Advertisement
ಭೂಸೇನಾ ನಿಗಮದ ಎಂಜಿನಿಯರ್ ದಿವ್ಯರಾಜ್, ನಿರ್ಮಿತಿ ಕೇಂದ್ರದ ಸಚಿನ್, ಹೆಜಮಾಡಿ ಗ್ರಾ. ಪಂ. ಉಪಾಧ್ಯಕ್ಷ ಸುಧಾಕರ ಹೆಜ್ಮಾಡಿ, ಗ್ರಾ. ಪಂ. ಸದಸ್ಯರಾದ ರೇಶ್ಮಾ, ವಾಸು ಕೋಟ್ಯಾನ್, ಪ್ರಾಣೇಶ್ ಹೆಜಮಾಡಿ ಮತ್ತಿತರರು ಉಪಸ್ಥಿತರಿದ್ದರು. ಹೆಜಮಾಡಿ ಗ್ರಾ. ಪಂ. ಅಧ್ಯಕ್ಷೆ ವಿಶಾಲಾಕ್ಷಿ ಪುತ್ರನ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ಹೆಜಮಾಡಿ ಗ್ರಾ. ಪಂ. ನ ನೂತನ ಕಟ್ಟಡಕ್ಕೆ ಶಾಸಕರ ನಿಧಿಯಿಂದ ಸುಮಾರು 10 ಲಕ್ಷ ರೂ.ಗಳ ಅನುದಾನವನ್ನು ಮಂಜೂರು ಮಾಡಬೇಕೆಂದರು. ಈ ಸಂದರ್ಭದಲ್ಲಿ ಶಾಸಕ ಲಾಲಾಜಿ ಮೆಂಡನ್ ಅವರನ್ನು ಗೌರವಿಸಲಾಯಿತು. ಹೆಜಮಾಡಿ ಗ್ರಾ. ಪಂ. ಪಿಡಿಒ ಮಮತಾ ಶೆಟ್ಟಿ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ಮಾಜಿ ಗ್ರಾ. ಪಂ. ಅಧ್ಯಕ್ಷ ನಡಿಕುದ್ರು ವಾಮನ್ ಕೋಟ್ಯಾನ್ ವಂದಿಸಿದರು.
ಹೆಜಮಾಡಿ ಬಂದರು ಯೋಜನೆಗಾಗಿ ಕೇಂದ್ರ ಸರಕಾರದ ಮೊದಲ ಕಂತು ಬಿಡುಗಡೆಗೊಂಡಿದೆ. ಸದ್ಯ ರಾಜ್ಯ ಸರಕಾರದ ಸಂಪುಟ ಅನುಮತಿಗಾಗಿ ಕಾದಿರುವ ಈ ಯೋಜನೆಗಾಗಿ ಮೀನುಗಾರಿಕಾ ಇಲಾಖೆಗೆ ಸುಮಾರು 35ಎಕ್ರೆ ಸ್ಥಳವನ್ನು ಹಸ್ತಾಂತರಿಸುವ ಪ್ರಕ್ರಿಯೆಯು ನಡೆದಿದೆ. ಹಸ್ತಾಂತರ ಪ್ರಕ್ರಿಯೆಯ ಬಳಿಕಷ್ಟೇ ಟೆಂಡರು ಪ್ರಕ್ರಿಯೆ ಆರಂಭಗೊಳ್ಳಲಿದೆ. ಸುಮಾರು 100 ಎಕ್ರೆಗಳಷ್ಟಿರುವ ಈ ಜಾಗವು ಬಳಿಯ ಜಿಲ್ಲೆಯ ಸಸಿಹಿತ್ಲುವರೆಗೂ ಕರಾವಳಿ ಭಾಗದಲ್ಲಿ ಉಡುಪಿ ಜಿಲ್ಲೆಯ ಕೊನೆಯ ಭೂಭಾಗವಾಗಿ ಆವರಿಸಿಕೊಂಡಿದ್ದು ಆ ಜಿಲ್ಲೆಯವರ ಕೊರೆತದ ಕುರಿತಾದ ಭಯದ ಪ್ರಶ್ನೆಯನ್ನೂ ನಿವಾರಿಸಿಕೊಂಡು ಯೋಜನೆಯನ್ನು ಶೇಕಡಾ ನೂರಕ್ಕೆ ನೂರು ಅನುಷ್ಠಾನಿಸಲಾಗುವುದು.
– ಲಾಲಾಜಿ ಮೆಂಡನ್, ಕಾಪು ಶಾಸಕ