Advertisement
16 ಹಳ್ಳಿಗಳಿಗೆ ನೀರು ಪೂರೈಕೆ ಯೋಜನೆ: ಕೌಲಂದೆ ಹೋಬಳಿಯ ಸುಮಾರು 57 ಗ್ರಾಮಗಳಿಗೆ ಕುಡಿಯುವ ನೀರು ಸರಬರಾಜು ಮಾಡಲು ಮಹದೇವನಗರದ ಪರ್ವತಾಂಜನೇಯನ ಗುಡ್ಡದ ಮೇಲೆ 2008ರಲ್ಲಿ ಬೃಹತ್ ಹೆಡ್ ಒವರ್ ಟ್ಯಾಂಕ್ ನಿರ್ಮಿಸಲಾಗಿದೆ. 5 ಲಕ್ಷ ಗ್ಯಾಲನ್ ನೀರು ಸಾಮರ್ಥ್ಯದ ಟ್ಯಾಂಕ್‌ಗೆ ಪ್ರತಿದಿನ ಕಬಿನಿ ನದಿ ಮೂಲಕ ನೀರು ತುಂಬಿಸಿ, ಗ್ರಾಮಗಳಿಗೆ ನೀರು ಪೂರೈಕೆ ಮಾಡಲಾಗುತ್ತಿದೆ. ಅವೈಜ್ಞಾನಿಕ ಕಾಮಗಾರಿಯಿಂದಾಗಿ 57 ಹಳ್ಳಿಗಳಿಗೆ ನೀಡಬೇಕಾಗಿದ್ದ ನೀರನ್ನು ಕೇವಲ 16 ಗ್ರಾಮಗಳಿಗೆ ನೀಡಲಾಗುತ್ತಿದೆ. ಅದೂ ಕೂಡ ದಿನಬಿಟ್ಟು ದಿನ ನೀರು ಸರಬರಾಜು ಮಾಡಲಾಗುತ್ತಿದೆ.
Related Articles
Advertisement
ವಿದ್ಯುತ್ ಇಲಾಖೆಯೇ ಜವಾಬ್ದಾರಿ ಹೊರಲಿ :
ಗುಡ್ಡದ ಮೇಲೆ ವಿದ್ಯುತ್ ಕಂಬ ಬದಲಾಯಿಸುವಕಾಮಗಾರಿ ನಡೆಸುತ್ತಿದ್ದ ವಿದ್ಯುತ್ ಇಲಾಖೆಯೇಜೆಸಿಬಿ ಯಂತ್ರದ ಮೂಲಕ ಕೊಳವೆಯನ್ನುಒಡೆದಿದೆ. ಇಲಾಖೆ ಅಧಿಕಾರಿಗಳೇ ಕೊಳವೆಯನ್ನುದುರಸ್ತಿಪಡಿಸಬೇಕು. ಇಲ್ಲದಿದ್ದರೆ ಅದಕ್ಕೆ ಎಷ್ಟುಖರ್ಚಾಗುತ್ತದೆಯೋ ಅಷ್ಟು ಹಣವನ್ನು ನೀಡಿದರೆ ನಾವೇ ದುರಸ್ತಿಪಡಿಸಿ ಗ್ರಾಮಗಳಿಗೆ ನೀರು ಪೂರೈಸುತ್ತೇವೆ ಎಂದು ಗ್ರಾಮೀಣ ನೀರು ಸರಬರಾಜು ಇಲಾಖೆ ಅಧಿಕಾರಿ ರಂಗನಾಥ್ ತಿಳಿಸಿದ್ದಾರೆ.
ಜಟಾಪಟಿ ಬಿಟ್ಟು ಕೊಳವೆ ದುರಸ್ತಿಪಡಿಸಿ ನೀರು ಪೂರೈಸಿ : ಎರಡು ಇಲಾಖೆಗಳ ಜಟಾಪಟಯಿಂದ 16 ಗ್ರಾಮಗಳ ಜನರು ಬಿರು ಬೇಸಿಗೆ ವೇಳೆ ನೀರಿಲ್ಲದೇ ಪರದಾಡುತ್ತಿದ್ದಾರೆ. ಕೊಳವೆ ಒಡೆದು ನಾಲ್ಕೈದು ದಿನ ಕಳೆದರೂ ದುರಸ್ತಿಗೆ ಯಾರೂಮುಂದಾಗುತ್ತಿಲ್ಲ. ಯುಗಾದಿ ಹಬ್ಬದ ಸಮಯದಲ್ಲೇ ನಮಗೆ ನೀರಿಲ್ಲ ದಂತಾಗಿದೆ. ಇನ್ನೆಷ್ಟು ದಿನ ಕಾಯಬೇಕು, ಯಾರು ಹೊಣೆಹೊರಬೇಕು ಎಂಬುದು ಗೊಂದಲ ಮಯವಾಗಿದೆ. ಅಸಡ್ಡೆಮನೋಭಾವ ಬಿಟ್ಟು ಇಲಾಖೆಗಳ ಅಧಿಕಾರಿಗಳು ಪರಸ್ಪರಮಾತುಕತೆ ನಡೆಸಿ, ಒಂದು ತೀರ್ಮಾನಕ್ಕೆ ಬಂದು ಕೊಳವೆದುರಸ್ತಿಪಡಿಸಿ ನಮಗೆ ನೀರು ಪೂರೈಸಬೇಕು ಎಂದು ಕೌಲಂದೆ ಹೋಬಳಿಯ ಬದನವಾಳು, ಕೌಲಂದೆ, ದೇವನೂರು ಚುಂಚನಳ್ಳಿ ಮತ್ತಿತರ ಹಳ್ಳಿಗಳ ಜನರು ಆಗ್ರಹಿಸಿದ್ದಾರೆ.
ವಿದ್ಯುತ್ ಇಲಾಖೆ ಅಧಿಕಾರಿಗಳು ಮಂಗಳವಾರ ಸಂಜೆಯೊಳಗೆ ಒಡೆದಿರುವ ಕೊಳವೆದುರಸ್ತಿಪಡಿಸಬೇಕು. ಇಲ್ಲದಿದ್ದರೆ ಬುಧವಾರ ನಾವೇಅದನ್ನು ದುರಸ್ತಿ ಮಾಡಿ ಗ್ರಾಮಗಳಿಗೆ ನೀರು ಪೂರೈಸಲುಕ್ರಮ ಕೈಗೊಳ್ಳುತ್ತೇವೆ. – ಚರಿತಾ, ತಾಲೂಕು ಗ್ರಾಮೀಣ ನೀರು ಸರಬರಾಜು ಅಧಿಕಾರಿ
– ಶ್ರೀಧರ್ ಆರ್.ಭಟ್