Advertisement

ನಮಗಿನ್ನು ಆಗಸದಲ್ಲೇ ವಿಮಾನಕ್ಕೆ ತೈಲ ಪೂರೈಕೆ ಸಾಧ್ಯ

12:29 PM Sep 11, 2018 | Team Udayavani |

ಬೆಂಗಳೂರು: ದೇಶದ ಹಗುರ ಯುದ್ಧ ವಿಮಾನ ತೇಜಸ್‌ ಇದೇ ಮೊದಲ ಬಾರಿಗೆ ಹಾರಾಟದ ನಡುವೆಯೇ ಯಶಸ್ವಿಯಾಗಿ ಇಂಧನ ಪೂರೈಕೆ ಮಾಡಿಕೊಂಡಿದೆ. ಸೋಮವಾರ ಇಂಥ ಯಶಸ್ವಿ ಕಾರ್ಯಾಚರಣೆ ನಡೆಸಲಾಗಿದೆ. ಇದರಿಂದಾಗಿ ಇಂಥ ಸಾಧನೆ ಮಾಡುವ ಸಾಮರ್ಥ್ಯ ಇರುವ ಕೆಲವೇ ಕೆಲವು ದೇಶಗಳ ಸಾಲಿಗೆ ಭಾರತ ಸೇರಿದಂತಾಗಿದೆ.

Advertisement

ಈ ಸಾಹಸದ ಬಗ್ಗೆ ಹಿಂದುಸ್ತಾನ್‌ ಏರೋನಾಟಿಕ್ಸ್‌ ಲಿಮಿಟೆಡ್‌ (ಎಚ್‌ಎಎಲ್‌) ಮಾಹಿತಿ ನೀಡಿದೆ. ಬೆಳಗ್ಗೆ 9.30ಕ್ಕೆ 20 ಸಾವಿರ ಅಡಿ ಎತ್ತರ ಪ್ರದೇಶದಲ್ಲಿ 1,900 ಕೆಜಿ ಇಂಧನವನ್ನು ಐಎಎಫ್ನ ಐಎಲ್‌78 ವಿಮಾನ, ತೇಜಸ್‌ ಎಲ್‌ಎಸ್‌ಪಿ 8 ವಿಮಾನಕ್ಕೆ ಯಶಸ್ವಿಯಾಗಿ ಪೂರೈಕೆ ಮಾಡಲಾಗಿದೆ. ಅದಕ್ಕಾಗಿ ಹಲವಾರು ಪರೀಕ್ಷಾ ದಿನಾಂಕಗಳನ್ನು ನಿಗದಿ ಮಾಡಲಾಗಿದ್ದರೂ, ಆ ಸಂದರ್ಭದಲ್ಲಿ ಪರೀಕ್ಷೆ ನಡೆಸಲು ಸಾಧ್ಯವಾಗಿರಲಿಲ್ಲ. 

ರಷ್ಯಾ ನಿರ್ಮಿತ ಐಎಲ್‌-78 ಎಂಕೆಐ ಟ್ಯಾಂಕರ್‌ ಬಳಕೆ ಮಾಡಿಕೊಂಡು ತೇಜಸ್‌ಗೆ ಇಂಧನ ಪೂರೈಕೆ ಮಾಡಲಾಗುತ್ತದೆಯೇ ಎಂಬುದನ್ನು ಕರಾರುವಾಕ್ಕಾಗಿ ಪರಿಶೀಲನೆ ನಡೆಸಿದ ಬಳಿಕವೇ ಈ ಸಾಧನೆ ಮಾಡಲಾಗಿದೆ. ಸೆ.4 ಮತ್ತು 6ರಂದು ಈ ಪರೀಕ್ಷೆ ನಡೆಸಲಾಗಿತ್ತು. 

ಐಎಎಫ್ನ ಐಎಲ್‌ 78 ವಿಮಾನವನ್ನು ಪೈಲಟ್‌ ವಿಂಗ್‌ ಕಮಾಂಡರ್‌ ಸಿದ್ಧಾರ್ಥ್ ಸಿಂಗ್‌ ಚಾಲನೆ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ವಿಮಾನ ಗಂಟೆಗೆ 270 ನಾಟ್‌ಗಳಷ್ಟು ವೇಗದಲ್ಲಿ ಹಾರಾಟ ನಡೆಸುತ್ತಿತ್ತು. ಎಚ್‌ಎಎಲ್‌ ಮತ್ತು ಏರೋನಾಟಿಕಲ್‌ ಡೆವಲಪ್‌ಮೆಂಟ್‌ ಏಜೆನ್ಸಿ (ಎಡಿಎ) ಐಎಎಫ್ ಐಎಲ್‌78ನ್ನು ವಿನ್ಯಾಸಗೊಳಿಸಿತ್ತು. ಗ್ವಾಲಿಯರ್‌ನಲ್ಲಿರುವ ನಿಯಂತ್ರಣ ಕೇಂದ್ರದಿಂದ ಆಗಸದಲ್ಲಿ ತೈಲ ಪೂರೈಕೆ ಮಾಡುವ ಪ್ರಕ್ರಿಯೆಯನ್ನು ಗಮನಿಸಲಾಗುತ್ತಿತ್ತು. 

ಇದೊಂದು ಐತಿಹಾಸಿಕ ಸಾಧನೆ ಮತ್ತು ಆಗಸದಲ್ಲಿಯೇ (ಏರ್‌ ಟು ಏರ್‌) ಇಂಧನ ತುಂಬಿಸುವ ಕಾರ್ಯಾಚರಣೆ ಯಶಸ್ವಿಯಾಗಿ ಮುಕ್ತಾಯವಾಗಿದೆ. ಸೇನಾ ವಿಮಾನಗಳಿಗೆ ಸಂಬಂಧಿಸಿದ ಈ ಕೆಲಸ ಮುಕ್ತಾಯವಾಗಿದೆ ಎಂದು ಹಿಂದುಸ್ತಾನ್‌ ಏರೋನಾಟಿಕ್ಸ್‌ ಲಿಮಿಟೆಡ್‌ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಆರ್‌.ಮಾಧವನ್‌ ಶ್ಲಾ ಸಿದ್ದಾರೆ. 

Advertisement

ಮೂರು ತಿಂಗಳ ಹಿಂದಷ್ಟೇ ಬಿಯಾಂಡ್‌ ವಿಷ್ಯುವಲ್‌ ರೇಂಜ್‌ ಮಿಸೈಲ್‌ ಅನ್ನು ಯಶಸ್ವಿಯಾಗಿ ಪರೀಕ್ಷೆ ನಡೆಸಲಾಗಿತ್ತು. ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಇಂಥ ಸಾಧನೆ ಮಾಡಿದ್ದಕ್ಕೆ ಐಎಎಫ್ ಮತ್ತು ಎಚ್‌ಎಎಲ್‌ ಅನ್ನು ಅಭಿನಂಧಿಸಿದ್ದಾರೆ. ಕಳೆದ ಡಿಸೆಂಬರ್‌ನಲ್ಲಿ ಭಾರತೀಯ ವಾಯುಯಾನ ಸಂಸ್ಥೆ 40 ತೇಜಸ್‌ ಮಾರ್ಕ್‌-1 ವಿಮಾನಗಳನ್ನು 50 ಸಾವಿರ ಕೋಟಿ ರೂ. ವೆಚ್ಚದಲ್ಲಿ ಪೂರೈಕೆ ಮಾಡುವಂತೆ ಎಚ್‌ಎಎಲ್‌ಗೆ ಮನವಿ ಮಾಡಿತ್ತು ಐಎಎಫ್.

* 1,900 ಕೆಜಿ- ಇಂಧನ ಪ್ರಮಾಣ
* 20,000 ಅಡಿ- ನೆಲ ಮಟ್ಟದಿಂದ ಇಷ್ಟು ಎತ್ತರದಲ್ಲಿ ಹಾರಾಟ
* 9.30- ಇಂಧನ ಮರು ಪೂರೈಕೆ ನಡೆದ ಸಮಯ
* 270 ನಾಟ್ಸ್‌- ವಿಮಾನ ಹಾರಾಟ ನಡೆಸುತ್ತಿದ್ದ ವೇಗ
* 09- ಐಎಎಫ್ ಸದ್ಯ ಹೊಂದಿರುವ ತೇಜಸ್‌ ವಿಮಾನಗಳ ಸಂಖ್ಯೆ
* 83- ಐಎಎಫ್ ಖರೀದಿಸಲು ಉದ್ದೇಶಿಸಿರುವ ತೇಜಸ್‌ ವಿಮಾನ
* 50,000 ಕೋಟಿ ರೂ.- ಅದರ ವೆಚ್ಚ

Advertisement

Udayavani is now on Telegram. Click here to join our channel and stay updated with the latest news.

Next