Advertisement

ಬಿಜೆಪಿಯ 10 ಶಾಸಕರು ಸಂಪರ್ಕದಲ್ಲಿದ್ದಾರೆ;ಸಚಿವ ಸಾ.ರಾ.ಮಹೇಶ್‌ ಬಾಂಬ್‌

10:20 AM Sep 12, 2018 | Team Udayavani |

ಮೈಸೂರು:ಸಮ್ಮಿಶ್ರ  ಸರ್ಕಾರ ಉರುಳಿಸಲು ಬಿಜೆಪಿ ಯತ್ನಿಸುತ್ತಿದೆ ಎನ್ನುವ ಸುದ್ದಿಯ ಬೆನ್ನಲ್ಲೇ  ಸಚಿವ ಸಾ.ರಾ.ಮಹೇಶ್‌ ಅವರು ‘ಬಿಜೆಪಿಯ 10 ಮಂದಿ ಶಾಸಕರು ನಮ್ಮ ಸಂಪರ್ಕದಲ್ಲಿ ಇದ್ದಾರೆ’ ಎಂದು ಬಾಂಬ್‌ ಸಿಡಿಸಿದ್ದಾರೆ.

Advertisement

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಾ.ರಾ.ಮಹೇಶ್‌ ‘ನಾನೂ ಬಿಜೆಪಿಯಲ್ಲಿ 10 ವರ್ಷ ಇದ್ದವನು. ಬಿಜೆಪಿಯ ಕೆಲ ನಾಯಕರಿಗೆ ಈಗ ಅಧಿಕಾರದ ಆಸೆ ಹಿಡಿದಿದೆ.ಇದಕ್ಕಾಗಿ ಇನ್ನಿಲ್ಲದ ಕಸರತ್ತು ಆರಂಭಿಸಿದ್ದಾರೆ’ ಎಂದರು. 

‘ನಮಗೂ ಶಕ್ತಿ ಇದೆ, ಬಿಜೆಪಿಯ ತಂತ್ರಗಳನ್ನು ಎದುರಿಸುವ ಶಕ್ತಿ ನಮಗಿದೆ. ನಮ್ಮ ನಾಯಕರ ಸಾಮರ್‌ಥ್ಯವನ್ನು ತೋರಿಸಬೇಕಾಗುತ್ತದೆ’ ಎಂದರು. 

ಸರ್ಕಾರ ಉರುಳಿಸಲು ಬಿಜೆಪಿ ಪ್ರಯತ್ನಿಸಿದರೆ,ಆ ಪಕ್ಷದ ಐವರು ಶಾಸಕರಿಂದ ರಾಜೀನಾಮೆ ಕೊಡಿಸುವುದು ನಮಗೆ ಗೊತ್ತಿಲ್ಲವೇ ಎಂದು ಎಚ್‌.ಡಿ.ಕುಮಾರಸ್ವಾಮಿ ಅವರು ಹೇಳಿಕೆ ನೀಡಿದ ಬೆನ್ನಲ್ಲೇ ಸಚಿವ ಸಾ.ರಾ.ಮಹೇಶ್‌ ಈ ಹೇಳಿಕೆ ನೀಡಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next