Advertisement

ಗಾಲೆ ಟೆಸ್ಟ್‌ : ಶ್ರೀಲಂಕಾದ ಸ್ಪಿನ್‌ ದಾಳಿಗೆ ಕುಸಿದ ವೆಸ್ಟ್‌ ಇಂಡೀಸ್‌

07:50 PM Nov 22, 2021 | Team Udayavani |

ಗಾಲೆ: ಶ್ರೀಲಂಕಾದ ಸ್ಪಿನ್‌ ದಾಳಿಗೆ ತತ್ತರಿಸಿದ ವೆಸ್ಟ್‌ ಇಂಡೀಸ್‌ ಗಾಲೆ ಟೆಸ್ಟ್‌ ಪಂದ್ಯದ ದ್ವಿತೀಯ ದಿನವೇ ಫಾಲೋಆನ್‌ ಭೀತಿಗೆ ಸಿಲುಕಿದೆ. ಆತಿಥೇಯರ 386 ರನ್ನುಗಳ ಮೊದಲ ಇನ್ನಿಂಗ್ಸಿಗೆ ಉತ್ತರವಾಗಿ 113ಕ್ಕೆ 6 ವಿಕೆಟ್‌ ಕಳೆದುಕೊಂಡಿದೆ.

Advertisement

ಆಫ್ಸ್ಪಿನ್ನರ್‌ ರಮೇಶ್‌ ಮೆಂಡಿಸ್‌ (23ಕ್ಕೆ 3) ಮತ್ತು ಲೆಗ್‌ಸ್ಪಿನ್ನರ್‌ ಪ್ರವೀಣ್‌ ಜಯವಿಕ್ರಮ (25ಕ್ಕೆ 2) ಬೌಲಿಂಗಿಗೆ ಉತ್ತರಿಸುವಲ್ಲಿ ವೆಸ್ಟ್‌ ಇಂಡೀಸ್‌ ಸಂಪೂರ್ಣ ವಿಫ‌ಲವಾಯಿತು. ನಾಯಕನೂ ಆಗಿರುವ ಆರಂಭಕಾರ ಕ್ರೆಗ್‌ ಬ್ರಾತ್‌ವೇಟ್‌ (41) ಮತ್ತು ಜರ್ಮೈನ್‌ ಬ್ಲ್ಯಾಕ್‌ವುಡ್‌ (20) ಉತ್ತಮ ಆರಂಭ ಒದಗಿಸಿದರೂ ಸ್ಪಿನ್‌ ದಾಳಿ ಆರಂಭಗೊಂಡೊಡನೆ ಕೆರಿಬಿಯನ್‌ ಪಡೆ ದಿಕ್ಕು ತಪ್ಪಲಾರಂಭಿಸಿತು. 54 ರನ್‌ ಅಂತರದಲ್ಲಿ ಆರೂ ವಿಕೆಟ್‌ ಹಾರಿಹೋಯಿತು.

ಫಾಲೋಆನ್‌ನಿಂದ ಪಾರಾಗಬೇಕಾದರೆ ವೆಸ್ಟ್‌ ಇಂಡೀಸ್‌ 186 ರನ್‌ ಗಳಿಸಬೇಕಿದೆ. ಕೈಲ್‌ ಮೇಯರ್ 22 ಮತ್ತು ಜಾಸನ್‌ ಹೋಲ್ಡರ್‌ ಒಂದು ರನ್‌ ಮಾಡಿ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ.

ಇದನ್ನೂ ಓದಿ:ಗೋವಾ 12 ಶಾಸಕರ ಅನರ್ಹ ಪ್ರಕರಣ; ಡಿ.10 ಕ್ಕೆ ವಿಚಾರಣೆಯನ್ನು ಮುಂದೂಡಿದ ನ್ಯಾಯಾಲಯ

ಇದಕ್ಕೂ ಮುನ್ನ 3ಕ್ಕೆ 267 ರನ್‌ ಮಾಡಿದ್ದ ಶ್ರೀಲಂಕಾ, ದ್ವಿತೀಯ ದಿನ ಕ್ಷಿಪ್ರ ಕುಸಿತ ಕಂಡು 386ಕ್ಕೆ ಆಲೌಟ್‌ ಆಯಿತು. ರೋಸ್ಟನ್‌ ಚೇಸ್‌ 5 ವಿಕೆಟ್‌ ಉರುಳಿಸಿ ಲಂಕೆಯನ್ನು ಕಾಡಿದರು. 132 ರನ್‌ ಮಾಡಿ ಬ್ಯಾಟಿಂಗ್‌ ಕಾಯ್ದುಕೊಂಡಿದ್ದ ದಿಮುತ್‌ ಕರುಣಾರತ್ನೆ 147ಕ್ಕೆ ಔಟಾದರು. ಭರ್ತಿ 300 ಎಸೆತ ಎದುರಿಸಿದ ಲಂಕಾ ಕಪ್ತಾನ 15 ಬೌಂಡರಿ ಹೊಡೆದರು.

Advertisement

ಶೈ ಹೋಪ್‌ ಸೇರ್ಪಡೆ
ಮೊದಲ ದಿನ ಫೀಲ್ಡಿಂಗ್‌ ವೇಳೆ ತಲೆಗೆ ಚೆಂಡು ಬಡಿದು ಆಸ್ಪತ್ರೆ ಸೇರಿದ ವೆಸ್ಟ್‌ ಇಂಡೀಸ್‌ನ ಜೆರೆಮಿ ಸೊಲೊಝಾನ್‌ ಬದಲು ಶೈ ಹೋಪ್‌ ಅವರನ್ನು ಆಡುವ ಬಳಗಕ್ಕೆ ಸೇರಿಸಿಕೊಳ್ಳಲಾಗಿದೆ. ಹೋಪ್‌ ಹತ್ತೇ ರನ್ನಿಗೆ ಔಟಾದರು.

ಸಂಕ್ಷಿಪ್ತ ಸ್ಕೋರ್‌: ಶ್ರೀಲಂಕಾ-386 (ಕರುಣಾರತ್ನೆ 147, ಧನಂಜಯ ಡಿ ಸಿಲ್ವ 61, ದಿನೇಶ್‌ ಚಂಡಿಮಾಲ್‌ 45, ರೋಸ್ಟನ್‌ ಚೇಸ್‌ 83ಕ್ಕೆ 5, ವ್ಯಾರಿಕ್ಯಾನ್‌ 87ಕ್ಕೆ 3). ವೆಸ್ಟ್‌ ಇಂಡೀಸ್‌-6 ವಿಕೆಟಿಗೆ 113 (ಬ್ರಾತ್‌ವೇಟ್‌ 41, ಮೇಯರ್ ಬ್ಯಾಟಿಂಗ್‌ 22, ಬ್ಲ್ಯಾಕ್‌ವುಡ್‌ 20, ರಮೇಶ್‌ ಮೆಂಡಿಸ್‌ 23ಕ್ಕೆ 3, ಪ್ರವೀಣ್‌ ಜಯವಿಕ್ರಮ 25ಕ್ಕೆ 2).

Advertisement

Udayavani is now on Telegram. Click here to join our channel and stay updated with the latest news.

Next