ದೆಹಲಿಯಲ್ಲಿ ಕೋವಿಡ್ 19 ವೈರಸ್ ಸೋಂಕು ವ್ಯಾಪಕವಾಗಿದೆ. ನಿಜಾಮುದ್ದೀನ್‌ನಲ್ಲಿ ತಬ್ಲೀಘಿ ಜಮಾತ್‌ನ ಕಾರ್ಯಕ್ರಮದ ಸೋಂಕು ಹೆಚ್ಚಾಗಿದೆ ಎಂದು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹೇಳಿದ್ದಾರೆ. ಹೀಗಾಗಿ ಏ.20ರ ನಂತರ ಕೆಲವೊಂದು ಪ್ರದೇಶಗಳಲ್ಲಿ ವಿನಾಯಿತಿ ನೀಡುವ ಪ್ರಸ್ತಾಪವೇ ಇಲ್ಲವೆಂದಿದ್ದಾರೆ.
‘ಹೊಸದಿಲ್ಲಿ ಕಳೆದೊಂದು ವಾರದಿಂದ ಕೋವಿಡ್ 19 ವೈರಸ್ ಪ್ರಕರಣಗಳ ಬಗ್ಗೆ ಸೂಕ್ಷ್ಮ ಅಧ್ಯಯನ ನಡೆಸಿತ್ತು. ಆದರೆ ಪರಿಸ್ಥಿತಿ ನಿಯಂತ್ರಣಕ್ಕೆ ಬರುತ್ತಿಲ್ಲ. ದೇಶದ ವೈರಸ್ ಪ್ರಕರಣದಲ್ಲಿ ಶೇ.12ರಷ್ಟು ದಿಲ್ಲಿಯಲ್ಲೇ ಕಂಡು ಬಂದಿದೆ.
ಈಗ 77 ಸೂಕ್ಷ್ಮ ವಲಯ ಸೀಲ್‌ಡೌನ್ ಮಾಡಲಾಗಿದೆ. ಎಲ್ಲ 11 ಜಿಲ್ಲೆಗಳಲ್ಲೂ ಕೋವಿಡ್ 19 ವೈರಸ್ ಸೋಂಕು ಹರಡಿದೆ. ಈ ಬಗ್ಗೆ ತಜ್ಞರೊಂದಿಗೆ ಚರ್ಚೆಯನ್ನೂ ಮಾಡಿದ್ದೇವೆ. ಹೆಚ್ಚಿನ ಪ್ರಕರಣಗಳು ಕಂಡು ಬರುತ್ತಿರುವುದರಿಂದ ಆತಂಕವಿದೆ’ ಎಂದು ಕೇಜ್ರಿವಾಲ್ ತಿಳಿಸಿದ್ದಾರೆ.
ಕಾರ್ಯಪಡೆ ರಚನೆ
ಕೋವಿಡ್ 19 ವೈರಸ್ ಗೆ ಲಸಿಕೆ ಅಭಿವೃದ್ಧಿ, ಔಷಧಗಳ ಪ್ರಯೋಗಕ್ಕೆ ಸಂಬಂಧಿಸಿ ಮುಂಚೂಣಿಯಲ್ಲಿ ಕಾರ್ಯನಿರ್ವಹಿಸಲು ಉನ್ನತ ಮಟ್ಟದ ಕಾರ್ಯಪಡೆಯನ್ನು ರಚಿಸಲಾಗಿದೆ. ನೀತಿ ಆಯೋಗದ ಸದಸ್ಯರು ಮತ್ತು ಹೊಸದಿಲ್ಲಿದ ಪ್ರಧಾನ ವೈಜ್ಞಾನಿಕ ಸಲಹೆಗಾರರು ಈ ಕಾರ್ಯಪಡೆಯಲ್ಲಿ ಇರಲಿದ್ದಾರೆ.
ಜತೆಗೆ, ಆಯುಷ್, ಐಸಿಎಂಆರ್, ವಿಜ್ಞಾನ ಮತ್ತು ತಂತ್ರಜ್ಞಾನ, ಬಯೋಟೆಕ್ನಾಲಜಿ ಇಲಾಖೆ, ಸಿಎಸ್‌ಐಆರ್, ಡಿಆರ್‌ಡಿಒ, ಡಿಆರ್‌ಡಿಒ, ಆರೋಗ್ಯ ಸೇವೆಗಳ ಮಹಾನಿರ್ದೇಶಕರೂ ಇದರಲ್ಲಿರಲಿದ್ದಾರೆ ಎಂದೂ ಅಗರ್ವಾಲ್ ಹೇಳಿದ್ದಾರೆ.