Advertisement

ಭಾರತದ ಕ್ರಿಕೆಟಿಗರಿಗೆ ವೆಸ್ಲಿ ಹಾಲ್‌ ಗಿಫ್ಟ್

11:52 PM Jun 19, 2024 | Team Udayavani |

ಬ್ರಿಜ್‌ಟೌನ್‌: ವೆಸ್ಟ್‌ ಇಂಡೀಸ್‌ ಕ್ರಿಕೆಟಿನ ಗತಕಾಲದ ಘಾತಕ ವೇಗಿ ವೆಸ್ಲಿ ಹಾಲ್‌, ಅಫ್ಘಾನಿಸ್ಥಾನ ವಿರುದ್ಧದ ಸೂಪರ್‌-8 ಪಂದ್ಯಕ್ಕೂ ಮುನ್ನ ಭಾರತೀಯ ಕ್ರಿಕೆಟಿಗರನ್ನು ಭೇಟಿಯಾಗಿ ತಮ್ಮ ಆತ್ಮಚರಿತ್ರೆ “ಆನ್ಸರಿಂಗ್‌ ದ ಕಾಲ್‌’ ಪುಸ್ತಕವನ್ನು ಉಡುಗೊರೆಯಾಗಿ ನೀಡಿದರು.

Advertisement

ಈ ಸಂದರ್ಭದಲ್ಲಿ ಮಾತಾಡಿದ 87 ವರ್ಷದ ವೆಸ್ಲಿ ಹಾಲ್‌, “ಇಂದು ನಾನು ಭಾರತದ ಮೂವರಿಗೆ ನನ್ನ ಆತ್ಮಚರಿತ್ರೆಯ ಪ್ರತಿಗಳನ್ನು ನೀಡಿದೆ. ರಾಹುಲ್‌ ದ್ರಾವಿಡ್‌, ವಿರಾಟ್‌ ಕೊಹ್ಲಿ ಮತ್ತು ರೋಹಿತ್‌ ಶರ್ಮ ಅವರನ್ನು ಭೇಟಿಯಾಗಿ ಈ ಪುಸ್ತಕ ಕೊಟ್ಟೆ. ಈ ಮೂವರೂ ಶ್ರೇಷ್ಠ ಕ್ರಿಕೆಟಿಗರು. ಭಾರತದ ಕ್ರಿಕೆಟಿಗೆ ಇವರ ಕೊಡುಗೆ ಅಪಾರ’ ಎಂದರು.

1958-1969ರ ಅವಧಿಯಲ್ಲಿ 48 ಟೆಸ್ಟ್‌ಗಳನ್ನಾಡಿರುವ ಹಾಲ್‌, 192 ವಿಕೆಟ್‌ ಉಡಾಯಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next