Advertisement

ವಿಡಿಯೋ: ಇಂಗ್ಲಿಷ್‌ ಕೌಂಟಿ ಕ್ರಿಕೆಟ್‌ ನಲ್ಲಿ ಪೂಜಾರ ಸ್ಪಿನ್‌ ಬೌಲಿಂಗ್‌!

10:05 PM Jul 14, 2022 | Team Udayavani |

ಲೀಸೆಸ್ಟರ್: ಟೆಸ್ಟ್‌ ಸ್ಪೆಷಲಿಸ್ಟ್‌ ಬ್ಯಾಟರ್‌ ಚೇತೇಶ್ವರ್‌ ಪೂಜಾರ ಬೌಲಿಂಗ್‌ ನಡೆಸಿದ್ದನ್ನು ಬಹುಶಃ ಕಂಡವರಿಲ್ಲ. ಆದರೆ ಇಂಥದೊಂದು ದೃಶ್ಯಕ್ಕೆ ಇಂಗ್ಲಿಷ್‌ ಕೌಂಟಿ ಕ್ರಿಕೆಟ್‌ ಸಾಕ್ಷಿಯಾಗಿದೆ.

Advertisement

ಬರ್ಮಿಂಗ್‌ಹ್ಯಾಮ್‌ ಟೆಸ್ಟ್‌ ಪಂದ್ಯ ಮುಗಿದ ಬಳಿಕ ಚೇತೇಶ್ವರ್‌ ಪೂಜಾರ ಮರಳಿ ಸಸೆಕ್ಸ್‌ ಕೌಂಟಿ ಪರ ಆಡಲು ತೆರಳಿದರು. ಈಗ ಲೀಸೆಸ್ಟರ್‌ಶೈರ್‌ ವಿರುದ್ಧ ಕೌಂಟಿ ಚಾಂಪಿಯನ್‌ಶಿಪ್‌ ಡಿವಿಷನ್‌-2 ಪಂದ್ಯದಲ್ಲಿ ಆಡುತ್ತಿದ್ದಾರೆ. 3ನೇ ದಿನವಾದ ಬುಧವಾರ ಬೌಲಿಂಗ್‌ ಕೂಡ ನಡೆಸಿ ಗಮನ ಸೆಳೆದರು. ಲೆಗ್‌ಸ್ಪಿನ್‌ ಶೈಲಿಯಲ್ಲಿ ಒಂದು ಓವರ್‌ ಎಸೆದು 8 ರನ್‌ ನೀಡಿದರು. ಇದರ ಚಿತ್ರವನ್ನು ಸಸೆಕ್ಸ್‌ ಕೌಂಟಿ ತನ್ನ ಟ್ವಿಟರ್‌ನಲ್ಲಿ ಪ್ರಕಟಿಸಿದೆ.

ಈವರೆಗಿನ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಚೇತೇಶ್ವರ್‌ ಪೂಜಾರ ಕೇವಲ 41.4 ಓವರ್‌ಗಳನ್ನಷ್ಟೇ ಎಸೆದು 6 ವಿಕೆಟ್‌ ಉರುಳಿಸಿದ್ದಾರೆ. ಟೆಸ್ಟ್‌ ಕ್ರಿಕೆಟ್‌ನಲ್ಲಿ ಒಮ್ಮೆಯಷ್ಟೇ ಬೌಲಿಂಗ್‌ ಮಾಡಿದ್ದಾರೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next