Advertisement

Fukushima: ಫುಕುಶಿಮಾದಿಂದ ತ್ಯಾಜ್ಯ ನೀರು ಬಿಡುಗಡೆ ಶುರು

10:57 PM Aug 24, 2023 | Team Udayavani |

ಹಲವು ದೇಶಗಳ ವಿರೋಧದ ನಡುವೆಯೇ ಜಪಾನ್‌ ತನ್ನ ಫ‌ುಕುಶಿಮಾ ಪರ ಮಾಣು ಸ್ಥಾವರದಿಂದ ಸಂಸ್ಕರಿತ ವಿಕಿರಣ ಶೀಲ ತ್ಯಾಜ್ಯ ನೀರನ್ನು ಬಿಡುಗಡೆ ಮಾಡಿದೆ. ಸಂಸ್ಕರಿತ ನೀರನ್ನು ದಾಸ್ತಾನಿಡಲು ಸಾಕಷ್ಟು ಸ್ಥಳಾವಕಾಶ ಇಲ್ಲದೇ ಇರುವ ಕಾರಣ, ಅದನ್ನು ಬಿಡುಗಡೆ ಮಾಡದೇ ಬೇರೆ ವಿಧಿಯಿಲ್ಲ ಎನ್ನುವುದು ಜಪಾನ್‌ನ ವಾದ.

Advertisement

ಹೇಗೆ ಬಿಡುಗಡೆ?
ಇಷ್ಟು ವರ್ಷಗಳಿಂದ ತ್ಯಾಜ್ಯ ನೀರನ್ನು ನಿರಂತರವಾಗಿ ಸಂಸ್ಕರಿಸಿ, ಅದರಲ್ಲಿದ್ದ ವಿಷಕಾರಿ ಅಂಶಗಳನ್ನು ತೆಗೆದುಹಾಕಿ ಟ್ಯಾಂಕ್‌ಗಳಲ್ಲಿ ಶೇಖರಿಸಿಡಲಾಗುತ್ತಿತ್ತು. ಗುರುವಾರದಿಂದಲೇ ಇದರ ಬಿಡುಗಡೆ ಆರಂಭಿಸುವುದಾಗಿ ಜಪಾನ್‌ ಪ್ರಧಾನಿ ಫ‌ುಮಿಯೋ ಕಿಶಿದಾ ಹೇಳಿದ್ದರು. ತ್ಯಾಜ್ಯ ನೀರನ್ನು ಬಿಡುಗಡೆ ಮಾಡಿದಾಗ ಅದು ಸ್ವತ್ಛ ನೀರಿನೊಂದಿಗೆ ಸೇರಿಕೊಳ್ಳುವ ಕಾರಣ, ಅದರಲ್ಲಿರುವ ವಿಕಿರಣಶೀಲ ವಸ್ತುಗಳ ಸಾಂದ್ರತೆ ಕಡಿಮೆಯಾಗುತ್ತದೆ. ಅದು ಸಮುದ್ರದಡಿಯ ಸುರಂಗದಲ್ಲಿ ಸುಮಾರು 1 ಕಿ.ಮೀ. ಸಾಗಿ ಪೆಸಿಫಿಕ್‌ ಸಮುದ್ರವನ್ನು ಸೇರುತ್ತದೆ.

ಯಾವ ದೇಶಗಳ ಪ್ರತಿಭಟನೆ?
ದಕ್ಷಿಣ ಕೊರಿಯಾ, ಜಪಾನ್‌ನಲ್ಲಿ ಸಾರ್ವಜನಿಕರ ಪ್ರತಿಭಟನೆ. ಚೀನಾ ಸರ್ಕಾರದಿಂದ ಜಪಾನ್‌ನ ಕ್ರಮ ಸ್ವಾರ್ಥದ್ದು ಮತ್ತು ಬೇಜವಾಬ್ದಾರಿ ಎಂದು ಟೀಕೆ. ಜಪಾನ್‌ನಿಂದ ಮೀನು ಸೇರಿದಂತೆ ಇತರ ಸಾಗರೋತ್ಪನ್ನಗಳನ್ನು ಖರೀದಿಸುವುದಕ್ಕೆ ನಿಷೇಧ ಹೇರಲು ತೀರ್ಮಾನ.

ಮೇಲ್ವಿಚಾರಣೆ
ಬಿಡುಗಡೆಯಾದ ನೀರಿನ ಮೇಲೆ ವಿಶ್ವಸಂಸ್ಥೆಯ ಪರಮಾಣು ನಿಗಾ ಸಂಸ್ಥೆ ಮತ್ತು ಅಂತಾರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆಯು ನಿರಂತರ ನಿಗಾ ಇಡುತ್ತವೆ.

ಅಪಾಯಗಳೇನು?
· ತ್ಯಾಜ್ಯ ನೀರನ್ನು ಎಷ್ಟೇ ಸಂಸ್ಕರಣೆಗೊಳಿಸಿದರೂ ಹೈಡ್ರೋಜನ್‌ ಐಸೋಟೋಪ್‌ (ರೇಡಿಯೋಆ್ಯಕ್ಟಿವ್‌ ಟ್ರಿಟಿಯಂ) ಅನ್ನು ತೆಗೆದುಹಾಕುವಂಥ ತಂತ್ರಜ್ಞಾನ ಸದ್ಯಕ್ಕೆ ಎಲ್ಲೂ ಲಭ್ಯವಿಲ್ಲ.
· ಹೈಡ್ರೋಜನ್‌ ಐಸೋಟೋಪ್‌ ಇರುವಂಥ ತ್ಯಾಜ್ಯ ನೀರು ಸಮುದ್ರದಲ್ಲಿನ ಜೀವಿಗಳಿಗೆ ಅಪಾಯ ತಂದೊಡ್ಡಬಹುದು
· ಈಗಾಗಲೇ ಅಪಾಯದಲ್ಲಿರುವ ಸಾಗರ ಜೀವವೈವಿಧ್ಯಕ್ಕೆ ಸಮುದ್ರದಲ್ಲಿ ಶೇಖರಣೆಗೊಳ್ಳುವ ಮಲಿನಕಾರಕಗಳಿಂದ ಮತ್ತಷ್ಟು ತೊಂದರೆ ಆಗಬಹುದು.
· ಮೀನು ಮತ್ತಿತರ ಜಲಚರಗಳನ್ನು ತಿನ್ನುವ ಮನುಷ್ಯನ ಆರೋಗ್ಯದ ಮೇಲೂ ಪ್ರತಿಕೂಲ ಪರಿಣಾಮ ಬೀರಬಹುದು.
· ಮೀನುಗಾರಿಕೆಯನ್ನೇ ಅವಲಂಬಿಸಿರುವ ಸಮುದಾಯಕ್ಕೂ ತಮ್ಮ ಜೀವನಾಧಾರಕ್ಕೆ ಕೊಡಲಿಯೇಟು ಬೀಳುವ ಭೀತಿ.

Advertisement

ಏಕೆ ಈ ಪ್ರಕ್ರಿಯೆ?
2011ರ ಭೂಕಂಪ ಮತ್ತು ಸುನಾಮಿಯು ಫ‌ುಕುಶಿಮಾ ಸ್ಥಾವರದ ವಿದ್ಯುತ್‌ ಸರಬರಾಜು ಮತ್ತು ಕೂಲಿಂಗ್‌ ವ್ಯವಸ್ಥೆಗೆ ಹಾನಿಯುಂಟು ಮಾಡಿತು. ಅದರಲ್ಲಿದ್ದ ರಿಯಾಕ್ಟರ್‌ ಅತಿಯಾಗಿ ಬಿಸಿಯಾಗಿ, ಸ್ಥಾವರದೊಳಗಿದ್ದ ನೀರು ಹೆಚ್ಚು ವಿಕಿರಣಶೀಲ ವಸ್ತು ಗಳಿಂದ ಕಲ್ಮಶಗೊಂಡಿತು. ಅವುಗಳನ್ನು ಸಂಸ್ಕರಿಸಿ ಇಡಲಾಯಿತು. ಆದರೆ, ಈಗ ಟ್ಯಾಂಕ್‌ಗಳು ಸಾಲುತ್ತಿಲ್ಲ ಎಂಬದೇ ಕಾರಣ.

 

Advertisement

Udayavani is now on Telegram. Click here to join our channel and stay updated with the latest news.

Next