Advertisement
ಅಷ್ಟೇ ಅಲ್ಲದೆ 68 ಸದಸ್ಯ ಬಲದ ಹಿಮಾಚಲ ಪ್ರದೇಶ ವಿಧಾನಸಭೆಯಲ್ಲಿ ಕಾಂಗ್ರೆಸ್ 39 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸುವ ಮೂಲಕ ಸ್ಪಷ್ಟ ಬಹುಮತ ಪಡೆಯುವ ಹಂತದಲ್ಲಿದೆ, ಒಂದು ವೇಳೆ ಸ್ಪಷ್ಟ ಬಹುಮತ ಪಡೆದು ಅಧಿಕಾರಕ್ಕೆ ಬಂದರೆ ಮುಂದಿನ ಮುಖ್ಯಮಂತ್ರಿ ಯಾರಾಗಲಿದ್ದಾರೆ ಎಂಬ ಕುತೂಹಲವು ಮನೆಮಾಡಿದೆ.
Related Articles
ವೀರಭದ್ರ ಸಿಂಗ್ ಅವರ ಪತ್ನಿ ಪ್ರತಿಭಾ ಸಿಂಗ್ ಮುಖ್ಯಮಂತ್ರಿ ಆಕಾಂಕ್ಷಿಯಾಗಿದ್ದು ಅವರ ಹೆಸರೂ ಮುಂಚೂಣಿಯಲ್ಲಿದೆ ಈ ಕುರಿತು ಹೇಳಿಕೆ ನೀಡಿದ ಅವರು ಪಕ್ಷ ಯಾವ ನಿರ್ಧಾರ ಕೈಗೊಳ್ಳುತ್ತದೋ ಅದಕ್ಕೆ ಬದ್ಧನಾಗಿದ್ದೇನೆ ಎಂದು ಹೇಳಿದ್ದಾರೆ.
Advertisement
ಇದಲ್ಲದೆ ಸುಖ್ವಿಂದರ್ ಸಿಂಗ್ ಸುಖು, ಮುಖೇಶ್ ಅಗ್ನಿಹೋತ್ರಿ, ಠಾಕೂರ್ ಕೌಲ್ ಸಿಂಗ್, ಆಶಾ ಕುಮಾರಿ ಹೆಸರೂ ಕೂಡ ಮುಂಚೂಣಿಯಲ್ಲಿದೆ. ಇದರ ನಡುವೆ ಬಿಜೆಪಿಯ ಆಪರೇಷನ್ ಕಮಲದ ಭೀತಿ ಕಾಂಗ್ರೆಸ್ ಪಕ್ಷದ ನಾಯಕರಿಗೆ ಎದುರಾಗಿದ್ದು ಫಲಿತಾಂಶದಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತ ಪಡೆದು ಜಯಭೇರಿ ಸಾಧಿಸಿದರೆ ಬಿಜೆಪಿಗೆ ಏನು ಮಾಡಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್ ಹೇಳಿದೆ.
ಇದನ್ನೂ ಓದಿ: ಬೇಲ್‌ಗೆ ನೆರವಾಗದ್ದಕ್ಕೆ ವಕೀಲರ ಟಾರ್ಗೆಟ್; ಜೈಲಿನಲ್ಲಿದ್ದ ವೇಳೆ ಜಾಮೀನು ನೀಡಲು ಸಹಕರಿಸದ್ದಕ್ಕೆ ಪ್ರತೀಕಾರ