Advertisement

ಕುಷ್ಟಗಿ: ಕುಡಿಯುವ ನೀರಿನ ಹಾಹಾಕಾರ: ಬೇಸತ್ತ ಗ್ರಾಮಸ್ಥರಿಂದ ಖಾಲಿ‌ ಕೊಡ ಹಿಡಿದು ಪ್ರತಿಭಟನೆ

12:02 PM Mar 14, 2022 | Team Udayavani |

ಕುಷ್ಟಗಿ: ಕುಷ್ಟಗಿ ಪಟ್ಟಣದ 5ನೇ ವಾರ್ಡನಲ್ಲಿ ಕುಡಿಯುವ ನೀರಿನ ಹಾಹಾಕಾರಕ್ಕೆ ಬೇಸತ್ತ ನಾಗರೀಕರು ಖಾಲಿ‌ ಕೊಡಗಳಿಂದ ಮಹಿಳೆಯರು, ಮಕ್ಕಳು ಯುವಕರು ಪುರಸಭೆ ಸದಸ್ಯ ಚಿರಂಜೀವಿ ಹಿರೇಮಠ ಮನೆಯ ಮುಂದೆ ಧರಣಿ ನಡೆಸಿದರು. ನಂತರ ಮುಖ್ಯ ಬೀದಿಯಲ್ಲಿ ಖಾಲಿ ಕೊಡಗಳ  ಮೆರವಣಿಗೆ ನಡೆಸಿ ಪುರಸಭೆಗೆ  ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.

Advertisement

ಕಳೆದ 20 ದಿನಗಳಿಂದ 24×7 ನದಿ ನೀರು ಇಲ್ಲ, ಅಂತರ್ಜಲ ನೀರು ಇಲ್ಲ, ಸಮಸ್ಯೆ ತೀವ್ರವಾಗಿದ್ದರೂ ಟ್ಯಾಂಕರ್ ನೀರು ಸಹ ಇಲ್ಲ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದರು.

ನೀರು ಪೂರೈಕೆ ಸೇರಿದಂತೆ ವಿವಿಧ ಬೇಡಿಕೆಗಳಿಗೆ ಪುರಸಭೆ ಸದಸ್ಯ ಚಿರಂಜೀವಿ ಹಿರೇಮಠ ಸ್ಪಂಧಿಸದೇ ನಿರ್ಲಕ್ಷೆ ಮುಂದುವರಿಸಿದ ಹಿನ್ನೆಲೆಯಲ್ಲಿ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.

ಖಾಲಿ ಕೊಡಗಳೊಂದಿಗೆ ಪುರಸಭೆ ಮುತ್ತಿಗೆ ಹಾಕಿದರು. ಈ ವೇಳೆ ಪುರಸಭೆ ಸದಸ್ಯ ಚಿರಂಜೀವಿ ಹಿರೇಮಠ ವಿರುದ್ದ ಹಾಯ್ದು ಆಕ್ರೋಶ ವ್ಯಕ್ತಪಡಿಸಿದರು. ಸ್ಥಳೀಯ ನಿವಾಸಿ ನಾಗರಾಜ್ ಬನ್ನಿಗೋಳ ಮಾತನಾಡಿ ಕಳೆದ 20 ದಿನಗಳಿಂದ ಸದರಿ ವಾರ್ಡಗೆ ನೀರು ಪೂರೈಕೆ ಇಲ್ಲ. ಬೇಸಿಗೆ ಶುರುವಾಗಿದ್ದು ನೀರಿಗಾಗಿ ಹೈರಾಣ ಆಗಿದ್ದೇವೆ. ಇದಕ್ಕೆ ಪರ್ಯಾಯ ಕ್ರಮವಹಿಸಿಲ್ಲ. ವಾರ್ಡನಲ್ಲಿ ಅಭಿವೃದ್ಧಿ ಕೆಲಸ ನಡೆದಿಲ್ಲ ಬೀದಿ ವಿದ್ಯುದ್ದೀಪ ಅಳವಡಿಸಿಲ್ಲ. ಸೋಲಾರ್ ವಿದ್ಯುದ್ದೀಪವನ್ನು ಜನವಸತಿ ಪ್ರದೇಶದಲ್ಲಿ ಅಳವಡಿಸದೇ ಸುಪ್ರೀಯ ಲಾಡ್ಜ್ ಬಳಿ ಅಳವಡಿಸಿದ್ದಾರೆ. ಪುರಸಭೆ ಸದಸ್ಯರಾಗಿ ಸ್ಥಳೀಯ ಸಮಸ್ಯೆಗಳಿಗೆ ಸ್ಪಂಧಿಸುತ್ತಿಲ್ಲ ಸಮಸ್ಯೆಯನ್ನು ಪರಿಹರಿಸದೇ ಪುರಸಭೆ ಅಧಿಕಾರಿಗಳ‌ ಬೆರಳು ಮಾಡುತ್ತಿದ್ದಾರೆಂದು ಆರೋಪಿಸಿದ ಅವರು ಸಮಸ್ಯೆ ಇದೆ ವಾರ್ಡಿಗೆ ಬನ್ನಿ ಎಂದರೆ 4 ನೇ ವಾರ್ಡ ಸದಸ್ಯ ವಸಂತ ಮೇಲಿನಮನಿ ಅವರನ್ನು ಕಳಿಹಿಸಿದ್ದಾರೆಂದು ನಾಗರಾಜ ಬನ್ನಿಗೋಳ ಆರೋಪಿಸಿದರು.

Advertisement

ಈ ವೇಳೆ ಜಂಬಣ್ಣ ಬೂದರ್, ಯಲ್ಲಪ್ಪ ವಗ್ಗರ, ಮಹಾಂತೇಶ ಗದ್ದಿ, ರಾಮಪ್ಪ ಬನ್ನಿಗೋಳ ದುರಗಪ್ಪ ಕಟ್ಟಿಹೊಲ ಸೇರಿದಂತೆ ಮಹಿಳೆಯರು ಮಕ್ಕಳು ಈ ದಿಢೀರ್ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

5 ನೇ ವಾರ್ಡ ಸದಸ್ಯ ಚಿರಂಜೀವಿ ಹಿರೇಮಠ ಪ್ರತಿಕ್ರಿಯಿಸಿ 24×7 ನೀರು ಪೂರೈಸುವ ತಾಂತ್ರಿಕ ಸಮಸ್ಯೆಗೆ ನೀರಿನ ಸಮಸ್ಯೆಯಾಗಿದೆ. ಕಳೆದ ಮೂರು ದಿನಗಳಿಂದ ಇಡೀ ಪಟ್ಟಣಕ್ಕೆ ನೀರಿಲ್ಲ.‌ಅಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next