Advertisement

ಪಶ್ಚಿಮ ಬಂಗಾಳ ಇನ್ನು ಬಾಂಗ್ಲಾ

06:00 AM Jul 27, 2018 | |

ಕೋಲ್ಕತಾ: ಪಶ್ಚಿಮ ಬಂಗಾಳ ರಾಜ್ಯದ ಹೆಸರನ್ನು “ಬಾಂಗ್ಲಾ’ ಎಂದು ಬದಲಿಸುವ ಪ್ರಸ್ತಾವನೆಗೆ ಅಲ್ಲಿನ ವಿಧಾನಸಭೆಯಲ್ಲಿ ಸರ್ವಪಕ್ಷಗಳ ಸಮ್ಮತಿ ದೊರಕಿದೆ. ಅದನ್ನು ಕೇಂದ್ರದ ಅನುಮತಿಗಾಗಿ ಕಳುಹಿಸಿಕೊಡಲಾಗಿದೆ.  1999ರಲ್ಲೇ ಆಗ ಪಶ್ಚಿಮ ಬಂಗಾಳವನ್ನು ಆಳುತ್ತಿದ್ದ ಎಡಪಕ್ಷ ರಾಜ್ಯದ ಹೆಸರು ಬದಲಿಸುವ ಪ್ರಸ್ತಾವನೆ ಮುಂದಿಟ್ಟಿತ್ತು. ಕಾರಣಾಂತರಗಳಿಂದ ಅದು ಕಾರ್ಯಗತ ವಾಗಿರಲಿಲ್ಲ. ಎರಡು ವರ್ಷಗಳ ಹಿಂದೆ, ಟಿಎಂಸಿ ಸರಕಾರ ಮೂರು ಭಾಷೆಗಳಲ್ಲಿ ರಾಜ್ಯ ಹೆಸರನ್ನು ಮೂರು ರೀತಿ ಸಂಬೋ ಧಿಸುವ ಪ್ರಸ್ತಾವನೆಯನ್ನು ಕೇಂದ್ರಕ್ಕೆ ಸಲ್ಲಿಸಿತ್ತು. 

Advertisement

ಬಂಗಾಳಿ ಭಾಷೆಯಲ್ಲಿ “ಬಾಂಗ್ಲಾ’ ಎಂದೂ, ಹಿಂದಿಯಲ್ಲಿ “ಬೆಂಗಾಲ್‌’ ಎಂದೂ, ಇಂಗ್ಲೀಷ್‌ನಲ್ಲಿ “ಬೆಂಗಾಲ್‌’ ಎಂದೂ ಸಂಬೋಧಿಸಬೇಕೆಂದು ಸಲ್ಲಿಸಲಾಗಿದ್ದು ಪ್ರಸ್ತಾವನೆಗೆ ಕೇಂದ್ರ ಅಸಮ್ಮತಿ ವ್ಯಕ್ತಪಡಿಸಿತ್ತಲ್ಲದೆ, ಒಂದೇ ಪದ ಸೂಚಿಸುವಂತೆ ಸಲಹೆ ನೀಡಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next