Advertisement

ಸಹಾಯಕ ಆಯುಕ್ತರ ಮುಂದೆ ಅಂಗವಿಕಲರ ಅಳಲು

04:58 PM May 11, 2022 | Team Udayavani |

ಲಿಂಗಸುಗೂರು: ಸರ್ಕಾರಿ ಆಸ್ಪತ್ರೆ, ಕಂದಾಯ ಅ ಧಿಕಾರಿಗಳು ಸೇರಿದಂತೆ ತಾಲೂಕಿನಲ್ಲಿ ಅಂಗವಿಕಲರಿಗೆ ನಿಯಮದಂತೆ ಸೌಲತ್ತುಗಳನ್ನು ನೀಡುತ್ತಿಲ್ಲ ಎಂದು ಸಹಾಯಕ ಆಯುಕ್ತರ ಕಚೇರಿಯಲ್ಲಿ ನಡೆದ ಅಂಗವಿಕಲರ ಕುಂದು-ಕೊರತೆ ಸಭೆಯಲ್ಲಿ ಅಂಗವಿಕಲರು ಎಸಿ ರಾಹುಲ್‌ ಸಂಕನೂರು ಮುಂದೆ ಅಳಲು ತೋಡಿಕೊಂಡರು.

Advertisement

ವೈದ್ಯರು ಅಂಗವಿಕಲತೆ ಪ್ರಮಾಣ ಪತ್ರ ನೀಡುವಾಗ ಅರ್ಹರಲ್ಲದವರಿಗೆ ಹಣ ಪಡೆದು ಅಂಗವಿಕಲತೆ ಪ್ರಮಾಣ ಪತ್ರ ನೀಡುತ್ತಾರೆ. ಅರ್ಹ ಅಂಗವಿಕಲರು ಹಣ ನೀಡದೇ ಇದ್ದಾಗ ವಿಕಲತೆ ಪ್ರಮಾಣ ಕಡಿಮೆ ತೋರಿಸುತ್ತಾರೆ. ಇದರ ಜೊತೆಗೆ ಕಂದಾಯ ಇಲಾಖೆ ಅಧಿಕಾರಿಗಳು ಮಾಸಾಶನ, ಪಂಚಾಯಿತಿ ವಸತಿ ಸೌಕರ್ಯ ಸಮರ್ಪಕವಾಗಿ ನೀಡುತ್ತಿಲ್ಲ ಎಂದು ಸಹಾಯಕ ಆಯುಕ್ತರ ಗಮನಕ್ಕೆ ತಂದರು.

ಈ ವೇಳೆ ಬಿಇಒ ಹುಂಬಣ್ಣ ರಾಠೊಡ, ಬಿಸಿಎಂ ಅಧಿ ಕಾರಿ ಮರಿಯಮ್ಮ, ಶಿಕ್ಷಣ ಇಲಾಖೆಯ ಎ.ಆರ್‌. ನದಾಫ್‌, ಸುರೇಶ ಬಂಡಾರಿ, ವಿರುಪಾಕ್ಷಯ್ಯ ಹಿರೇಮಠ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next