Advertisement

ಬಿಇಎಲ್‌ನಿಂದ ನೀರು ಉತ್ಪಾದನಾ ಯಂತ್ರ

06:23 AM Feb 23, 2019 | |

ಬೆಂಗಳೂರು: ವಾತಾವರಣದಲ್ಲಿನ ತೇವಾಂಶವನ್ನೇ ಹೀರಿಕೊಂಡು ನೀರನ್ನಾಗಿ ಪರಿವರ್ತಿಸುವ ನೂತನ “ವಾತಾವರಣ ಆಧಾರಿತ ನೀರು ಉತ್ಪಾದನೆ’ ಯಂತ್ರವನ್ನು ಭಾರತ್‌ ಎಲೆಕ್ಟ್ರಾನಿಕ್ಸ್‌ ಲಿ., (ಬಿಇಎಲ್‌) ಹೊರತಂದಿದೆ. ಮೈತ್ರಿ ಕಂಪನಿ ಹಾಗೂ ಸಿಎಸ್‌ಐಆರ್‌-ಐಐಸಿಟಿ ಸಹಯೋಗದಲ್ಲಿ ಈ ಯಂತ್ರವನ್ನು ಅಭಿವೃದ್ಧಿಪಡಿಸಿದೆ.

Advertisement

ವಾತಾವರಣದಲ್ಲಿ 30 ಡಿಗ್ರಿಗಿಂತ ಹೆಚ್ಚು ತೇವಾಂಶ ಇದ್ದರೆ, ಅದನ್ನು ಹೀರಿಕೊಂಡು ಶುದ್ಧ ಕುಡಿಯುವ ನೀರನ್ನಾಗಿ ಈ ಯಂತ್ರವು ಪರಿವರ್ತಿಸುತ್ತದೆ. ನಿತ್ಯ ಇದು ಸಾವಿರ ಲೀಟರ್‌ ನೀರನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಇದಲ್ಲದೆ, ಇನ್ನೂ ಮೂರು ಪ್ರಕಾರಗಳಿದ್ದು, ಅವುಗಳು ನಿತ್ಯ 30, 100, 500 ಲೀ., ನೀರು ಉತ್ಪಾದನಾ ಸಾಮರ್ಥ್ಯ ಹೊಂದಿವೆ. 

ಹೀಗೆ ಉತ್ಪಾದಿಸುವ ನೀರು ಮಿನರಲ್‌ ವಾಟರ್‌ ಬಾಟಲ್‌ ನೀರಿಗಿಂತ ಶುದ್ಧ ಮತ್ತು ಅಗ್ಗವಾಗಿದೆ. ಒಂದು ಲೀ. ನೀರು ಉತ್ಪಾದನೆಗೆ 1.70 ರೂ., ವಿದ್ಯುತ್‌ ಆಧಾರಿತವಾಗಿದ್ದರಿಂದ ಪ್ರತಿ ಕಿ.ವಾ.ಗೆ 6 ರೂ., ನಿರ್ವಹಣಾ ವೆಚ್ಚ 13 ಪೈಸೆ ಆಗಲಿದೆ. ಯಂತ್ರದ ಬೆಲೆ 10 ಲಕ್ಷ ರೂ. ಆಗಿದೆ. ಆಫ್ರಿಕದಲ್ಲಿ ಈಗಾಗಲೇ ನೂರು ಯಂತ್ರಗಳಿಗೆ ಬೇಡಿಕೆ ಬಂದಿದೆ ಎಂದು ಮೈತ್ರಿ ಸಹಾಯಕ ಉಪಾಧ್ಯಕ್ಷ ರಾಹುಲ್‌ ವೈದ್ಯ ಮಾಹಿತಿ ನೀಡಿದರು. 

ಸಾಮಾನ್ಯವಾಗಿ ಕರಾವಳಿ ಪ್ರದೇಶಗಳಲ್ಲಿ ವಾತಾವರಣದಲ್ಲಿ ಹೆಚ್ಚು ತೇವಾಂಶ ಇರುತ್ತದೆ. ಅಂತಹ ಕಡೆಗಳಲ್ಲಿ ಈ ಯಂತ್ರದ ನೀರು ಉತ್ಪಾದನಾ ಸಾಮರ್ಥ್ಯ 1300 ಲೀ.ಗೆ ಹೆಚ್ಚುತ್ತದೆ. ಗಂಟೆಗೆ 8.5 ಯೂನಿಟ್‌ ವಿದ್ಯುತ್‌ ಖರ್ಚಾಗುತ್ತದೆ ಎಂದೂ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next