Advertisement

Iran ಅಣ್ವಸ್ತ್ರ ಕೇಂದ್ರದ ಮೇಲೆ ದಾಳಿ ಮಾಡಿ: ಇಸ್ರೇಲ್‌ಗೆ ಟ್ರಂಪ್‌

01:20 AM Oct 06, 2024 | Team Udayavani |

ವಾಷಿಂಗ್ಟನ್‌: ಇತ್ತೀಚೆಗೆ ಇಸ್ರೇಲ್‌ ಮೇಲೆ ಇರಾನ್‌ ಕೈಗೊಂಡ ಕ್ಷಿಪಣಿ ದಾಳಿಗೆ ಪ್ರತಿಯಾಗಿ ಇರಾನ್‌ ಅಣ್ವಸ್ತ್ರ ಕೇಂದ್ರಗಳ ಮೇಲೆ ಇಸ್ರೇಲ್‌ ದಾಳಿ ಮಾಡಬೇಕು ಎಂದು ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿದ್ದಾರೆ. ಚುನಾವಣ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ನಮಗಿರುವ ಅತೀದೊಡ್ಡ ಭೀತಿಯೆಂದರೆ ಅದು ಅಣ್ವಸ್ತ್ರ. ಹೀಗಾಗಿ ಮೊದಲು ಅಣ್ವಸ್ತ್ರ ಕೇಂದ್ರದ ಮೇಲೆ ದಾಳಿ ಮಾಡಬೇಕು. ಆದರೆ ಇದಕ್ಕೆ ಬೈಡೆನ್‌ ಅವಕಾಶ ಕೊಡುವುದಿಲ್ಲ ಎಂದು ಹೇಳಿದರು.

Advertisement

ಇರಾನ್‌ ಕಚ್ಚಾತೈಲ ಕೇಂದ್ರದ ಮೇಲಿನ ದಾಳಿ ಖಂಡಿಸಿದ ಬೈಡೆನ್‌
ಇರಾನ್‌ನ ಕಚ್ಚಾತೈಲ ಕೇಂದ್ರಗಳ ಮೇಲೆ ಇಸ್ರೇಲ್‌ ದಾಳಿ ಮಾಡುವುದನ್ನು ಅಮೆರಿಕ ಖಂಡಿಸುತ್ತದೆ ಎಂದು ಅಧ್ಯಕ್ಷ ಜೋ ಬೈಡೆನ್‌ ಹೇಳಿದ್ದಾರೆ. ಇರಾನ್‌ ಮೇಲಿನ ದಾಳಿಗೆ ಸಂಬಂಧಿಸಿ ಮಾತುಕತೆ ನಡೆಸುತ್ತಿದ್ದೇವೆ. ನಾವು ಇಸ್ರೇಲ್‌ನ ಜಾಗದಲ್ಲಿದ್ದರೆ ಕಚ್ಚಾತೈಲ ಘಟಕಗಳ ಮೇಲೆ ದಾಳಿ ನಡೆಸುವ ಬದಲು ಬೇರೆ ಮಾರ್ಗ ಹುಡುಕುತ್ತಿದ್ದೆವು ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next