ಉತ್ತಮ ಮುನ್ನಡೆ ಪಡೆದಿದೆ.
ಇಂಗ್ಲೆಂಡ್ ನ ಮೊದಲ ಇನ್ನಿಂಗ್ ನ 204 ರನ್ ಗೆ ಉತ್ತರಿಸಿದ ವಿಂಡೀಸ್ 318 ರನ್ ಗಳನ್ನು ಗಳಿಸಿತು. 114 ರನ್ ಹಿನ್ನಡೆ ಪಡೆದ ಇಂಗ್ಲೆಂಡ್ ಬ್ಯಾಟಿಂಗ್ ಆರಂಭಿಸಿದ್ದು ವಿಕೆಟ್ ನಷ್ಟವಿಲ್ಲದೆ 15 ರನ್ ಗಳಿಸಿದೆ.
ಎರಡನೇ ದಿನದ ಅಂತ್ಯಕ್ಕೆ ಒಂದು ವಿಕೆಟ್ ನಷ್ಟಕ್ಕೆ 57 ರನ್ ಗಳಿಸಿದ್ದರಿಂದ ಬ್ಯಾಟಿಂಗ್ ಆರಂಭಿಸಿದ ವಿಂಡೀಸ್ ಗೆ ಕ್ರೇಗ್ ಬ್ರಾಥ್ ವೇಟ್ ಅರ್ಧಶತಕ ಬಾರಿಸಿ ಆಧರಿಸಿದರು. ಬ್ರಾಥ್ ವೇಟ್ 65 ರನ್ ಗಳಿಸಿದರೆ, ಬ್ರೂಕ್ಸ್ 39 ರನ್ ಗಳಿಸಿದರು.
ನಂತರ ಜೊತೆಯಾದ ರೋಸ್ಟನ್ ಚೇಸ್ ಮತ್ತು ಕೀಪರ್ ಡೌರಿಚ್ ಉತ್ತಮ ಜೊತೆಯಾಟ ನಡೆಸಿದರು, ಚೇಸ್ 47 ರನ್ ಗಳಿಸಿದರೆ, ಡೌರಿಚ್ 61 ರನ್ ಗಳಿಸಿ ಔಟಾದರು. ಅಂತಿಮವಾಗಿ ವಿಂಡೀಸ್ 318 ರನ್ ಗಳಿಸಿತು.
ಇಂಗ್ಲೆಂಡ್ ಪರ ನಾಯಕ ಬೆನ್ ಸ್ಟೋಕ್ಸ್ ನಾಲ್ಕು ವಿಕೆಟ್, ಜೇಮ್ಸ್ ಆಂಡರ್ಸನ್ ಮೂರು ವಿಕೆಟ್, ಡಾಮ್ ಬೆಸ್ ಎರಡು ಮತ್ತು ಮಾರ್ಕ್ ವುಡ್ ಒಂದು ವಿಕೆಟ್ ಪಡೆದರು.