Advertisement

ಬೊಮ್ಮಗಾನಹಳ್ಳಿಯಲ್ಲಿ  ಹನಿ ನೀರಿಗೂ ಪರದಾಟ!

06:47 PM Jun 10, 2021 | Team Udayavani |

ಬಂಗಾರಪೇಟೆ: ಹೋಬಳಿಯ ಬೊಮ್ಮಗಾನಹಳ್ಳಿಗ್ರಾಮ ದಲ್ಲಿ ಕುಡಿವ ನೀರಿನ ಸಮಸ್ಯೆ ಉಲ್ಬಣವಾಗುತ್ತಿದೆ ಸುಮಾರು ಹದಿನೈದು ದಿನಗಳಿಂದ ಸಮರ್ಪಕವಾಗಿ ಕುಡಿಯುವ ನೀರು ಸಿಗದೆ ಜನರು ಪರದಾಡುತ್ತಿದ್ದಾರೆ.

Advertisement

ಸರ್ಕಾರ ಕೊರೊನಾ ಸಂಖ್ಯೆ ಇಳಿಮುಖಮಾಡಲು ಲಾಕ್‌ಡೌನ್‌ ಮಾಡಿ ಕಠಿಣ ಕ್ರಮಕೈಗೊಂಡರು ಆದರೆ ಗ್ರಾಮದಲ್ಲಿ ಕುಡಿವ ನೀರಿಗಾಗಿ ಒಬ್ಬರ ಮೇಲೊಬ್ಬರು ಬೀಳುತ್ತಿದ್ದು, ಇದರಿಂದ ಕೊರೊನಾಸಂಖ್ಯೆ ಹೆಚ್ಚಾಗುವ ಭೀತಿ ಇದೆ.

ಈ ಹಿಂದೆ ಗ್ರಾಮದಲ್ಲಿ ಕುಡಿಯುವ ನೀರಿನಸಮಸ್ಯೆ ಕಂಡುಬಂದಿತ್ತು. ಗ್ರಾಮದ ಬೋರ್‌ವೆಲ್‌ನಲ್ಲಿ ಕಲುಷಿತ ನೀರು ಪೂರೈಕೆಯಾಗುತ್ತಿತ್ತು, ಬಳಿಕ ಎಚ್ಚೆತ್ತುಕೊಂಡ ಸ್ಥಳೀಯ ಅಧಿಕಾರಿಗಳು ಖಾಸಗಿಬೋರ್‌ವೆಲ್‌ನಿಂದ ಗ್ರಾಮಕ್ಕೆ ಕುಡಿಯುವ ನೀರನ್ನುಪೂರೈಕೆ ಮಾಡುತ್ತಿದ್ದರು. ಆದರೆ, ಇತ್ತೀಚೆಗೆ ಶಾಸಕರಗಮನಕ್ಕೆ ತಂದು ಗ್ರಾಮದಲ್ಲಿ ಬೋರ್‌ವೆಲ್‌ಗ‌ಳನ್ನುಕೊರೆಸಿದ್ದರೂ ಒಳ್ಳೆಯ ನೀರು ಸಿಕ್ಕಿದರೂ ಪೂರೈಕೆಗೆಅಗತ್ಯ ಸಿದ್ಧತೆ ಇನ್ನೂ ನಡೆದಿಲ್ಲ.

ಖಾಸಗಿ ಬೋರ್‌ವೆಲ್‌ಗ‌ಳನ್ನು ಗ್ರಾಮಕ್ಕೆ ಒದಗಿಸಿಕೊಂಡು ಹಳೆಯ ಬೋರ್‌ವೆಲ್‌ಗ‌ಳನ್ನುಖಾಸಗಿಯವರಿಗೆ ನೀರನ್ನು ಬದಲಾಯಿಸಿಕೊಂಡಿದ್ದರು. ಆದರೆ ಈಗ ಹಳೆಯಬೋರ್‌ವೆಲ್‌ಮೋಟಾರನ್ನು ಕಿತ್ತು ಹೊಸ ಬೋರ್‌ ವೆಲ್‌ಗೆಅಳವಡಿಸಲು ಮುಂದಾಗಿದ್ದಾರೆ. ಇದರಿಂದಖಾಸಗಿಯವರಿಗೆ ನೀರು ಸ್ಥಗಿತವಾಗಿದೆ.

ಹೀಗಾಗಿಖಾಸಗಿಯವರೂ ನೀರು ಪೂರೈಕೆ ಮಾಡುವುದನ್ನುನಿಲ್ಲಿಸಿದ್ದಾರೆ. ಈಗ ಹೊಸ ಬೋರ್‌ವೆಲ್‌ಗೆಮೋಟಾರ್‌ ಮತ್ತು ಟಿಸಿಯನ್ನು ಅಳವಡಿಸಲುಕಾರ್ಯರೂಪಕ್ಕೆ ತರಲು ಕೊರೊನಾ ಕಾರಣದಿಂದ ಕಾರ್ಮಿಕರು ಸಿಗುತ್ತಿಲ್ಲ, ವಿದ್ಯುತ್‌ ಸಮಸ್ಯೆಯೂ ಇದೆ ಎಂದು ಸ್ಥಳೀಯಾಧಿಕಾರಿಗಳು ಹೇಳಿದ್ದು, ನೀರಿನಸಮಸ್ಯೆ ಮತ್ತಷ್ಟು ಬಿಗಡಾಯಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next