Advertisement

ಹವಾಮಾನ-ಜಾಗತಿಕ ಇಂಧನ ನಿರ್ವಹಣೆ: ಮಣಿಪಾಲ ವಿ.ವಿ.ಗೆ “ಐಎಸ್‌ಒ 50001′

03:30 AM Jul 13, 2017 | Team Udayavani |

ಉಡುಪಿ: ಮಣಿಪಾಲ ವಿಶ್ವವಿದ್ಯಾನಿಯಲಯವು ಜಾಗತಿಕವಾಗಿ ಹವಾಮಾನ ಬದಲಾವಣೆಯ ಮಾನದಂಡಗಳಿಗೆ ಅನುಗುಣವಾಗಿ ಪರಿಣಾಮಕಾರಿಯಾಗಿ ಇಂಧನ ಬಲ,ಇಂಧನ ಉಪಯೋಗ, ನಿರ್ವಹಣೆ ದಕ್ಷತೆಯನ್ನು ಸಾಧಿಸಿದ ಕಾರಣ ಪ್ರಮಾಣಪತ್ರ ಐಎಸ್‌ಒ 50001 ಲಭ್ಯವಾಗಿದ್ದು, ಟಿಯುವಿ ರೇನ್‌ಲಾÂಂಡ್‌ ಪ್ರೈ.ಲಿ.ನ ವಲಯ ಪ್ರಬಂಧಕ ಬರ್ನ್ಡ್ ಹೇಗನ್‌ ಅವರು ಪ್ರಮಾಣ ಪತ್ರವನ್ನು ಬುಧವಾರ ಹಸ್ತಾಂತರಿಸಿದರು.

Advertisement

ಐಎಸ್‌ಒ 50001 ಮಾನದಂಡವನ್ನು ಮಣಿಪಾಲ ವಿವಿಯು ಯಶಸ್ವಿಯಾಗಿ ಅನುಷ್ಠಾನಿಸಿದೆ. ಪರಿಷ್ಕೃತ 9001, 14001 ಪ್ರಮಾಣಪತ್ರಗಳ ಮಾನದಂಡವನ್ನು ಕೂಡ ಪಾಲಿಸುವ ಮೂಲಕ ಗುಣಮಟ್ಟ ಸುಧಾರಣೆ, ಪರಿಸರ ನಿರ್ವಹಣೆಯನ್ನು ಹೆಚ್ಚಿಸಿದೆ ಎಂದು ಮಣಿಪಾಲ ವಿ.ವಿ. ಹೇಳಿದೆ.

ಐಎಸ್‌ಒ 9001 ಪ್ರಮಾಣ ಪತ್ರವನ್ನು ಮಣಿಪಾಲ ವಿವಿ ಸಹಕುಲಪತಿಗಳಾದ ಡಾ| ಪೂರ್ಣಿಮಾ ಬಾಳಿಗಾ ಮತ್ತು ಡಾ| ಜಿ.ಕೆ. ಪ್ರಭು ಅವರು ಸ್ವೀಕರಿಸಿದರು. ಐಎಸ್‌ಒ 14001 ಪ್ರಮಾಣ ಪತ್ರವನ್ನು ಕುಲಸಚಿವ ಡಾ| ನಾರಾಯಣ ಸಭಾಹಿತ್‌ ಅವರು ಮತ್ತು ಐಎಸ್‌ಒ 50001 ಪ್ರಮಾಣಪತ್ರವನ್ನು ಸಹಕುಲಾಧಿಪತಿ ಡಾ| ಎಚ್‌.ಎಸ್‌. ಬಲ್ಲಾಳ್‌ ಅವರು ಸ್ವೀಕರಿಸಿದರು. ಐಎಸ್‌ಒ 50001 ಪ್ರಮಾಣಪತ್ರ ಸ್ವೀಕರಿಸಿದ ಬಳಿಕ ಮಾತನಾಡಿದ ಡಾ| ಎಚ್‌.ಎಸ್‌. ಬಲ್ಲಾಳ್‌, ಮಣಿಪಾಲ ವಿವಿ ಪರಿಸರದ ಮೇಲೆ ದುಷ್ಪರಿಣಾಮಗಳು ಬೀರದಂತೆ ಗರಿಷ್ಠ ಕಾಳಜಿಯನ್ನು ವಹಿಸಿಕೊಳ್ಳುತ್ತಲಿದೆ. ಶಿಕ್ಷಣ, ಆರೋಗ್ಯದಂತೆಯೇ ಸಮಾನ ಆದ್ಯತೆ ಪರಿಸರಕ್ಕೂ ನೀಡುತ್ತಿದ್ದೇವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next