Advertisement

ಪಶ್ಚಿಮ ಬಂಗಾಲ ಪಂಚಾಯತ್‌ ಚುನಾವಣೆ:ಭಾರೀ ಹಿಂಸಾಚಾರ;6 ಬಲಿ

10:19 AM May 14, 2018 | |

ಕೋಲ್ಕತಾ: ಪಶ್ಚಿಮ ಬಂಗಾಲದಲ್ಲಿ ಪಂಚಾಯತ್‌ ಚುನಾವಣೆ ಸೋಮವಾರ ನಡೆಯುತ್ತಿದ್ದು  ವಿವಿಧೆಡೆ ಹಿಂಸಾಚಾರ ಸಂಭವಿಸಿದ್ದು ಸಾವು,ನೋವಿನ ಬಗ್ಗೆ ವರದಿಯಾಗಿದೆ. ಹಲವೆಡೆ ಹಿಂಸಾಚಾರ ಭುಗಿಲೆದ್ದಿದ್ದು ಘರ್ಷಣೆಯಲ್ಲಿ 6 ಮಂದಿ ಸಾವನ್ನಪ್ಪಿದ್ದಾರೆ.

Advertisement

ಹಲವೆಡೆ ಟಿಎಂಸಿ ಮತ್ತು ಸಿಪಿಐ(ಎಂ)ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದಿದ್ದು, ಹಲವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಸಿಪಿಐ ಕಾರ್ಯಕರ್ತನ ಮನೆ ಮೇಲೆ ದಾಳಿ ನಡೆಸಿ ಪತ್ನಿ ಮತ್ತು ಕಾರ್ಯಕರ್ತನನ್ನು ಹತ್ಯೆಗೈಯಲಾಗಿದೆ. 

ಕೂಚ್‌ ಬಿಹಾರ್‌ನಲ್ಲಿ ಭಾರಿ ಘರ್ಷಣೆಗಳು ನಡೆದಿದ್ದು 20ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. 

ಭಾರೀ ಭದ್ರತೆ ಏರ್ಪಡಿಸಿದ ಹೊರತಾಗಿಯೂ ಘರ್ಷಣೆ ನಡೆದಿವೆ. ಕೆಲವೆಡೆ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಮತದಾರರನ್ನು ಮಾರಕಾಯುಧಗಳನ್ನು ತೋರಿಸಿ ಬೆದರಿಸಲಾಗಿದೆ. 

ಮಾಧ್ಯಮಗಳನ್ನೂ ಗುರಿಯಾಗಿರಿಸಿಕೊಂಡು ಕಲ್ಲು ತೂರಾಟ ನಡೆಸಲಾಗಿದೆ. ಮತಗಟ್ಟೆಗಳ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ.

Advertisement

ಕಚ್‌ಛಾ ಬಾಂಬ್‌ ಸ್ಫೋಟಕ್ಕೆ ಬಿಜೆಪಿ ಅಭ್ಯರ್ಥಿ ಬಲಿಯಾಗಿರುವ ಬಗ್ಗೆ ವರದಿಯಾಗಿದೆ. ದುರ್ಗಾಪುರದಲ್ಲಿ ಬಿಜೆಪಿ ಮತ್ತು ಟಿಎಂಸಿ ಕಾರ್ಯಕರ್ತರ ನಡುವೆ ಭಾರಿ ಘರ್ಷಣೆ ನಡೆದಿದೆ. 

20 ಜಲ್ಲೆಗಳ 31,827 ಗ್ರಾಮ ಪಂಚಾಯತ್‌ಗಳು, 621 ಜಿಲ್ಲಾ ಪರಿಷದ್‌ಗಳು 6157 ಪಂಚಾಯತ್‌ ಸಮಿತಿಗಳಿಗೆ ಚುನಾವಣೆ ನಡೆಯುತ್ತಿದೆ. ಮುಂದಿನ ವರ್ಷದ ಲೋಕಸಭಾ ಚುನಾವಣೆಗೂ ಮುನ್ನ ನಡೆಯುತ್ತಿರುವ ಈ ಚುನಾವಣೆ ಮಹತ್ವ ಪಡೆದುಕೊಂಡಿದೆ. 

Advertisement

Udayavani is now on Telegram. Click here to join our channel and stay updated with the latest news.

Next