Advertisement

ಕುಂಬ್ಳೆ ವಿಶ್ವದಾಖಲೆ ತಪ್ಪಿಸಬಹುದಿತ್ತು, ವಾಕರ್‌ಗೆ ಅಕ್ರಮ್‌ ಯಾರ್ಕರ್

03:45 AM Feb 11, 2017 | Team Udayavani |

ಕರಾಚಿ: ಒಂದಲ್ಲ ಒಂದು ವಿವಾದದಿಂದ ಪಾಕಿಸ್ತಾನ ಕ್ರಿಕೆಟಿಗರು ಸದಾ ಪ್ರಚಾರದಲ್ಲಿರುತ್ತಾರೆ. ಇದೀಗ ಅನಿಲ್‌ ಕುಂಬ್ಳೆ ಇನಿಂಗ್ಸ್‌ ಒಂದರಲ್ಲಿ 10  ವಿಕೆಟ್‌ ದಾಖಲೆ ಕುರಿತಾಗಿ ಪಾಕ್‌ನ ಮಾಜಿ ಕ್ರಿಕೆಟಿಗರಾದ ವಾಸೀಂ ಅಕ್ರಂ ಮತ್ತು ವಾಕರ್‌ ಯೂನಿಸ್‌ ಟ್ವೀಟರ್‌ನಲ್ಲಿ ಪರಸ್ಪರ ಕೆಸರೆರಚಾಟ ನಡೆಸಿದ ಘಟನೆ ನಡೆದಿದೆ. 

Advertisement

ಮನಸ್ಸು ಮಾಡಿದ್ದರೆ ಅಂದು ಕೊನೆಯ  ಬ್ಯಾಟ್ಸ್‌ಮನ್‌ ಆಗಿದ್ದ ವಾಕರ್‌ ರನೌಟಾಗಬಹುದಿತ್ತು. ಕುಂಬ್ಳೆ ದಾಖಲೆಯನ್ನು ತಪ್ಪಿಸುವ ಅವಕಾಶ ಇತ್ತು ಎಂದು ಪ್ರಕಟಿಸಿದ್ದರು. ಇದಕ್ಕೆ ವಾಕರ್‌ ತೀಕ್ಷ್ಣ ಪ್ರತ್ಯುತ್ತರ ನೀಡಿದ್ದಾರೆ. ತನ್ನ ಮೇಲಿನ ಎಲ್ಲ ಆರೋಪವನ್ನು ನಿರಾಕರಿಸಿದ್ದಾರೆ. ಮಾತ್ರವಲ್ಲ ಅಕ್ರಂಗೆ ವಯಸ್ಸಾಗಿದೆ ಎಂದು ಪ್ರತಿ ಟ್ವೀಟ್‌ ಮಾಡಿದ್ದಾರೆ. ವಿಷಯ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದೆ. ವಿವಾದಕ್ಕೆ ಎಡೆ ಮಾಡಿಕೊಡುತ್ತಿದೆ ಎನ್ನುವಷ್ಟರಲ್ಲಿ ಎಚ್ಚೆತ್ತ ವಾಕರ್‌ ಟ್ವೀಟ್‌ ಡಿಲೀಟ್‌ ಮಾಡಿದ್ದಾರೆ.

ಏನಿದು ಘಟನೆ?: 1999ರಲ್ಲಿ ದಿಲ್ಲಿಯಲ್ಲಿ ಪಾಕಿಸ್ತಾನದ ವಿರುದ್ಧ ನಡೆದ ಟೆಸ್ಟ್‌ ಪಂದ್ಯದ ಇನಿಂಗ್ಸ್‌ವೊಂದರಲ್ಲಿ ಭಾರತದ ಮಾಜಿ ಸ್ಪಿನ್‌ ಬೌಲರ್‌ ಅನಿಲ್‌ ಕುಂಬ್ಳೆ 10  ವಿಕೆಟ್‌ ಕಬಳಿಸಿದ್ದರು. ವಿಶ್ವ ದಾಖಲೆ ನಿರ್ಮಿಸಿದ್ದರು. ಈ ದಾಖಲೆ ಆಗಿ ಇತ್ತೀಚೆಗೆ 18 ವರ್ಷಗಳಾಗಿವೆ. ಇತ್ತೀಚೆಗೆ ಕುಂಬ್ಳೆ 18 ವರ್ಷದ ಸಂಭ್ರಮವನ್ನು ಆಚರಿಸಿದ್ದರು. ಈ ವೇಳೆ ಟ್ವೀಟರ್‌ನಲ್ಲಿ ಮಾಜಿ ವೇಗಿ ವಾಸೀಂ ಅಕ್ರಂ ಆ ದಿನಗಳನ್ನು ನೆನಪಿಸಿಕೊಂಡಿದ್ದಾರೆ. 

ಒಂದು ವೇಳೆ ವಾಕರ್‌ ಬುದ್ದಿವಂತಿಕೆ ಉಪಯೋಗಿಸಿ ರನೌಟ್‌ ಆಗಿದ್ದರೆ ಕುಂಬ್ಳೆ ದಾಖಲೆಯನ್ನು ತಪ್ಪಿಸಬಹುದಿತ್ತು ಎಂದು ತಿಳಿಸಿದ್ದಾರೆ. ಇದಕ್ಕೆ ವಾಕರ್‌ ಖಾರವಾಗಿಯೇ ಪ್ರತಿಕ್ರಿಯೆ ನೀಡಿದ್ದಾರೆ. ನಿಮಗೆ (ಅಕ್ರಂ) ವಯಸ್ಸಾಗಿದೆ ಎಂದು ಅನಿಸುತ್ತಿದೆ ಎಂದಿದ್ದಾರೆ. ಸತ್ಯ ಸಂಗತಿ ಬಗ್ಗೆ ಮಾತನಾಡು, ವಯಸ್ಸಿನ ವಿಷಯದಲ್ಲಿ ನಾನು ಯಾವಾಗಲೂ ನಿನ್ನಿಂದ ಮುಂದಿದ್ದೇನೆ ಎಂದು ಅಕ್ರಂ ತಿರುಗೇಟು ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next