Advertisement

ತ್ಯಾಜ್ಯ: 10 ಗ್ರಾಪಂಗಳಿಗೆ ಜಾಗ ಮಂಜೂರು

05:51 AM May 28, 2020 | Lakshmi GovindaRaj |

ಬೆಂಗಳೂರು: ನಗರ ಜಿಪಂ ಹಲವು ಪ್ರದೇಶಗಳು ಬಿಬಿಎಂಪಿಗೆ ಹೊಂದಿಕೊಂಡಿದ್ದು, ಸಾಕಷ್ಟು ಪ್ರಮಾಣದಲ್ಲಿ ಉತ್ಪಾದನೆಯಾಗುತ್ತಿರುವ ತ್ಯಾಜ್ಯ ಸಮರ್ಪಕ ನಿರ್ವಹಣೆಗೆ  ಉತ್ತರ ತಾಲೂಕಿನ 10 ಗ್ರಾಪಂಗಳಿಗೆ ಜಾಗ ಮಂಜೂರು  ಮಾಡಲಾಗಿದೆ. ಜತೆಗೆ ಘನ ತ್ಯಾಜ್ಯ ನಿರ್ವಹಣೆ ಘಟಕ ಸ್ಥಾಪನೆಗಾಗಿ ಹಣ ಬಿಡುಗಡೆ ಮಾಡಲು ಮುಂದಾಗಿದೆ.

Advertisement

ಬೆಂಗಳೂರು ಉತ್ತರ ತಾಲೂಕಿನ ವ್ಯಾಪ್ತಿಯ ಆಲೂರು, ದಾಸನಪುರ, ಹುಸ್ಕೂರು, ಕಿತ್ತನಹಳ್ಳಿ, ಸೊಣ್ಣಪ್ಪನಹಳ್ಳಿ, ಸಾತನೂರು,ಕಣ್ಣೂರು ದೊಡ್ಡ ಗುಬ್ಬಿ, ಲಕ್ಷೀಪುರದಲ್ಲಿ ಸಮರ್ಪಕ ಘನತಾಜ್ಯ ನಿರ್ವಹಣೆಗಾಗಿ ಜಿಲ್ಲಾಧಿಕಾರಿಗಳು ಭೂಮಿಯನ್ನು ಮಂಜೂರು ಮಾಡಿದ್ದಾರೆ. ಬೆಂಗಳೂರು ನಗರ ಜಿಪಂ ವ್ಯಾಪ್ತಿಯಲ್ಲಿ ಸುಮಾರು 96 ಗ್ರಾಪಂಗಳಿವೆ. ಈ  ಎಲ್ಲಾ ಗ್ರಾಪಂಯಗಳಲ್ಲಿ ಕಸದ ಸಮರ್ಪಕ ನಿರ್ವಹಣೆಗೆ ಜಿಲ್ಲಾಡಳಿತ ಪಣತೊಟ್ಟಿದೆ. ರಾಜಾನುಕುಂಟೆ ಸೇರಿದಂತೆ 5 ಗ್ರಾಪಂಗಳಲ್ಲಿ ಈಗಾ ಗಲೇ ಘನತ್ಯಾಜ್ಯ ವಿಲೇವಾರಿ ಘಟಕಗಳ ಸ್ಥಾಪನೆ ಮಾಡಿದೆ. ಈಗ ಮತ್ತೆ ಹತ್ತು ಗ್ರಾಪಂಗಳಲ್ಲಿ  ಘಟಕ ಸ್ಥಾಪನೆಗೆ ಹೆಜ್ಜೆಯಿರಿಸಿದೆ.

ಜಾಗ ಮಂಜೂರಾತಿಗೆ ಸಮಿತಿ: ಈ ಹಿಂದೆ ಹಲವು ಕಡೆಗಳಲ್ಲಿ ಜಾಗದ ಸಮಸ್ಯೆ ಉಂಟಾಗಿತ್ತು. ಕೆಲವು ಕಡೆಗಳಲ್ಲಿ ಜಾಗ ಇದ್ದರೂ ಆ ಬಗ್ಗೆ ತಕರಾರು ಶುರುವಾಗಿತ್ತು. ಇದನ್ನು ಮನಗುಂಡು  ನಗರ ಜಿಲ್ಲಾಧಿ  ಕಾರಿಗಳು ಘನತ್ಯಾಜ್ಯ ವಿಲೇವಾರಿ ಸಂಬಂಧ ತಾಲೂಕು ಕಾರ್ಯನಿರ್ವಾಹಕ ಅಧಿಕಾರಿ  ಗಳ ನೇತೃತ್ವದಲ್ಲಿ ಸಮಿತಿಯನ್ನು ರಚಿಸಿದ್ದರು. ಈ ಸಮಿತಿ ವರದಿ ನೀಡಿದ ನಂತರ ಹತ್ತು ಗ್ರಾಪಂಗಳಲ್ಲಿ ಘನತ  ತ್ಯಾಜ್ಯ ನಿರ್ವಹಣೆಗೆ ಜಾಗ ಮಂಜೂರಾತಿ ದೊರೆತಿದೆ. ಜಾಗ ಮಂಜೂರಾಗಿರುವ ಪ್ರದೇಶಗಳಲ್ಲಿ ಘನತ್ಯಾಜ್ಯ ನಿರ್ವಹಣೆ ಘಟಕ ಸ್ಥಾಪನೆ ಕಾರ್ಯ ಶೀಘ್ರವಾಗಿ ನಡೆಯಲಿದೆ. ಮುಂದಿನ ದಿನಗಳಲ್ಲಿ ಹಂತ-ಹಂತವಾಗಿ ಭೂಮಿ ಗುರುತಿಸುವ  ಕೆಲಸ ನಡೆಯಲಿದೆ ಎಂದು ನಗರ ಜಿಪಂ ಅಧಿಕಾರಿಗಳು ಮಾಹಿತಿ ನೀಡಿದರು.

ತಲಾ 20 ಲಕ್ಷ ರೂ.ಅನುದಾನ: ಜಾಗ ಮಂಜೂರಾಗಿರುವ ಗ್ರಾಪಂಗಳಿಗೆ ಘನತ್ಯಾಜ್ಯ ನಿರ್ವಹಣೆ ಘಟಕ ಸ್ಥಾಪನೆಗಾಗಿ ತಲಾ 20 ಲಕ್ಷ. ರೂ ಅನುದಾನವನ್ನು  ತ್ಛ ಭಾರತ್‌ ಮಿಷನ್‌ ಯೋಜನೆಯಡಿ ಬಿಡುಗಡೆ ಮಾಡಲಾಗುವುದು. ಆರಂಭಿಕ ಹಂತದಲ್ಲಿ ಹತ್ತು ಲಕ್ಷ ರೂ. ಸಂಪೂರ್ಣ ಕಾರ್ಯ ಮುಗಿದ ನಂತರ ಹತ್ತು ಲಕ್ಷ ರೂ.ಬಿಡುಗಡೆ ಮಾಡಲಾಗುವುದು ಎಂದು  ಜಿಪಂನ ಸ್ವತ್ಛ ಭಾರತ್‌ ಮಿಷನ್‌ ವಿಭಾಗದ ಹಿರಿಯ  ಅಧಿಕಾರಿಗಳು ಮಾಹಿತಿ ನೀಡಿದರು.

ಸಮರ್ಪಕ ಘನತ್ಯಾಜ್ಯ ನಿರ್ವಹಣೆಗಾಗಿ ನಗರ ಜಿಲ್ಲಾಡಳಿತ ಹತ್ತು ಗ್ರಾಪಂಗಳಲ್ಲಿ ಭೂಮಿ ಮಂಜೂರು ಮಾಡಿದೆ. ಈ ಪ್ರದೇಶಗಳಲ್ಲಿ ಶೀಘ್ರದಲ್ಲೇ ಘನತ್ಯಾಜ್ಯ ನಿರ್ವಹಣೆ ಘಟಕ ನಿರ್ಮಾಣ ಕಾರ್ಯ ನಡೆಯಲಿದೆ. 
-ಕೆ.ಶಿವರಾಮೇಗೌಡ, ನಗರ ಜಿಪಂ ಸಿಇಒ

Advertisement

* ದೇವೇಶ ಸೂರಗುಪ್ಪ

Advertisement

Udayavani is now on Telegram. Click here to join our channel and stay updated with the latest news.

Next