ದೊಡ್ಡಬಳ್ಳಾಪುರ: ರಾಜ್ಯ ಸರ್ಕಾರದ ಅವೈಜ್ಞಾನಿಕ ಸುತ್ತೋಲೆಯಿಂದಾಗಿ ಕುಡಿಯುವ ನೀರಿಗೆ ಹಣಇಲ್ಲದೆ ಕೊಳವೆ ಬಾವಿ ಕೊರೆಸಲು ಸಾಧ್ಯವಿಲ್ಲದಾಗಿದೆ. ಈ ಬಗ್ಗೆ ಸೂಕ್ತ ನಿರ್ಧಾರ ಕೈಗೊಂಡು ನೀರಿನ ಬವಣೆ ನೀಗಿಸಲು ತುರ್ತಾಗಿ ಹಣ ಬಿಡುಗಡೆ ಮಾಡಬೇಕು. ಇಲ್ಲವಾದರೆ ಜಿಲ್ಲೆಯ ನಾಲ್ಕು ತಾಲೂಕುಗಳ ಶಾಸಕರು ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಬೇಕಾಗುತ್ತದೆ ಎಂದು ಶಾಸಕ ಟಿ.ವೆಂಕಟರಮಣಯ್ಯ ಹೇಳಿದರು.
ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಕುಡಿಯುವ ನೀರಿನ ಬವಣೆ ನೀಗಿಸಲು ಗ್ರಾಮ ಪಂಚಾಯಿತಿ ಅಧ್ಯಕ್ಷರು, ಪಂಚಾಯಿತಿ ಅಭಿವೃದ್ಧಿಅಧಿಕಾರಿಗಳ ಸಭೆ ನಡೆಸಿದ ಅವರು, ಈ ಹಿಂದೆ ಯಾವುದೇ ಗ್ರಾಮದಲ್ಲಿ ಕುಡಿಯುವ ನೀರನ ಕೊರತೆ ಉಂಟಾಗುತ್ತಿದ್ದಂತೆ ಕೊಳವೆಬಾವಿಯನ್ನುಕೊರೆಸಲು ಹಣ ನೀಡಲಾಗುತಿತ್ತು. ಆದರೆ, ಈಗ ಕ್ರಿಯಾ ಯೋಜನೆಗೆ ಒಪ್ಪಿಗೆ ದೊರೆತ ನಂತರವೇ ಕೊಳವೆಬಾವಿ ಕೊರೆಯುವಂತಾಗಿದೆ. ತಾಲೂಕಿನ167 ಗ್ರಾಮಗಳಲ್ಲಿ ಕುಡಿಯುವ ನೀರಿನ ಕೊರತೆ ತಲೆದೋರಿದೆ. ಆದರೆ, ಸರ್ಕಾರ ಮಂಜೂರಾತಿ ನೀಡಿರುವುದು ಮಾತ್ರ 27 ಗ್ರಾಮಗಳಲ್ಲಿ ಕೊಳವೆಬಾವಿ ಕೊರೆಸಲು ಎಂದು ವಿವರಿಸಿದರು.
ಬೋರ್ವೆಲ್ ಕೊರೆಸಲು ಹಣ ಇಲ್ಲ: ಸಭೆಯಲ್ಲಿ ಭಾಗವಹಿಸಿದ್ದ ವಿವಿಧ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಗ್ರಾಮ ಪಂಚಾಯಿತಿಗಳಲ್ಲಿ ಕುಡಿಯುವ ನೀರಿಗಾಗಿ ಕೊಳವೆಬಾವಿಗಳನ್ನುಕೊರೆಸಲು ಹಣ ಇಲ್ಲದಾಗಿದೆ. 15ನೇ ಹಣಕಾಸುಯೋಜನೆಯಲ್ಲಿ ಮಂಜೂರಾಗಿದ್ದ ಎಲ್ಲಾ ಹಣವುವಿವಿಧ ಕಾಮಗಾರಿಗಳಿಗೆ ವಿನಿಯೋಗವಾಗಿದೆ.ಹೀಗಾಗಿ ಸರ್ಕಾರ ಹಣ ನೀಡಿದರೆ ಮಾತ್ರಕುಡಿಯುವ ನೀರಿನ ಬವಣೆ ನೀಗಿಸಲು ಸಾಧ್ಯ ಎಂದು ಹೇಳಿದರು.
ನೀರಿನ ಸಮಸ್ಯೆ ನಿವಾರಿಸಿ: ಸಭೆಯಲ್ಲಿಮಾತನಾಡಿದ ಆರೂಢಿ ಗ್ರಾಮ ಪಂಚಾಯಿತಿಅಧ್ಯಕ್ಷೆ ಜಯಮ್ಮಪ್ರಭು, ತಾಲೂಕಿನ 28 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ 27 ಗ್ರಾಮಗಳಲ್ಲಿಕೊಳವೆಬಾವಿ ಕೊರೆಸಲು ಪಟ್ಟಿ ಸಿದ್ಧಪಡಿಸಲಾಗಿದೆ.ಆದರೆ, ನಮ್ಮ ಪಂಚಾಯಿತಿ ವ್ಯಾಪ್ತಿಯ ಯಾವುದೇಒಂದು ಗ್ರಾಮದಲ್ಲೂ ಕೊಳವೆ ಬಾವಿ ಕೊರೆಸಲುಅನುಮತಿ ನೀಡದೆ ತಾರತಮ್ಯ ಮಾಡಲಾಗಿದೆ. ಈಬಗ್ಗೆ ಶಾಸಕರು ಸೂಕ್ತ ಕ್ರಮ ಕೈಗೊಂಡು ಕುಡಿ ಯುವ ನೀರಿನ ಸಮಸ್ಯೆ ನಿವಾರಣೆ ಮಾಡಬೇಕು ಎಂದು ಮನವಿ ಮಾಡಿದರು.
ಸಮಸ್ಯೆ ಹೇಳಲು ಅವಕಾಶವೇ ನೀಡಲಿಲ್ಲ: ಹೊಸಹಳ್ಳಿ ಗ್ರಾಪಂ ಅಧ್ಯಕ್ಷ ವೆಂಕಟೇಶ್ ಮಾತನಾಡಿ, ಕುಡಿಯುವ ನೀರಿನ ಸಮಸ್ಯೆ ಕುರಿತಂತೆಚರ್ಚಿಸಲು ಜಿಪಂ ಸಿಇಒ, ಡೀಸಿ ಕರೆದಿದ್ದ ಸಭೆಯಲ್ಲಿ ಪಂಚಾಯ್ತಿಅಧ್ಯಕ್ಷರು ತಮ್ಮ ಸಮಸ್ಯೆ ಹೇಳಿಕೊಳ್ಳಲು ಅವಕಾಶವನ್ನೇ ನೀಡಲಿಲ್ಲ ಎಂದು ದೂರಿದರು. ಸಭೆಯಲ್ಲಿ ತಾಪಂ ಅಧ್ಯಕ್ಷ ನಾರಾಯಣಗೌಡ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಮುರುಡಯ್ಯ ಇತರರಿದ್ದರು.