Advertisement

ಬಿಜೆಪಿಗೆ ಬರಲು ಸಿದ್ಧರಿದ್ದೇವೆ, ಹಿಂದಿನಂತೆ ಕಡೆಗಣಿಸಬೇಡಿ

10:17 PM Oct 25, 2019 | Team Udayavani |

ಹುಣಸೂರು: ಮಾಜಿ ಸಂಸದ, ಮಾಜಿ ಸಚಿವ ಸಿ.ಎಚ್‌.ವಿಜಯಶಂಕರ್‌ ನಿವಾಸದಲ್ಲಿ ಅಭಿಮಾನಿಗಳ ಸಭೆಯಲ್ಲಿ ಮರಳಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಳ್ಳವ ಜೊತೆಗೆ ಇನ್ನು ಮುಂದಾದರೂ ಹಿಂಬಾಲಕರನ್ನು ಗಣನೆಗೆ ತೆಗೆದುಕೊಳ್ಳುವಂತೆ ಅಭಿಮಾನಿಗಳು ಸಲಹೆ ನೀಡಿದರು.

Advertisement

ನಗರದ ತಮ್ಮ ನಿವಾಸದಲ್ಲಿ ಅಭಿಮಾನಿಗಳ ಸಭೆಯಲ್ಲಿ ಮಾತನಾಡಿದ ನಗರಸಭಾ ಮಾಜಿ ಸದಸ್ಯ ಸತೀಶ್‌ ಕುಮಾರ್‌, ಮುಖಂಡರಾದ ಎ.ಪಿ.ಸ್ವಾಮಿ, ಗಣೇಶ್‌ ಕುಮಾರಸ್ವಾಮಿ, ವಕೀಲ ಸ್ವಾಮಿಗೌಡ, ರಮೇಶ್‌, ಶಂಕರ್‌, ರಾಮಸ್ವಾಮಿ ಮತ್ತಿತರರು, ಬಿಜೆಪಿಗಾಗಿ ನೀವು ದುಡಿದಿದ್ದೀರಿ.

ನಿಮಗೂ ಬಿಜೆಪಿ ಉತ್ತಮ ಗೌರವವನ್ನೇ ನೀಡಿದೆ. ಇದೀಗ ಮತ್ತೆ ನೀವು ಬಿಜೆಪಿಗೆ ಹೋದರೆ ನಿಮ್ಮ ಹಿಂದೆ ನಾವೂ ಬರುತ್ತೇವೆ. ಆದರೆ, ಈ ಹಿಂದೆ ಕಾರ್ಯಕರ್ತರು, ಅಭಿಮಾನಿಗಳನ್ನು ಮರೆತ್ತಿದ್ದರಿಂದಾಗಿ ಹಿನ್ನಡೆಯಾಗಿದೆ. ಮುಂದೆ ಎಲ್ಲರನ್ನೂ ಒಗ್ಗೂಡಿಸಿಕೊಂಡು ಕರೆದುಕೊಂಡು ಹೋಗಿ ಎಂದು ಸಲಹೆ ನೀಡಿದರು.

ಬಿಜೆಪಿ ತೊರೆದಿದ್ದು ತಪ್ಪು: ಕುರುಬರ ಸಂಘದ ತಾಲೂಕು ಅಧ್ಯಕ್ಷ ಡಿ.ಕೆ.ಕುನ್ನೇಗೌಡ ಮಾತನಾಡಿ, ಬಿಜೆಪಿ ತೊರೆದಿದ್ದು ತಪ್ಪಾಗಿದೆ. ಮುಂದೆ ಇಂತಹ ತಪ್ಪು ಆಗದಂತೆ ಎಚ್ಚರವಹಿಸಿ. ತಾಲೂಕಿನಲ್ಲಿ ನಿಮಗೆ ನಿಮ್ಮದೇ ಆದ ಅಭಿಮಾನಿಗಳಿದ್ದಾರೆ. ಸಮುದಾಯ ಕೂಡ ನಿಮ್ಮ ಬೆನ್ನಿಗಿದೆ. ನಿಮ್ಮ ಸರಳತೆ, ಎಲ್ಲರನ್ನು ಒಂದಾಗಿ ಕರೆದುಕೊಂಡು ಹೋಗುವ ಗುಣವೇ ನಿಮ್ಮನ್ನು ಕಾಪಾಡಲಿದೆ ಎಂದರು. ವೀರಪ್ಪ ಮಾತನಾಡಿ, ಅಭಿಮಾನಿಗಳ, ಕಾರ್ಯಕರ್ತರ ಮಾತು ಕೇಳಿ. ಆದರೆ, ಹಿತ್ತಾಳೆ ಕಿವಿ ಆಗಬೇಡಿ ಎಂದು ಕಿವಿಮಾತು ಹೇಳಿದರು.

ಸತತ ಸೋಲಿನಿಂದ ಕುಗ್ಗಿದ್ದೇನೆ: ನಂತರ ವಿಜಯಶಂಕರ್‌ ಮಾತನಾಡಿ, ಹಿಂದಿನ ಮೂರು ಲೋಕಸಭಾ ಚುನಾವಣೆಯ ಸತತ ಸೋಲಿನಿಂದ ಮಾನಸಿಕವಾಗಿ ಕುಗ್ಗಿಹೋಗಿದ್ದೆ, ಈ ವೇಳೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆಶ್ವಾಸನೆಯನ್ನು ನಂಬಿ ಕಾಂಗ್ರೆಸ್‌ ಪಕ್ಷ ಸೇರಿದೆ. ಪಕ್ಷ ಸೇರ್ಪಡೆಗೆ ಕೆಪಿಸಿಸಿ ಕಚೇರಿಗೆ ಹೋಗಿದ್ದೆ. ನಂತರ ಇಂದುವರೆಗೂ ಆ ಕಚೇರಿಗೆ ಕಾಲಿಟ್ಟಿಲ್ಲ. ಸಭೆಗಳಿಗೆ ಆಹ್ವಾನಿಸಲೂ ಇಲ್ಲ, ಸಿದ್ದರಾಮಯ್ಯ ಟಿಕೆಟ್‌ ಕೊಡಿಸಿದರೂ ಮೈತ್ರಿ ಸರ್ಕಾರದ ಮೈತ್ರಿ ನಿಯಮ ಪಾಲನೆಯಾಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

Advertisement

ಬಿಜೆಪಿಯಿಂದ ಆಹ್ವಾನ: ಈ ನಡುವೆ ಲೋಕಸಭಾ ಚುನಾವಣೆ ಸೋತ ನಂತರ ಬಿಜೆಪಿ ಪಕ್ಷದ ವರಿಷ್ಠಮಟ್ಟದ ನಾಯಕರಿಂದ ಪಕ್ಷಕ್ಕೆ ಮರಳು ಬರಲು ಆಹ್ವಾನ ನೀಡುತ್ತಿದ್ದಾರೆ. ರಾಜಕೀಯದಲ್ಲಿ ಇಂತಹ ಸ್ಥಿತ್ಯಂತರ ಸಹಜ. ಪಕ್ಷಕ್ಕಾಗಿ ದುಡಿದಿದ್ದೀರಿ. ಮರಳಿ ಬರುವುದಾದರೆ ಸ್ವಾಗತ ಎಂದಿದ್ದಾರೆ. ಇಲ್ಲಿ ನನ್ನ ಅಭಿಮಾನಿಗಳು ಬಿಜೆಪಿ ಸೇರುವುದೇ ಒಳಿತು ಎನ್ನುವ ಮಾತುಗಳನ್ನಾಡಿದ್ದಾರೆ.

ಹಾಗಾಗಿ ಬಿಜೆಪಿ ಪಕ್ಷದ ವರಿಷ್ಠರ ಜೊತೆ ಅವರು ನೀಡಿರುವ ಆಹ್ವಾನದ ಕುರಿತು ಶೀಘ್ರ ಚರ್ಚಿಸಿ, ಸೂಕ್ತ ನಿರ್ಣಯ ಪ್ರಕಟಿಸಲಿದ್ದೇನೆ ಎಂದು ತಿಳಿಸಿದರು. ಸಭೆಯಲ್ಲಿ ಮುಖಂಡರಾದ ಪ್ರಕಾಶ್‌, ಗೋವಿಂದಾಚಾರಿ, ಕಮಲಮ್ಮ, ಶಂಕರ್‌, ಕುನ್ನಯ್ಯ, ವಾಸೇಗೌಡ, ಶೀರೇನಹಳ್ಳಿಬಸವರಾಜು, ಪುಟ್ಟಸುಬ್ಬೇಗೌಡ, ರಾಮಕೃಷ್ಣ ಸೇರಿದಂತೆ ‌ನೂರಕ್ಕೂ ಹೆಚ್ಚು ಅಭಿಮಾನಿಗಳು ಭಾಗವಹಿಸಿದ್ದರು.

ಕಾಂಗ್ರೆಸ್‌ನಲ್ಲಿ ಮೂಲ, ವಲಸೆ ಪ್ರತ್ಯೇಕ ಬಣ: ಕಾಂಗ್ರೆಸ್‌ ಪಕ್ಷದಲ್ಲಿ ಮೂಲ-ವಲಸೆ ಎಂಬ ಪ್ರತ್ಯೇಕ ಬಣದಿಂದಾಗಿ 5 ವರ್ಷ ಮುಖ್ಯಮಂತ್ರಿಯಾಗಿ ಆಡಳಿತ ನಡಸಿದ ಸಿದ್ದರಾಮಯ್ಯ ಅವರನ್ನೇ ವಲಸಿಗರೆಂಬ ವಿವಾದಕ್ಕೆ ಸಿಲುಕಿಸಿದ್ದಾರೆ. ಇನ್ನು ನಮ್ಮಂತವರ ಪರಿಸ್ಥಿತಿ ಏನು?, ಇಂತಹ ಪದ್ಧತಿ ಬಿಜೆಪಿಯಲ್ಲಿ ನಾನು ಕಂಡಿದ್ದಿಲ್ಲ. ನಾನು ಟಿಕೆಟ್‌ ನೀಡಿದ ಸಿದ್ದರಾಮಯ್ಯನವರಿಗೆ ಭಾರವಾಗಿ ಇರಲು ಇಷ್ಟವಿಲ್ಲ. ಹಾಗೆಂದು ಕಾಂಗ್ರೆಸ್‌ ಪಕ್ಷದಲ್ಲಿ ಎಂಎಲ್‌ಎ, ಎಂಎಲ್‌ಸಿಗೆ ಅವಕಾಶ ಕೇಳಲು ಆಸ್ಪದವೇ ಇಲ್ಲ. ಕಾರಣ ನನಗಿಂತ ಹಿರಿಯರು ಅಲ್ಲಿದ್ದಾರೆ ಎಂದು ಮಾಜಿ ಸಚಿವ ಸಿ.ಎಚ್‌.ವಿಜಯಶಂಕರ್‌ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next