Advertisement
ಸುಮೋ ವಾಹನದಲ್ಲಿ ಕೇರಳ, ಹಾಸನ, ಚಿಕ್ಕಮಗಳೂರು ನಿವಾಸಿಗಳಾದ ಮಂಜು, ಸುಧೀಶ್, ಶಂಕರ್ ಸೇರಿದಂತೆ ಇನ್ನಿಬ್ಬರು ಇದ್ದು, ಎಲ್ಲರೂ ಯಾವುದೇ ಗಾಯಗಳಿಲ್ಲದೆ ಪವಾಡಸದೃಶವಾಗಿ ಪಾರಾಗಿದ್ದಾರೆ. ಸುಮೋ ವಾಹನದಲ್ಲಿದ್ದವರು ಎನ್ ಎಫ್ ಎಸ್ ಕಂಪೆನಿಯ ಕಾರ್ಮಿಕರಾಗಿದ್ದು, ಕುಂದಾಪುರದಲ್ಲಿ ಟೆಲಿಫೋನ್ ಕೇಬಲ್ ಕೆಲಸ ಮುಗಿಸಿ ಮಂಗಳೂರು ಕಡೆಗೆ ವಾಪಸ್ಸಾಗುತ್ತಿದ್ದಾಗ ಘಟನೆ ನಡೆದಿದೆ.
ಕಾರ್ಮಿಕರೆಲ್ಲರೂ ಕುಂದಾಪುರದಲ್ಲಿ ಕೇಬಲ್ ಎಳೆದು ಕೆಲಸ ಮುಗಿಸಿ ಮತ್ತೆ ರಾತ್ರಿ ಮಂಗಳೂರಿನಲ್ಲಿ ಕೆಲಸ ನಿರ್ವಹಿಸಲು ಬಂದಿದ್ದರು. ಆದರೆ ಹೊಸ ವರ್ಷಾಚರಣೆ ಸಂಭ್ರಮದಲ್ಲಿ ಅಡ್ಡಾದಿಡ್ಡಿ ಬೈಕನ್ನು ಚಲಾಯಿಸಿ ಕಾರ್ಮಿಕರ ಅಪಘಾತಕ್ಕೆ ಕಾರಣರಾಗಿದ್ದಾರೆ. ಕಾರ್ಮಿಕರು ಪ್ರಾಣ ಸಂಕಟಕ್ಕೆ ದುಡಿಯಲು ಬರುತ್ತಿದ್ದರೆ, ವರ್ಷಾಚರಣೆ ಹೆಸರಿನಲ್ಲಿ ಕುಡಿದು ಮೋಜು ಮಸ್ತಿ ನಡೆಸಿ ವಾಹನಕ್ಕೆ ಅಡ್ಡಬಂದ ಯುವಕರು ಬೆಕ್ಕಿನ ರೀತಿಯಲ್ಲಿ ವರ್ತಿಸಿ ಸ್ಥಳದಿಂದ ಕಾಲ್ಕಿತ್ತಿದ್ದಾರೆ ಅನ್ನುವುದು ಸಾರ್ವಜನಿಕರ ಆರೋಪ. ಮಂಗಳೂರು ಸಂಚಾರಿ ಮತ್ತು ಕದ್ರಿ ಪೊಲೀಸರು ಸ್ಥಳಕ್ಕಾಗಮಿಸಿ ವಾಹನಗಳ ನ್ನು ನಿಯಂತ್ರಿಸಿದರು. ರಾತ್ರೋರಾತ್ರಿ ಕ್ರೇನ್ ಮಾಲೀಕ ಹಾಗೂ ಆಪರೇಟರ್ ವಿವೇಕ್ ಅವರು ಕಾರನ್ನು ತೆರವುಗೊಳಿಸಿದ ಫಲವಾಗಿ, ರಾ.ಹೆ.ಯಲ್ಲಿ ಸುಗಮ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು. ಕಾರ್ಯಾಚರಣೆ ತಡವಾಗುತ್ತಿದ್ದರೆ ಹೊಸ ವರ್ಷಾಚರಣೆಯ ಗುಂಗಿನಲ್ಲಿ ಅಡ್ಡಾದಿಡ್ಡಿ ಚಲಿಸುವ ವಾಹನ ಸವಾರರು ರಸ್ತೆ ಮಧ್ಯೆ ಬಿದ್ದ ವಾಹನಕ್ಕೆ ಮತ್ತೆ ಢಿಕ್ಕಿ ಹೊಡೆದು ಅಪಘಾತಗಳು ಸಂಭವಿಸುತಿತ್ತು.
Related Articles
ನಗರದ ಪಿವಿಎಸ್ ಬಳಿ ಚಾಲಕನ ನಿಯಂತ್ರಣ ತಪ್ಪಿದ ಬೈಕ್ ಡಿವೈಡರ್ ಗೆ ಬಡಿದು ಸವಾರ ಗಂಭೀರ ಗಾಯಗೊಂಡಿರುವ ಘಟನೆಯೂ ನಡೆದಿದ್ದು, ಗಾಯಾಳುವನ್ನು ನಗರದ ಸಿಟಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಂಭೀರ ಗಾಯಗಳಾಗಿರುವಿದಾಗಿ ಸಂಚಾರಿ ಪೊಲೀಸರು ತಿಳಿಸಿದ್ದಾರೆ.
Advertisement