Advertisement

ನಿಮ್ಮ ಕ್ಷೇತ್ರದಲ್ಲೇ ನೀರಿನ ಘಟಕ ಬಂದ್‌ ಆಗೈತ್ರಿ!

09:02 AM May 21, 2020 | Suhan S |

ಬಾಗಲಕೋಟೆ: ಬೇಸಿಗೆಯಲ್ಲಿ ಜಿಲ್ಲೆಯ ಗ್ರಾಮೀಣ ಪ್ರದೇಶದ ಕುಡಿಯುವ ನೀರಿನ ಸಮಸ್ಯೆ ಆಲಿಸಲು ಜಿ.ಪಂ ಅಧ್ಯಕ್ಷೆ ಬಾಯಕ್ಕ ಮೇಟಿ, ಬುಧವಾರ ನಡೆಸಿದ ಪೋನ್‌ಇನ್‌ ಕಾರ್ಯಕ್ರಮದಲ್ಲಿ ತಮ್ಮ ಸ್ವಕ್ಷೇತ್ರವಾದ ಐಹೊಳೆಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಗಿತಗೊಂಡಿರುವ ಕುರಿತು ವ್ಯಕ್ತಿಯೊಬ್ಬರು ಗಮನ ಸೆಳೆದರು.

Advertisement

ಕುಡಿಯುವ ನೀರಿನ ಸಂಬಂಧಿಸಿದ ಅಧಿಕಾರಗಳೊಂದಿಗೆ ಬಾಗಲಕೋಟೆ ಜಿಪಂ ವ್ಯಾಪ್ತಿಯ ಗ್ರಾಮೀಣ ಭಾಗದಲ್ಲಿ ಆಗುತ್ತಿರುವ ಕುಡಿಯುವ ನೀರಿನ ಸಮಸ್ಯೆಗಳನ್ನು ಆಲಿಸುವ ನಿಟ್ಟಿನಲ್ಲಿ ಮಧ್ಯಾಹ್ನ 3 ರಿಂದ ಸಂಜೆ 5 ಗಂಟೆವರೆಗೆ ಪೋನ್‌ ಇನ್‌ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು ಈ ಕಾರ್ಯಕ್ರಮದಲ್ಲಿ ಒಟ್ಟು 20 ಕರೆಗಳು ಬಂದಿದ್ದು, ಎಲ್ಲ ಕರೆಗಳನ್ನು ಆಲಿಸಿ ಸೂಕ್ತ ಕ್ರಮಕೈಗೊಳ್ಳುವುದಾಗಿ ಜಿಪಂ ಅಧ್ಯಕ್ಷರು ತಿಳಿಸಿದರು.

ಹುನಗುಂದ ತಾಲೂಕಿನ ಐಹೊಳೆ ಮತ್ತು ಮಂಗಳಗುಡ್ಡ ಗ್ರಾಮದಲ್ಲಿ ಶುದ್ದ ಕುಡಿಯುವ ನೀರಿನ ಘಟಕ ದುರಸ್ತಿಯಾಗದೆ ತೊಂದರೆ ಆಗುತ್ತಿರುವುದಾಗಿ ತಿಳಿಸಿದರೆ, ಇತ್ತ ಜಮಖಂಡಿ ತಾಲೂಕಿನ ಹುಲ್ಯಾಳ ಮತ್ತು ಕಲ್ಲಬೀಳಗಿಯಲ್ಲಿ 4-5 ದಿನಕ್ಕೊಮ್ಮೆ ನೀರು ಬಿಡುತ್ತಿರುವುದಾಗಿ ತಿಳಿಸಿದರು.

ಇವೆಲ್ಲ ಸಮಸ್ಯೆಗಳನ್ನು ಸರಿಪಡಿಸುವಂತೆ ಫೋನ್‌ಇನ್‌ ಕಾರ್ಯಕ್ರಮದಲ್ಲಿ ಹಾಜರಿದ್ದ ಅಧಿಕಾರಿಗಳಿಗೆ ಸೂಚಿಸಿದರು. ಪೋನ್‌ ಇನ್‌ ಕಾರ್ಯಕ್ರಮದಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರ ಆರ್‌.ಎನ್‌. ಪುರೋಹಿತ, ಮುಧೋಳ ತಾಲೂಕಿನ ಇಒ ಕೆ.ಜೆ. ಘೋರ್ಪಡೆ, ಬೀಳಗಿ ಸಬ್‌ಡಿವಿಜನ್‌ ಎಇಇ ವಿ.ಎಸ್‌. ರಾಠೊಡ, ಆರ್‌.ಡಬ್ಲೂ.ಎಸ್‌ನ ಎಇ ಪಿ.ಎಚ್‌. ಮ್ಯಾಗಿನಮನಿ, ಹುನಗುಂದ ತಾಲೂಕಿನ ಇಒ ಮ್ಯಾಗೇರಿ, ಬಾಗಲಕೋಟೆ ತಾ.ಪಂ ಇಒ ಎನ್‌.ವೈ. ಬಸರಿಗಿಡದ ಮುಂತಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next