Advertisement

5 ನಿಮಿಷದಲ್ಲಿ ಬೋಗಿಗೆ ನೀರು

08:45 AM Dec 10, 2018 | Karthik A |

ಹೊಸದಿಲ್ಲಿ: ರೈಲ್ವೆ ಬೋಗಿಗಳಲ್ಲಿನ ಶೌಚಾಲಯಗಳಲ್ಲಿ ನೀರಿನ ಕೊರತೆ ನಿವಾರಿಸಲು ರೈಲ್ವೆ ಇಲಾಖೆ, ‘ಸೂಪರ್‌ವೈಸರಿ ಕಂಟ್ರೋಲ್‌ ಆ್ಯಂಡ್‌ ಡೇಟಾ ಅಕ್ವಿಸಿಷನ್‌ (ಎಸ್‌.ಸಿ.ಎ.ಡಿ.ಎ.)’ ಎಂಬ ಹೊಸ ತಂತ್ರಜ್ಞಾನದ ಮೊರೆ ಹೋಗಿದೆ. ಇದರಡಿ, ರೈಲುಗಳು ಸಾಗುವ ಪ್ರತಿ 400-450 ಕಿ.ಮೀ. ದೂರಕ್ಕೊಮ್ಮೆ ಬೋಗಿಗಳಿಗೆ ನೀರು ತುಂಬಿಸಲಾಗುತ್ತದೆ. ಈ ಮೂಲಕ ರೈಲುಗಳಲ್ಲಿ ನೀರಿನ ಕೊರತೆ ತಲೆದೋರದಂತೆ ನೋಡಿಕೊಳ್ಳಲಾಗುತ್ತದೆ. ಹೊಸ ಯೋಜನೆಗಾಗಿ 300 ಕೋಟಿ ರೂ. ಮೀಸಲಿಡಲಾಗಿದ್ದು, ಮುಂದಿನ ವರ್ಷ ಮಾರ್ಚ್‌ನಿಂದ ಜಾರಿಗೆ ಬರಲಿದೆ. ಆರಂಭದಲ್ಲಿ ಇದು 142 ರೈಲು ನಿಲ್ದಾಣಗಳಲ್ಲಿ ಅನುಷ್ಠಾನಗೊಳ್ಳಲಿದೆ.

Advertisement

ಏನಿದರ ವಿಶೇಷ?: ಇದು, ರಿಸರ್ಚ್‌ ಡಿಸೈನ್ಸ್‌ ಆ್ಯಂಡ್‌ ಸ್ಟಾಂಡರ್ಡ್ಸ್ ಆರ್ಗನೈಸೇಷನ್‌ ಸಂಸ್ಥೆ ಸಿದ್ಧಪಡಿಸಿರುವ ‘ಎಸ್‌.ಸಿ.ಎ.ಡಿ.ಎ.’ ತಂತ್ರಜ್ಞಾನದ ಮೂಲಕ ಆಗುವ ನೀರು ಪೂರೈಕೆ. ಪ್ರಸ್ತುತ, ಬೋಗಿಗಳಿಗೆ 4 ಇಂಚುಗಳ ಪೈಪುಗಳ ಮೂಲಕ ನೀರು ತುಂಬಿಸಲಾಗುತ್ತಿದೆ. ಇದರ ಬದಲಿಗೆ 6 ಇಂಚಿನ ಪೈಪುಗಳ ಜತೆಗೆ ಹೆಚ್ಚು ಶಕ್ತಿಶಾಲಿ ಮೋಟರ್‌ಗಳ ಸಹಾಯದಿಂದ ನೀರು ತುಂಬಿಸಲಾಗುತ್ತದೆ. ಇದರಿಂದ, 24 ಬೋಗಿಗಳಿದ್ದರೂ ಅವೆಲ್ಲವಕ್ಕೂ ನೀರು ತುಂಬಲು ಕೇವಲ ಐದು ನಿಮಿಷ ಸಾಕು. ಸದ್ಯಕ್ಕಿರುವ ವ್ಯವಸ್ಥೆಯಡಿ 24 ಬೋಗಿಗಳಿಗೆ ನೀರು ತುಂಬಲು 20 ನಿಮಿಷ ಬೇಕಾಗುತ್ತದೆ. ಒಂದೇ ನಿಲ್ದಾಣದಲ್ಲಿ ಹಲವಾರು ರೈಲುಗಳಿಗೆ ಏಕಕಾಲದಲ್ಲಿ ಇದೇ ವೇಗದಲ್ಲಿ ನೀರು ತುಂಬಬಹುದು. ಹೊಸ ವ್ಯವಸ್ಥೆಯು ಕಂಪ್ಯೂಟರೀಕೃತ ಆಗಿರುವುದರಿಂದ ಯಾವುದೇ ಲೋಪ, ನೀರಿನ ಅಪವ್ಯಯ ಇರುವುದಿಲ್ಲ.

– 1,800 : ಲೀ.- ಪ್ರತಿ ಬೋಗಿಯಲ್ಲಿನ ನೀರಿನ ಸಂಗ್ರಹಾಗಾರದ ಸಾಮರ್ಥ್ಯ
– 20 : ನಿಮಿಷ – ಪ್ರಸ್ತುತ ವ್ಯವಸ್ಥೆ ಯಡಿ ನೀರು ತುಂಬಲು ಬೇಕಾಗುವ ಸಮಯ
– 5 : ನಿಮಿಷ – ಹೊಸ  ವ್ಯವಸ್ಥೆಯಡಿ ನೀರು ತುಂಬಲು ಬೇಕಾಗುವ ಸಮಯ

Advertisement

Udayavani is now on Telegram. Click here to join our channel and stay updated with the latest news.

Next