Advertisement

ಅಪ್ಪಾಜಿ ಅಪ್ಪಾಜಿ ಅಂದ್ಕೋತಾ ಅಡ್ಡಾಡಬೇಕು: ಯತ್ನಾಳ್ ಟೀಕಾಸ್ತ್ರಕ್ಕೆ ಯಾರು ಗುರಿ?

07:35 PM Mar 30, 2022 | Team Udayavani |

ಬೆಂಗಳೂರು : ರಾಜಕೀಯದಲ್ಲಿ ಮಹತ್ವದ ಹುದ್ದೆ ಸಿಗಬೇಕಾದರೆ ನಾವು  ಹೊಗಳು ಭಟರಾಗಬೇಕು.ಅಪ್ಪಾಜಿ ಅಪ್ಪಾಜಿ ಎಂದರಷ್ಟೇ ಸ್ಥಾನಮಾನ ಸಿಗುತ್ತದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿಧಾನಸಭೆಯಲ್ಲಿ ಬುಧವಾರ ವಾಗ್ಬಾಣ ಎಸೆದಿದ್ದಾರೆ.

Advertisement

ಚುನಾವಣಾ ಸುಧಾರಣೆಯ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ” ಅಪ್ಪಾಜಿ, ಅಪ್ಪಾಜಿ ಅಂದ್ಕೋತಾ ಅಡ್ಡಾಡಬೇಕು ” ಎಂಬ ಶಬ್ದವನ್ನು ಒತ್ತಿ ಹೇಳಿದ್ದು ಯಾರನ್ನು ಉದ್ದೇಶಿಸಿ ಎಂಬ ಚರ್ಚೆ ಈಗ ಪ್ರಾರಂಭವಾಗಿದೆ.

ಈ ಪಕ್ಷವಾದರೂ ಒಂದೇ ಆ ಪಕ್ಷವಾದರೂ ಒಂದೆ ಒಟ್ಟಾರೆಯಾಗಿ ರಾಜಕೀಯ ಹದೆಗೆಟ್ಟು ಹೈದರಾಬಾದ್ ಆಗಿದೆ ಎಂದು ಅವರು ವ್ಯಂಗ್ಯವಾಡಿದಾಗ, ” ನೀವು ಯಾರಿಗೆ ಅಪ್ಪಾಜಿ ಎನ್ನುತ್ತಿದ್ದೀರಿ ? ” ಎಂದು ರಮೇಶ್ ಕುಮಾರ್ ಕಾಲೆಳೆದರು. ನಾನು ಜೀವನದಲ್ಲಿ ನನ್ನ ಅಪ್ಪನ ಬಿಟ್ಟರೆ ಬೇರೆ ಯಾರಿಗೂ ಅಪ್ಪಾಜಿ ಅಂದ ಮಗ ಅಲ್ಲ ಎಂದು ಯತ್ನಾಳ್ ತಿರುಗೇಟು ನೀಡಿದರು.

ಪ್ರಜಾಪ್ರಭುತ್ವದ ಎಲ್ಲ ಅಂಗಗಳ ಬಗ್ಗೆಯೂ ನಾವು ಮಾತನಾಡಬೇಕಾಗುತ್ತದೆ. ರಾಜಾಹುಲಿ, ಮರಿಹುಲಿ ಇತ್ಯಾದಿ ಬಿರುದುಗಳನ್ನು ನೀಡಿ ಮಾಧ್ಯಮಗಳು ಪ್ರಕಟಿಸುವ ವರದಿಗಳತ್ತಲೂ ಅನುಮಾನದಿಂದ ನೋಡುವಂತಾಗಿದೆ. ಬದಲಾವಣೆ ಎಲ್ಲ ಕ್ಷೇತ್ರಗಳಲ್ಲೂ ಆಗಬೇಕು. ನಮ್ಮ ಪಕ್ಷದಲ್ಲಿರುವ ಮಾಜಿ ಮುಖ್ಯಮಂತ್ರಿಗಳನ್ನು ಸ್ಪೀಕರ್ ಸ್ಥಾನದಲ್ಲಿ ಕುಳ್ಳಿರಿಸಿ ಕಾಗೇರಿಯವರನ್ನು ಮಂತ್ರಿ ಮಾಡಬೇಕು ಎಂದು ಹೇಳಿದಾಗ ಸದನ ನಗೆಗಡಲಲ್ಲಿ ಮುಳುಗಿತು.

Advertisement

Udayavani is now on Telegram. Click here to join our channel and stay updated with the latest news.

Next