Advertisement

BJP Rift; ಆರ್. ಅಶೋಕ್ ದೆಹಲಿಗೆ: ನನಗೆ ಸ್ಪಷ್ಟ ಮಾಹಿತಿ ಇಲ್ಲ ಎಂದ ವಿಜಯೇಂದ್ರ

10:38 AM Dec 04, 2024 | Team Udayavani |

ಕಲಬುರಗಿ: ರಾಜ್ಯ ಬಿಜೆಪಿಯಲ್ಲಿ ಉಂಟಾಗಿದೆ ಎನ್ನಲಾಗಿರುವ ವಿವಾದದ ಕುರಿತು ಡಿ. 7ರಂದು ನಡೆಯುವ ಬಿಜೆಪಿ ಕೇಂದ್ರ ಕೋರ್ ಕಮಿಟಿಯಲ್ಲಿ ಎಲ್ಲವೂ ಫೈನಲ್ ಆಗಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ವಿಶ್ವಾಸ ವ್ಯಕ್ತಪಡಿಸಿದರು.

Advertisement

ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಪಿಸಿ ಕಮಿಟಿಗೆ ಯತ್ನಾಳ್ ದೂರು ಕೊಟ್ಟಿರುವ ವಿಚಾರವನ್ನು ಪ್ರಸ್ತಾಪಿಸಿದರು. ಪ್ರಧಾನಿಯವರು ಜೆಪಿಸಿ ಕಮಿಟಿ ರಚನೆ ಮಾಡಿರುವುದು ದೇಶದ ಜನತೆಗೂ ಒಳ್ಳೆಯದಾಗಲಿ ಎಂದು. ಅದು ಯತ್ನಾಳರಿಗಾಗಿ ಅಥವಾ ಸೋಮಶೇಖರ್ ಅವರ ದೂರು ಕೇಳಲು ಮಾಡಿದ ಕಮಿಟಿಯಲ್ಲ. ಆದ್ದರಿಂದ ಅವರು ಕಮಿಟಿಗೆ ದೂರು ಕೊಟ್ಟಿರುವ ವಿಚಾರ, ಎಲ್ಲವೂ ಸೇರಿ ಡಿ. 7ರ ಸಭೆಯಲ್ಲಿ ಅಂತಿಮಗೊಳ್ಳಲಿದೆ ಎಂದರು.

ರಾಜ್ಯದಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಕುರಿತು ಈಗಾಗಲೇ ಹಿರಿಯರಾದ ಗೋವಿಂದ ಕಾರಜೋಳ್ ಅವರ ನೇತೃತ್ವದಲ್ಲಿ ನಾವು ಕೂಡ ದೂರು ನೀಡಿದ್ದೇವೆ. ಎಲ್ಲಾ ವಿಚಾರಗಳು ಸಭೆಯಲ್ಲಿ ಪ್ರಸ್ತಾಪವಾಗಲಿದ್ದು ಅಂತಿಮ ವಿಚಾರ ಹೊರಬರುವ ಸಾಧ್ಯತೆ ಇದೆ ಎಂದರು.

ಸ್ಪಷ್ಟ ಮಾಹಿತಿ ಇಲ್ಲ

ಆರ್. ಅಶೋಕ್ ಅವರು ವಿರೋಧ ಪಕ್ಷದ ನಾಯಕರಾಗಿದ್ದಾರೆ. ಅವರು ದೆಹಲಿಗೆ ತೆರಳಿ ಹೈಕಮಾಂಡ್ ಜತೆಗೆ ಮಾತನಾಡುವ ವಿಚಾರ ನನಗೆ ಗೊತ್ತಿಲ್ಲ. ಈ ಬಗ್ಗೆ ಯಾವುದೇ ಸ್ಪಷ್ಟ ಮಾಹಿತಿ ಇಲ್ಲ ಎಂದು ತಿಳಿಸಿದರು.

Advertisement

ಹೋರಾಟ ಇನ್ನಷ್ಟು ಬಲ

ರಾಜ್ಯ ಸರ್ಕಾರ ವಕ್ಫ್ ವಿಚಾರದಲ್ಲಿ ರೈತರನ್ನ ಒಕ್ಕಲೆಬ್ಬಿಸುತ್ತಿದೆ. ಅದು ಅಲ್ಲದೆ ಮಠ ಮಾನ್ಯಗಳ ಜಮೀನನ್ನು ವಕ್ಫ್ ಹೆಸರಿಗೆ ವರ್ಗಾಯಿಸುವ ಮೂಲಕ ಶಕ್ತಿ ಪ್ರದರ್ಶನ ಮಾಡುತ್ತಿದೆ. ಬಿಜೆಪಿ ಹಂತ ಹಂತವಾಗಿ ಹೋರಾಟವನ್ನು ಇನ್ನಷ್ಟು ಬಲಗೊಳಿಸಲಿದೆ ಎಂದರು.

ಮುಡಾ ಪ್ರಕರಣದಲ್ಲಿ ಈಗಾಗಲೇ 700 ಕೋಟಿ ಮೌಲ್ಯದ ನಿವೇಶನಗಳು ಬ್ರೋಕರ್ ಗಳ ಪಾಲಾಗಿದೆ ಎಂದು ಇಡೀ ದಾಖಲೆಯಲ್ಲಿ ಹೇಳಿದೆ. ಇದೇ ಹಂತದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕುಟುಂಬದ ಪಾಲಾಗಿದ್ದ ನಿವೇಶನಗಳನ್ನು ಮರಣಿಸುವ ಮೂಲಕ ಸಿದ್ದರಾಮಯ್ಯ ಅವರು ತಾವು ಪ್ರಾಮಾಣಿಕರು ಎಂದು ಬಿಂಬಿಸಲು ಹೊರಟಿರುವುದು ನಿಜಕ್ಕೂ ದುರದೃಷ್ಟಕರ ಎಂದು ವ್ಯಂಗ್ಯವಾಡಿದರು.

ಆರ್. ಅಶೋಕ್ ಅವರು ಬುಧವಾರ ದೆಹಲಿಗೆ ತೆರಳಿದ್ದು ಬಿಜೆಪಿ ಉನ್ನತ ನಾಯಕರನ್ನು ಭೇಟಿಯಾಗಲಿದ್ದಾರೆ ಎಂದು ಹೇಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next