ಬೆಂಗಳೂರು: ಕೋವಿಡ್ 19 ಸೋಂಕು ಸರಪಣಿ ತಪ್ಪಿಸಲು ರಾಜ್ಯ ಸರ್ಕಾರ ವೀಕೆಂಡ್ ಕರ್ಫ್ಯೂ ಜಾರಿ ಮಾಡಿದ್ದು, ಶುಕ್ರವಾರ ರಾತ್ರಿಯಿಂದಲೇ ಇದು ಆರಂಭವಾಗಿದೆ. ಇಂದು ಬೆಳಗ್ಗೆ 10 ಗಂಟೆಯವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಲಾಗಿದೆ.
ಹಾಲು, ತರಕಾರಿ ಮುಂತಾದ ಅಗತ್ಯ ವಸ್ತುಗಳ ಖರೀದಿಗೆ ಬೆಳಗ್ಗೆ 10 ಗಂಟೆಯವರೆಗೆ ಅವಕಾಶ ನೀಡಲಾಗಿದೆ. ನಂತರ ಎಲ್ಲವೂ ಬಂದ್ ಆಗಿರಲಿದೆ.
ವಾರಾಂತ್ಯ ಕರ್ಫ್ಯೂ ವೇಳೆ ಅನಗತ್ಯ ಓಡಾಟಕ್ಕೆ ತಡೆ ಹಾಕಲಾಗಿದ್ದು, ಕೊರೊನಾ ಸಹಿತ ಆರೋಗ್ಯ ಸಂಬಂಧಿ ಸಮಸ್ಯೆಯಿಂದ ಆಸ್ಪತ್ರೆಗಳಲ್ಲಿ ದಾಖಲಾಗಿರುವವರ ಕುಟುಂಬ ಸದಸ್ಯರು ಸಂಬಂಧ ಪಟ್ಟ ದಾಖಲೆ ತೋರಿಸಿ ಓಡಾಡಬಹುದು. ಬಸ್ ಮತ್ತು ರೈಲು ಸಂಚಾರಕ್ಕೆ ಟಿಕೆಟ್ ತೋರಿಸಿ ಓಡಾಡಬಹುದು.
ಇದನ್ನೂ ಓದಿ:ಜನಪ್ರತಿನಿಧಿಗಳೇ, ನೀವೂ ಕೋವಿಡ್ ನಿಗ್ರಹದ ಸ್ವಯಂಸೇವಕರಾಗಿ…
ಹೋಟೆಲ್ ಗಳಲ್ಲಿ ಪಾರ್ಸೆಲ್ ನೀಡಲು ಅವಕಾಶ ನೀಡಲಾಗಿದೆ. ಹಲವು ಹೋಟೆಲ್ ಮಾಲಕರು ಬಂದ್ ಮಾಡಿದ್ದಾರೆ. ಹಲವರು ಮಿತಿಯಲ್ಲಿ ತಿಂಡಿಗಳನ್ನು ಮಾಡಿಟ್ಟು, ಗ್ರಾಹಕರಿಗೆ ಪಾರ್ಸೆಲ್ ನೀಡುತ್ತಿದ್ದಾರೆ.