ಕೋಲ್ಕತಾ: ಪಶ್ಚಿಮಬಂಗಾಳದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಹಿಂಸಾಚಾರ ನಡೆದ ಪ್ರದೇಶಗಳಿಗೆ ಭೇಟಿ ನೀಡುವುದಾಗಿ ಗವರ್ನರ್ ಜಗದೀಪ್ ಧನ್ಕಾರ್ ಸೋಮವಾರ(ಮೇ 10) ತಿಳಿಸಿದ್ದು, ಇದು ತನ್ನ ಸಾಂವಿಧಾನಿಕ ಕರ್ತವ್ಯ ಎಂದು ಹೇಳಿದರು.
ಇದನ್ನೂ ಓದಿ:ಕರ್ತವ್ಯ ನಿರತ ಪೊಲೀಸ್ ಪೇದೆಯೊಬ್ಬರ ಪ್ರಾಣಿ ಪ್ರೀತಿಗೆ ಭಾರಿ ಮೆಚ್ಚುಗೆ..!
ಸಾಂವಿಧಾನಿಕ ಕರ್ತವ್ಯದ ಭಾಗವಾದ ಪರಿಣಾಮ ನಾನು ಹಿಂಸಾಚಾರ ನಡೆದಿದ್ದ ಸ್ಥಳಗಳಿಗೆ ಭೇಟಿ ನೀಡಲು ನಿರ್ಧರಿಸಿದ್ದೇನೆ. ಈ ಬಗ್ಗೆ ವ್ಯವಸ್ಥೆ ಮಾಡುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿರುವುದಾಗಿ ತಿಳಿಸಿದ್ದಾರೆ.
ದುರದೃಷ್ಟವಶಾತ್ ನನ್ನ ಸೂಚನೆಗೆ ರಾಜ್ಯ ಸರ್ಕಾರ ಸಮರ್ಪಕವಾಗಿ ಸ್ಪಂದಿಸಿಲ್ಲ. ಮುಂದಿನ ದಿನಗಳಲ್ಲಿ ನಾನು ನಿಗದಿತ ವೇಳೆಯಂತೆ ಸ್ವಯಂ ವ್ಯವಸ್ಥೆಯೊಂದಿಗೆ ಭೇಟಿ ನೀಡುತ್ತೇನೆ ಎಂದು ಗವರ್ನರ್ ಜಗದೀಪ್ ಹೇಳಿದರು.
ಚುನಾವಣೆ ಸಂದರ್ಭದಲ್ಲಿ ರಾಜ್ಯದಲ್ಲಿ ತೀವ್ರ ಬಿಕ್ಕಟ್ಟಿನ ಪರಿಸ್ಥಿತಿ ಇತ್ತು. ಪಶ್ಚಿಮಬಂಗಾಳದಲ್ಲಿ ಪ್ರತೀಕಾರದ ಹಿಂಸಾಚಾರ, ಬೆಂಕಿ ಹಚ್ಚುವುದು, ಲೂಟಿ ಹಾಗೂ ಸುಲಿಗೆಯಂತಹ ಘಟನೆ ನಡೆದಿತ್ತು ಎಂದು ಗವರ್ನರ್ ತಿಳಿಸಿದ್ದಾರೆ.