Advertisement

ಕಪ್ಪತಗುಡ್ಡ ಸಂರಕ್ಷಿತ ಪ್ರದೇಶ ಘೋಷಣೆಗೆ ಕೆಸಿಸಿಐ ಸ್ವಾಗತ

03:21 PM Apr 14, 2017 | Team Udayavani |

ಹುಬ್ಬಳ್ಳಿ: ರಾಜ್ಯಸರಕಾರ ಕಪ್ಪತಗುಡ್ಡವನ್ನು ಸಂರಕ್ಷಿತ ಅರಣ್ಯ ಪ್ರದೇಶವೆಂದು ಘೋಷಿಸಿರುವುದನ್ನು ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಸ್ವಾಗತಿಸಿದೆ. ಗದಗ ತೋಂಟದಾರ್ಯಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ಹಾಗೂ ನಾಡೋಜ ಪಾಟೀಲ ಪುಟ್ಟಪ್ಪ ಹಾಗೂ ವಿವಿಧ ಸಂಘ-ಸಂಸ್ಥೆಗಳವರು ಈ ಹೋರಾಟದಲ್ಲಿ ನಿರಂತರವಾಗಿ ಪಾಲ್ಗೊಂಡಿದ್ದರು.

Advertisement

ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ, ಬಸವರಾಜ ಹೊರಟ್ಟಿ,ಪ್ರಹ್ಲಾದ ಜೋಶಿ ಇನ್ನೂ ಅನೇಕ ಪ್ರಮುಖ ರಾಜಕೀಯ ಧುರೀಣರು ಪಕ್ಷಾತೀತವಾಗಿ ಪಾಲ್ಗೊಂಡಿದ್ದರು. ಮಠಾಧಿಧೀಶರು ಹಾಗೂ ಅಪಾರ ಜನ ಬೆಂಬಲದೊಂದಿಗೆ ಕಪ್ಪತಗುಡ್ಡವನ್ನು ಸಂರಕ್ಷಿತ ಅರಣ್ಯ ಪ್ರದೇಶವೆಂದು ಘೋಷಿಸಬೇಕೆಂದು  ಆಗ್ರಹಿಸಿ ನಡೆದ ಹೋರಾಟಕ್ಕೆ ಫ‌ಲ ಸಿಕ್ಕಿದೆ.

ಸಸ್ಯಕಾಶಿ ಕಪ್ಪತಗುಡ್ಡವನ್ನು ಮೀಸಲು ಅರಣ್ಯ ಪ್ರದೇಶವೆಂದು ಘೋಷಣೆ ಮಾಡಿ ಆದೇಶ ಹೊರಡಿಸಿ, ತಾವು ಜನತೆಗೆ ನೀಡಿದ ಮಾತನ್ನು ಸಿಎಂ ಸಿದ್ದರಾಮಯ್ಯ ಉಳಿಸಿಕೊಂಡಿದ್ದಾರೆ. ಪರಿಸರ ಹಾಗೂ ನಿಸರ್ಗದತ್ತ ಕೊಡುಗೆಯುಳ್ಳ ಔಷಧಿಧಿ ಸಸ್ಯಗಳಿರುವ ಕಪ್ಪತಗುಡ್ಡದ ಬಗ್ಗೆ ಇನ್ನೂ ಜನರಲ್ಲಿ ಹೆಚ್ಚಿನ ಜಾಗೃತಿ ಮೂಡಿಸಿ ಪರಿಸರ ಕಾಯ್ದುಕೊಳ್ಳಬೇಕು.

ಈ ಅರಣ್ಯ ಪ್ರದೇಶವನ್ನು ಸಮರ್ಪಕವಾಗಿ ಅಭಿವೃದ್ಧಿ ಪಡಿಸಬೇಕೆಂದು ಸಂಸ್ಥೆಯು ಮುಖ್ಯಮಂತ್ರಿಗಳನ್ನು ಒತ್ತಾಯಿಸಿತ್ತು ಎಂದು ಸಂಸ್ಥೆ ಅಧ್ಯಕ್ಷ ರಮೇಶ ಎ.ಪಾಟೀಲ, ಎಸ್‌.ಜಿ. ಕೆಮತೂರ, ಶಿವಶಂಕರಪ್ಪ ಮೂಗಬಸ್ತ, ಶರಣಬಸಯ್ಯ ಕದ್ರಳ್ಳಿಮಠ, ಸಿದ್ದೇಶ್ವರ ಜಿ.ಕಮ್ಮಾರ, ವಿನಯ ಜೆ.ಜವಳಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next