ಬೆಂಗಳೂರು: ಜಲಮಂಡಳಿ ಮಂಗಳವಾರ ಬೆಳಗ್ಗೆ 9.30ರಿಂದ 11 ಗಂಟೆವರೆಗೆ ವಾಯುವ್ಯ-2, ಪಶ್ಚಿಮ-4 ಮತ್ತು ನೈರುತ್ಯ-4 ಉಪವಿಭಾಗಗಳಲ್ಲಿ ನೀರಿನ ಬಿಲ್, ನೀರು ಮತ್ತು ಒಳಚರಂಡಿ ಸಂಪರ್ಕದಲ್ಲಿನ ವಿಳಂಬ, ಗೃಹಬಳಕೆಯಿಂದ ಗೃಹೇತರ ಪರಿವರ್ತನೆ ವಿಳಂಬ ಮತ್ತಿತರ ಕುಂದುಕೊರತೆಗಳಿಗೆ ಸಂಬಂಧಿಸಿದಂತೆ ಅದಾಲತ್ ಹಮ್ಮಿಕೊಂಡಿದೆ.
ವಾಯುವ್ಯ ಉಪವಿಭಾಗದ ವ್ಯಾಪ್ತಿಯ ಕಾಮಾಕ್ಷಿಪಾಳ್ಯ, ಕಮಲಾನಗರ, ಅಗ್ರಹಾರ ದಾಸರಹಳ್ಳಿ, ವೆಸ್ಟ್ ಆಫ್ ಕಾರ್ಡ್ ರಸ್ತೆ-12 ಸೇವಾಠಾಣೆಗಳಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ವೆಸ್ಟ್ ಆಫ್ ಕಾರ್ಡ್ ರಸ್ತೆ ಮೋದಿ ಆಸ್ಪತ್ರೆ ಬಳಿಯ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರ ಕಚೇರಿಯಲ್ಲಿ ನಡೆಯುವ ಅದಾಲತ್‌ನಲ್ಲಿ ಭಾಗವಹಿಸಿ ಹಿರಿಯ ಅಧಿಕಾರಿಗಳಿಂದ ಪರಿಹಾರ ಪಡೆಯಬಹುದಾಗಿದೆ. ಮಾಹಿತಿಗಾಗಿ ದೂರವಾಣಿ ಸಂಖ್ಯೆ: 22945184 ಸಂಪರ್ಕಿಸಬಹುದು.
ನೈರುತ್ಯ-4 ಉಪವಿಭಾಗದ ವ್ಯಾಪ್ತಿಯ ಚಂದ್ರಲೇಔಟ್-1, ಜಯನಗರ, ಒ.ಎಚ್.ಟಿ ಸೇವಾಠಾಣೆಗಳಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ಜಯನಗರ 2ನೇ ಹಂತ ಆರ್.ಪಿ.ಸಿ ಲೇಔಟ್‌ನ ಅರ್ಕಾವತಿ ಭವನ, ನೆಲಮಹಡಿ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರ ಕಚೇರಿಯಲ್ಲಿ ನಡೆಯುವ ಅದಾಲತ್‌ನಲ್ಲಿ ಭಾಗವಹಿಸಿ ಹಿರಿಯ ಅಧಿಕಾರಿಗಳಿಂದ ಪರಿಹಾರ ಪಡೆಯಬಹುದಾಗಿದೆ. ಮಾಹಿತಿಗಾಗಿ ದೂರವಾಣಿ ಸಂಖ್ಯೆ: 23350020 ಸಂಪರ್ಕಿಸಬಹುದು.
ನೈರುತ್ಯ-3 ಉಪವಿಭಾಗದ ವ್ಯಾಪ್ತಿಯ ಜೆ.ಪಿ.ನಗರ-1, ಜಯನಗರ 4ನೇ ‘ಟಿ’ ಬ್ಲಾಕ್, 4ನೇ ಬ್ಲಾಕ್, ಹೊಂಬೇಗೌಡನಗರ, ಭೈರಸಂದ್ರ ಸೇವಾಠಾಣೆಗಳಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ಜಯನಗರ 4ನೇ ‘ಟಿ’ ಬ್ಲಾಕ್, 11ನೇ ಮುಖ್ಯರಸ್ತೆ, 36ನೇ ಅಡ್ಡರಸ್ತೆ, ಕಪಿಲ ಭವನ ಬಳಿಯ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರ ಕಚೇರಿಯಲ್ಲಿ ನಡೆಯುವ ಅದಾಲತ್‌ನಲ್ಲಿ ಭಾಗವಹಿಸಿ ಹಿರಿಯ ಅಧಿಕಾರಿಗಳಿಂದ ಪರಿಹಾರ ಪಡೆಯಬಹುದಾಗಿದೆ. ಮಾಹಿತಿಗಾಗಿ ದೂರವಾಣಿ ಸಂಖ್ಯೆ: 22945148 ಸಂಪರ್ಕಿಸಬಹುದು.
ಜಲಮಂಡಳಿಯ ಕುಂದು ಕೊರತೆಗಳಿಗೆ ಸಂಬಂಧಿಸಿದಂತೆ 24/7 ದೂರವಾಣಿ ಸಂಖ್ಯೆ: 22238888, ಸಹಾಯವಾಣಿ 1916 ಹಾಗೂ ವಾಟ್ಸ್‌ಆಪ್ ಸಂಖ್ಯೆ: 8762228888 ಸಂಪರ್ಕಿಸಬಹುದು.