ಗಾಂಧಿನಗರ: 2033-34ರ ವೇಳೆಗೆ ಜಾಗತಿಕ ಹಾಲು ಉತ್ಪಾದನೆಯಲ್ಲಿ ಭಾರತವು 330 ಮಿಲಿಯನ್ ಮೆಟ್ರಿಕ್ ಟನ್ (ಎಂಎಂಟಿ) ಅಥವಾ ಶೇಕಡಾ 33 ರಷ್ಟು ಕೊಡುಗೆ ನೀಡುವ ಗುರಿಯನ್ನು ಹೊಂದಬೇಕು ಎಂದು ಕೇಂದ್ರ ಸಹಕಾರ ಸಚಿವ ಅಮಿತ್ ಶಾ ಶನಿವಾರ ಹೇಳಿದ್ದಾರೆ.
49ನೇ ಡೈರಿ ಉದ್ಯಮ ಸಮ್ಮೇಳನದಲ್ಲಿ ಮಾತನಾಡಿದ ಅವರು , ಇದನ್ನು ಸಾಧಿಸಲು ಕೇಂದ್ರ ಮತ್ತು ರಾಜ್ಯ ಸರಕಾರಗಳು ಹಾಗೂ ಸಹಕಾರಿ ಸಂಸ್ಥೆಗಳು ಒಟ್ಟಾಗಿ ಕೆಲಸ ಮಾಡಬೇಕು. ಸಾಮೂಹಿಕ ಉತ್ಪಾದನೆಯನ್ನು ಉಳಿಸಿಕೊಂಡು ನಾವು ಜನಸಾಮಾನ್ಯರಿಂದ ಉತ್ಪಾದನೆಯನ್ನು ನೆಲದ ವಾಸ್ತವವಾಗಿಸಬೇಕು ಎಂದರು.
“2033-34ರ ವೇಳೆಗೆ ವಿಶ್ವದ ಹಾಲಿನ (ಉತ್ಪಾದನೆ) 330 ಎಂಎಂಟಿ ಅಥವಾ ಶೇಕಡಾ 33 ರಷ್ಟು ಉತ್ಪಾದಿಸುವ ಗುರಿಯೊಂದಿಗೆ ನಾವು ಮುಂದುವರಿಯಬೇಕಾಗಿದೆ. ಎರಡು ಲಕ್ಷ ಹೊಸ ಪ್ರಾಥಮಿಕ ಹಾಲು ಉತ್ಪಾದಕ ಸಮಿತಿಗಳನ್ನು (ಪಂಚಾಯತ್ ಮಟ್ಟದಲ್ಲಿ) ರಚಿಸಿದರೆ, ನಂತರ ಮುಂಬರುವ ವರ್ಷಗಳಲ್ಲಿ, ಜಾಗತಿಕ ಹಾಲು ಉತ್ಪಾದನೆಯಲ್ಲಿ 33 ಪ್ರತಿಶತದಷ್ಟು ಕೊಡುಗೆ ನೀಡುವ ಸಾಮರ್ಥ್ಯವನ್ನು ಭಾರತ ಹೊಂದಿದೆ,ಈ ಸಾಧ್ಯತೆಯನ್ನು ಅನ್ವೇಷಿಸುವ ಅಗತ್ಯಕ್ಕೆ ಶಾ ಕರೆ ನೀಡಿದರು.
ಮೋದಿ ಸರಕಾರ ಹೈನುಗಾರಿಕೆ ಕ್ಷೇತ್ರದ 360 ಡಿಗ್ರಿ ಅಭಿವೃದ್ಧಿಗೆ ಶ್ರಮಿಸುತ್ತಿದೆ.ಭಾರತೀಯ ಡೈರಿ ಅಸೋಸಿಯೇಷನ್ ಭಾರತದ ಡೈರಿ ಉದ್ಯಮವನ್ನು ಬಲಪಡಿಸುವಲ್ಲಿ ಮತ್ತು ಕ್ಷೇತ್ರದ ಒಟ್ಟಾರೆ ಅಭಿವೃದ್ಧಿಯಲ್ಲಿ ಮಹತ್ವದ ಕೊಡುಗೆ ನೀಡುತ್ತಿದೆ. ಭಾರತದಲ್ಲಿನ ಡೈರಿ ಉದ್ಯಮವು ಉದ್ಯೋಗವನ್ನು ಒದಗಿಸುವಲ್ಲಿ ಮತ್ತು ಗ್ರಾಮೀಣ ಆರ್ಥಿಕತೆಯನ್ನು ಬಲಪಡಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಿದೆ ಜೊತೆಗೆ ಅಪೌಷ್ಟಿಕತೆ ಮತ್ತು ಮಹಿಳಾ ಸಬಲೀಕರಣದ ಸಮಸ್ಯೆಗಳನ್ನು ಪರಿಹರಿಸುತ್ತದೆ ಎಂದರು.