ಈಶ್ವರ ಕಟ್ಟೆಯ ನಿವಾಸಿ ಜೂವಿತಾ ರೊಡ್ರಿಗಸ್ ತಣ್ಣಗೆ ಕುಳಿತಿರುತ್ತಾರೆ. ಕ್ಸೇವಿಯರ್ ರೋಡ್ರಿಗಸ್ ಅವರ ಪತ್ನಿ ಜೂವಿತಾ ರೊಡ್ರಿಗಸ್ ಅವರ 4 ಎಕ್ರೆಯ ಪೈಕಿ 2 ಎಕ್ರೆ ಅಡಿಕೆ ತೋಟ, ತೆಂಗು, ಕರಿಮೆಣಸು, ಕೋಕೋ, ಬಾಳೆಗಿಡ
ಬೆಳೆಸಿದ್ದಾರೆ. 33 ವರ್ಷದ ಕಾಡಿನಂತಿದ್ದ ಈ ಪರಿಸರ ಗಿಡಪೊದೆಗಳಿಂದ ತುಂಬಿತ್ತು. ಎತ್ತರ ಪದೇಶದಲ್ಲಿದ್ದ ಅವರ ಮನೆ
ಇಳಿಜಾರು ಪ್ರದೇಶದ ಕೆಳಗೆ ಒಂದು ಬಾವಿಯನ್ನು ತೋಡಿದ್ದರು.
Advertisement
ಈ ತೋಟಗಳಿಗೆ ಈ ಬಾವಿಯ ನೀರು ಸಾಕಾಗುತ್ತಿರಲಿಲ್ಲ. ಆರು ವರ್ಷಗಳ ಹಿಂದೆ ಮನಸ್ಸು ಗಟ್ಟಿ ಮಾಡಿದ ಇವರು, ತೋಟದ ಮಧ್ಯೆ 45 ಇಂಗು ಗುಂಡಿಗಳನ್ನು ಮಾಡಿದರು. ಗುಡ್ಡದಿಂದ ಬರುವ ಮಳೆಯ ನೀರು ಈ ಇಂಗು ಗುಂಡಿಗೆಬಿದ್ದು ಅಲ್ಲೇ ಇಂಗುತ್ತಿತ್ತು.
ಮಳೆಯ ನೀರು ಈ ಕೃಷಿ ಹೊಂಡಕ್ಕೆ ಬಂದು ಬೀಳುವಂತೆ ಮಾಡಿದರು. ಸಣ್ಣ ಕೆರೆಯಷ್ಟು ಗ್ರಾತದ ಈ ಹೊಂಡದಲ್ಲಿ ನೀರು ತುಂಬಿ ಕಾಲುವೆಗಳ ಮೂಲಕ ಹರಿಯುವಂತೆ ಮಾಡಲಾಯಿತು. ದಿಶಾ ಟ್ರಸ್ಟ್ ಮಾರ್ಗದರ್ಶನ ಮಾಡಿದ್ದು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋ ಜನೆಯವರು ಇಂಗು ಗುಂಡಿ ಕಂಡು ಸಹಾಯ ಧನ ನೀಡಿದರು. ಮನೆಯಲ್ಲಿ ಗೋಬರ್ ಗ್ಯಾಸ್, ಎರೆಹುಳ ಗೊಬ್ಬರವನ್ನೂ ಪ್ರಾರಂಭಿಸಿದರು.
ಒಟ್ಟೂ ಕೃಷಿ ಯಾವ ಸಮಯದಲ್ಲೂ ಕೈ ಕೊಡದಂತೆ ನೋಡಿಕೊಂಡರು. ಬಾವಿಯ ನೀರು ಎಪ್ರಿಲ್‌ನಲ್ಲಿ ಕಡಿಮೆಯಾಗುತ್ತಿತ್ತು.
Related Articles
ಒಂದುವೇಳೆ ನೀರು ಸಿಗದಿದ್ದರೆ ಕೊಳವೆ ಬಾವಿ ಕೊರೆಯಬೇಕೆಂದಿದ್ದರಂತೆ.
Advertisement
ನೀರು ಬಳಕೆ ಎಚ್ಚರ ಅಗತ್ಯನೀರು ಭೂಮಿಯ ಪ್ರತಿಯೊಂದು ಜೀವರಾಶಿಗೆ ಬಹಳ ಅಗತ್ಯ. ಭೂಮಿಯಲ್ಲಿ ಕುಡಿಯಲು ಯೋಗ್ಯವಾದ ಶುದ್ಧ ನೀರು ಲಭ್ಯವಿರುವುದು ಶೇ. 3ರಷ್ಟು ಮಾತ್ರ. ಆದರೆ, ನಾವು ದಿನಬಳಕೆಗೆಂದು ಅಗತ್ಯಕ್ಕಿಂತ ಹೆಚ್ಚಾಗಿ ಬಳಸಿ ನೀರನ್ನು ಪೋಲು ಮಾಡುತ್ತಿದ್ದೇವೆ. ಹೀಗಾಗಿ ನೀರನ್ನು ಸಂರಕ್ಷಣೆ ಅಗತ್ಯವಾಗಿದೆ. ಇದಕ್ಕಾಗಿ ಕೆಲವೊಂದು ನಿಯಮಗಳನ್ನು ಪ್ರತಿಯೊಬ್ಬರೂ ಪಾಲಿಸುವುದು ಅಗತ್ಯ. ಅಗತ್ಯವಿದ್ದಷ್ಟೇ ನೀರನ್ನು ಬಳಸಿ, ಇಂಗು ಗುಂಡಿಗಳನ್ನು ತೋಡಿ ನೀರನ್ನು ಸಂಗ್ರಹಿಸಿ, ಬಳಸಿದ ನೀರನ್ನು ಮತ್ತೆ ದ್ವಿತೀಯ ಅಗತ್ಯತೆಗಳಿಗೆ ಬಳಸುವುದು. ಮಳೆಯ ಅಸಮರ್ಪಕತೆ ತಡೆಯಲು ಮರಗಳನ್ನು ಬೆಳೆಸುವುದು.ಮಳೆ
ನೀರನ್ನು ಸಂಗ್ರಹಿಸುವುದು. ನದಿ ನೀರು ಕಲುಷಿತವಾಗದಂತೆ ತಡೆಯುಧಿವುಧಿದು, ಹನಿ ನೀರಾವರಿ ಪದ್ಧತಿ ಅನುಸರಿಸಿ, ನೀರು ಹೆಚ್ಚು ವ್ಯಯವಾಗದಂತೆ ಎಚ್ಚರವಹಿಸುವುದು. ಕೊಳವೆ ಬಾವಿಧಿಗಳ ಬದಧಿಲು ತೆರೆದ ಬಾವಿಗಳನ್ನೇ ಬಳಸುವುದು. ಪೈಪ್ ಒಡೆದು ನೀರು ಪೋಲಾಗದಂತೆ ಎಚ್ಚರವಹಿಸುವುದು ಅಗತ್ಯವಾಗಿದೆ. ಅಮೂಲ್ಯವಾದ ನೀರನ್ನು ಮಿತವಾಗಿ ಬಳಸಿ, ಅನಗತ್ಯವಾಗಿ ಪೋಲಾಗದಂತೆ ತಡೆದರೆ, ಮುಂದೆಯೂ ಕೆಲಕಾಲ ನೀರಿನ ಅಭಾವದಿಂದ ದೂರ ಉಳಿಯಬಹುದು. – ಹಕೀಂ ಪೇರಡ್ಕ