ಹೋಬಳಿಯ ಹುಲಿಕಲ್ ಗ್ರಾಮಕ್ಕೆ ಸಂಬಂಧಿಸಿದಹುಲಿಕಲ್ ಗ್ರಾಪಂ ಅಧಿಕಾರಿಗಳು ಜನಪ್ರತಿನಿಧಿಗಳು ಇದರತ್ತ ಗಮನ ಹರಿಸದೆ ಮೌನಕ್ಕೆ
ಶರಣಾಗಿದ್ದಾರೆ.
Advertisement
ಸುಮಾರು 30 ವರ್ಷಗಳ ಹಿಂದೆ ಈ ಓವರ್ ಹೆಡ್‌ಟ್ಯಾಂಕ್ ನಿರ್ಮಿಸಲಾಗಿತ್ತು. ಈಗ ಇದು ಸಂಪೂರ್ಣ ಶಿಥಿಲವಾಗಿದ್ದು.ಬೃಹತ್ ಗಾತ್ರದಟ್ಯಾಂಕನ್ನು ಹೊತ್ತಿರುವ ಪಿಲ್ಲರ್‌ಗಳು ಸತ್ವಹೀನವಾಗಿದೆ. ಅಲ್ಲಲ್ಲಿ ಪಿಲ್ಲರ್‌ನ ಸಿಮೆಂಟ್ ಹೊದಿಕೆ ಕಿತ್ತುಹೋಗಿ ಕಂಬಿಗಳು ಕಾಣುತ್ತಿವೆ.
ಜೋರಾದ ಮಳೆ ಇಲ್ಲವೇ ಬಿರುಗಾಳಿ ಬೀಸಿದರೆ ಬೀಳುವ ಹಂತದಲ್ಲಿದೆ. ಇಷ್ಟಲ್ಲಾ ಆದರೂ ಇಡೀ ಗ್ರಾಮಕ್ಕೆ ಇದೇ ಟ್ಯಾಂಕ್ ಮೂಲಕವೇ ನೀರನ್ನು ಪೂರೈಸಲಾಗುತ್ತಿದೆ. ಟ್ಯಾಂಕ್ ಪೂರ್ಣ ತುಂಬಿದಾಗ ಯಾವಾಗ ಕುಸಿದು ಬೀಳುವುದೋ ಎಂಬ ಅತಂಕ ಸ್ಥಳೀಯರಲ್ಲಿ ಮನೆಮಾಡಿದೆ. ಓವರ್‌ಹೆಡ್ ಟ್ಯಾಂಕ್ ದುರಸ್ತಿ ಮಾಡಿ, ಇಲ್ಲದಿದ್ದರೇ ಸ್ಥಳದಿಂದ ಸ್ಥಳಾಂತರಿಸಿ ನೂತನ ಟ್ಯಾಂಕ್ ನಿರ್ಮಿಸಿಕೊಡಿ ಎಂದು ಹಲವು ವರ್ಷಗಳಿಂದ ಗ್ರಾಪಂ ಲಿಖಿತವಾಗಿ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದರು.
Related Articles
ಗಮನಕ್ಕೆ ತಂದು ಆದಷ್ಟು ಬೇಗ ತೆರವುಗೊಳಿಸುವ ಕಾರ್ಯಕ್ಕೆ ಚಾಲನೆ ನೀಡಬೇಕು. ಟ್ಯಾಂಕ್ ಪಕ್ಕವೇ ಆಟದ ಮೈದಾನವಿದ್ದು, ಅಲ್ಲಿ ಆಟವಾಡಲು ಹೋಗುವ ವಿದ್ಯಾರ್ಥಿಗಳನ್ನು ಶಿಕ್ಷಕರು ಪ್ರತಿದಿನ ಕಾಯುವಂತಾಗಿದೆ. ರಜಾದಿನಗಳಲ್ಲಿ ಮಕ್ಕಳು ಆಟವಾಡಲು ಬರುತ್ತಾರೆ. ಈ ವೇಳೆ ಟ್ಯಾಂಕ್‌ನಿಂದ ಏನಾದರೂ ಅಪಾಯ ಸಂಭವಿಸಬಹುದು ಎಂಬುದು ಪೋಷಕರ ಅಲವತ್ತುಕೊಂಡಿದ್ದಾರೆ. ಅನಾಹುತ ಸೃಷ್ಟಿಸುವ ಮೊದಲು ಗ್ರಾಪಂ ಎಚ್ಚೆತ್ತುಕೊಂಡು ದುರಸ್ತಿ ಅಥವಾ ನೂತನ ಟ್ಯಾಂಕ್ ನಿರ್ಮಿಸುವ ಕಾರ್ಯ ಮಾಡಿ ಆತಂಕ ದೂರಮಾಡುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
Advertisement
ಶಿಥಿಲಗೊಂಡಿರುವ ನೀರಿನ ಟ್ಯಾಂಕನ್ನು ನೆಲಸಮಗೊಳಿಸಿ ನೂತನ ಟ್ಯಾಂಕ್ ನಿರ್ಮಾಣ ಮಾಡುವಂತೆ ಗ್ರಾಪಂ ಅಧಿಕಾರಿಗಳಿಗೆ ಸ್ಥಳಿಯರು ಮನವಿ ಮಾಡಿದರೂ, ಅಧಿಕಾರಿಗಳುಯಾವುದೇ ಕ್ರಮಕ್ಕೆ ಮುಂದಾಗದೆ ನಿರ್ಲಕ್ಷ್ಯ ವಹಿಸಿದ್ದಾರೆ.– ಕೃಷ್ಣಪ್ಪ ಹುಲಿಕಲ್ ನಿವಾಸಿ ಈಗಾಗಲೇ ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ. ಹೊಸ ಟ್ಯಾಂಕ್ ನಿರ್ಮಾಣಕ್ಕೆ ಒತ್ತಾಯಿಸಿದ್ದೇವೆ. ಪಕ್ಕದಲ್ಲೇ ಜಾಗಕೊಟ್ಟರೆ ಅಲ್ಲಿಯೇಕಟ್ಟಲಾಗುತ್ತದೆ. ಜಾಗಕೊಡದೆ ಇದ್ದರೆ ಈಗಿರುವ ಓವರ್ ಹೆಡ್ ಟ್ಯಾಂಕ್ ನೆಲಸಮಗೊಳಿಸಿ ಅಲ್ಲಿಯೇ ಹೊಸ ಟ್ಯಾಂಕ್ ನಿರ್ಮಿಸಲಾಗುತ್ತದೆ.
– ಪ್ರೇಮಾ, ಹುಲಿಕಲ್ ಗ್ರಾಪಂ ಪಿಡಿಒ