Advertisement
ಮೊದಲು ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್ 20 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 176 ರನ್ ಬಾರಿಸಿತ್ತು. ಇದಕ್ಕೆ ಉತ್ತರವಾಗಿ ಇಂಗ್ಲೆಂಡ್ 19.3 ಓವರ್‌ಗಳಲ್ಲಿ 155 ರನ್ ಬಾರಿಸಿ ಆಲೌಟ್ ಆಯಿತು.ವೆಸ್ಟ್ ಇಂಡೀಸ್ ಪರ ಎವಿನ್ ಲೇವಿಸ್ 28 ಎಸೆತದಲ್ಲಿ 51 ರನ್ ಬಾರಿಸಿದರು. ಸ್ಫೋಟಕ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್ 21 ಎಸೆತದಲ್ಲಿ 3 ಬೌಂಡರಿ, 4 ಸಿಕ್ಸರ್ ಸೇರಿದಂತೆ 40 ರನ್ ಬಾರಿಸಿ ಔಟ್ ಆದರು. ಇವರಿಬ್ಬರು ಮೊದಲ ವಿಕೆಟಿಗೆ 6.3 ಓವರ್‌ಗಳಲ್ಲಿ 77 ರನ್ ಪೇರಿಸಿದ್ದರಿಂದ ವಿಂಡೀಸ್ ದೊಡ್ಡ ಮೊತ್ತ ದಾಖಲಿಸಲು ಸಾಧ್ಯವಾಯಿತು.
ವೆಸ್ಟ್ ಇಂಡೀಸ್ 20 ಓವರ್‌ಗಳಲ್ಲಿ 9 ವಿಕೆಟಿಗೆ 176 (ಎವಿನ್ ಲೇವಿಸ್ 51, ಗೇಲ್ 40, ರೋಮ್ಯಾನ್ ಪಾವೆಲ್ 28, ರಶೀದ್ 25ಕ್ಕೆ 3, ಲಿಯಮ್ ಪ್ಲಂಕೆಟ್ 27ಕ್ಕೆ 3), ಇಂಗ್ಲೆಂಡ್ 19.3 ಓವರ್‌ಗಳಲ್ಲಿ 155 (ಅಲೆಕ್ಸ್ ಹೆಲ್ಸ್ 43, ಜೋಸ್ ಬಟ್ಲರ್ 30, ಜಾನಿ ಬೇರ್‌ಸ್ಟೋ 27, ಕಾರ್ಲೋಸ್ ಬ್ರಾತ್‌ವೇಟ್ 20ಕ್ಕೆ 3, ಕೆಸ್ರಿಕ್ ವಿಲಿಯಮ್ಸ್ 35ಕ್ಕೆ 3, ಸುನೀಲ್ ನಾರಾಯಣ್ 15ಕ್ಕೆ 2).