ಅಯ್ಯೋ ಈ ರೀಲ್ಸ್ ಮಾಡೋ ಜನಕ್ಕೆ ಜೀವಮಾನದಲ್ಲಿ ಬುದ್ದಿ ಬರುವ ಲಕ್ಷಣ ಕಾಣುವುದಿಲ್ಲ. ರೀಲ್ಸ್ ನಿಂದ ಎಷ್ಟೇ ಅವಘಡಗಳು ನಡೆದರೂ ಜನರು ಮಾತ್ರ ಇದರಿಂದ ಬುದ್ದಿ ಕಲಿಯುವ ಹಾಗೆ ಕಾಣುತಿಲ್ಲ ಯಾಕೆಂದರೆ ಈ ಈಗಿನ ಯುವಜನರ ಮನಸ್ಸಿನಲ್ಲಿ ಈ ರೀಲ್ಸ್ ಹುಚ್ಚು ಅಷ್ಟರಮಟ್ಟಿಗೆ ಬೇರೂರಿದೆ.
ದಿನಬೆಳಗಾದರೆ ಮೊಬೈಲ್ ನಲ್ಲಿ ರೀಲ್ಸ್ ನೋಡುವುದು ತಾವು ಮಾಡಿದ ರೀಲ್ಸ್ ಅಪ್ ಲೋಡ್ ಮಾಡುವುದು ಎಷ್ಟು ಜನ ಲೈಕ್ ಕೊಟ್ಟಿದ್ದಾರೆ, ಎಷ್ಟು ಜನ ಕಾಮೆಂಟ್ ಮಾಡಿದ್ದಾರೆ ಎಂದು ನೋಡುವುದು ಇದು ಈಗಿನ ಕೆಲ ಯುವಕ ಯುವತಿಯರ ಪ್ರಮುಖ ಕೆಲಸವಾಗಿದೆ.
ಇನ್ನು ಕೆಲವರು ರೀಲ್ಸ್ ಮಾಡಲು ಏನೇನೋ ಅಪಾಯಗಳನ್ನು ಎದುರು ಹಾಕಿಕೊಳ್ಳುತ್ತಾರೆ ಕೆಲವರು ರೀಲ್ಸ್ ಮಾಡಲು ಹೋಗಿ ಜೀವವನ್ನೇ ಕಳೆದುಕೊಂಡಿರುವ ಅನೇಕ ಪ್ರಕರಣಗಳು ಕಣ್ಣಮುಂದೆ ಇದೆ ಅದೇ ರೀತಿ ಕೆಲವೊಮ್ಮೆ ನಮ್ಮ ಆಯುಷ್ಯ ಗಟ್ಟಿಯಾಗಿದ್ದರೆ ಅಪಾಯದಿಂದ ಕ್ಷಣಾರ್ಧದಲ್ಲಿ ಪಾರಾಗಿರುವ ಘಟನೆಗಳು ಹಲವಾರು ಇವೆ ಅದರಲ್ಲಿ ಇತ್ತೀಚಿಗೆ ಬಿಹಾರದಲ್ಲಿ ನಡೆದ ಘಟನೆ.
ಬಿಹಾರದ ಸೀತಾಮರ್ಹಿಯಲ್ಲಿ ಬಾಲಕಿಯೊಬ್ಬಳು ಮಳೆ ಬರುವ ವೇಳೆ ತನ್ನ ಮನೆಯ ಟೆರೇಸ್‌ನಲ್ಲಿ ನಿಂತು ನೃತ್ಯ ಮಾಡುವ ರೀಲ್ಸ್ ಮಾಡಲು ಹೋಗಿದ್ದಾಳೆ ಅದಕ್ಕೆಂದು ಮೊಬೈಲ್ ಸೆಟ್ ಮಾಡಿ ಇನ್ನೇನು ನೃತ್ಯ ಮಾಡಬೇಕು ಎನ್ನುವಷ್ಟರಲ್ಲಿ ಮನೆಯ ಪಕ್ಕದಲ್ಲೆ ಸಿಡಿಲು ಬಡಿದಿದೆ ಇದರಿಂದ ಭಯಗೊಂಡ ಬಾಲಕಿ ಮೊಬೈಲ್ ಅಲ್ಲೇ ಬಿಟ್ಟು ಮನೆಯೊಳಗೇ ಸೇರಿಕೊಂಡಿದ್ದಾಳೆ ಅದೃಷ್ಟವಶಾತ್ ಆಕೆಯ ಅದೃಷ್ಟ ಚೆನ್ನಾಗಿತ್ತು ಹಾಗಾಗಿ ಸಂಭವನೀಯ ಅನಾಹುತ ತಪ್ಪಿತು, ಸಿಡಿಲು ಬಡಿದ ವಿಡಿಯೋ ಬಾಲಕಿ ಸೆಟ್ ಮಾಡಿ ಇಟ್ಟಿದ್ದ ಮೊಬೈಲ್ ನಲ್ಲಿ ಸೆರೆಯಾಗಿದೆ. ಇನ್ನಾದರೂ ಜನ ರೀಲ್ಸ್ ಗಾಗಿ ಇಂಥ ಹುಚ್ಚು ಸಾಹಸ ಮಾಡಲು ಹೋಗದಿರಿ.
ಇದನ್ನೂ ಓದಿ: Tragedy: ಕೆಲಸಕ್ಕೆ ಹೊರಟಿದ್ದ ಯುವತಿಗೆ ಹೃದಯಾಘಾತ… ಮುಗಿಲು ಮುಟ್ಟಿದ ಆಕ್ರಂದನ