Advertisement

Zaid Khan; ಜಮೀರ್ ಪುತ್ರನ ಹೊಸ ಚಿತ್ರದ ಪೋಸ್ಟರ್ ಬಂತು

12:03 PM Mar 21, 2024 | Team Udayavani |

“ಬನಾರಸ್‌’ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಹೀರೋ ಆಗಿ ಎಂಟ್ರಿ ಕೊಟ್ಟಿದ್ದ,ಸಚಿವ ಜಮೀರ್‌ ಅಹ್ಮದ್‌ ಪುತ್ರ ನಟ ಝೈದ್‌ ಖಾನ್‌ ಹಾಗೂ “ಉಪಾಧ್ಯಕ್ಷ’ ಚಿತ್ರದ ನಿರ್ದೇಶಕ ಅನಿಲ್‌ ಕುಮಾರ್‌ ಕಾಂಬಿನೇಶನ್‌ನಲ್ಲಿ ಹೊಸ ಸಿನಿಮಾವೊಂದು ಆರಂಭವಾಗುತ್ತಿರುವ ವಿಷಯ ಕೆಲ ದಿನಗಳ ಹಿಂದಷ್ಟೇ ಬಹಿರಂಗವಾಗಿತ್ತು. ಆ ಸುದ್ದಿಯ ಬೆನ್ನಲ್ಲೇ ಝೈದ್‌ ಖಾನ್‌ ಮತ್ತು ಅನಿಲ್‌ ಕುಮಾರ್‌ ಜೋಡಿಯ ಈ ಹೊಸ ಸಿನಿಮಾದ ಮೊದಲ ಪೋಸ್ಟರ್‌ ಬಿಡುಗಡೆಯಾಗಿದೆ.

Advertisement

ಇನ್ನು ಬಿಡುಗಡೆಯಾಗಿರುವ ಸಿನಿಮಾದ ಪೋಸ್ಟರ್‌ನಲ್ಲಿ ಕೈಯಲ್ಲಿ ಮದ್ಯದ ಬಾಟಲ್‌ ಮತ್ತು ಸಿಗರೇಟ್‌ ಹಿಡಿದು ಕೊಂಡು ಹುಡುಗಿ ಫೋಟೋ ಮುಂದೆ ಕೂತಿ ರುವ ಭಗ್ನ ಪ್ರೇಮಿಯ ಲುಕ್‌ನಲ್ಲಿ ನಾಯಕನನ್ನು ತೋರಿಸಲಾಗಿದ್ದು, ಈ ಪೋಸ್ಟರ್‌ ಸೋಶಿಯಲ್‌ ಮೀಡಿಯಾದಲ್ಲಿ ಒಂದಷ್ಟು ಹರಿದಾಡುತ್ತಿದೆ.

ಇನ್ನು ಚಿತ್ರತಂಡದ ಮೂಲಗಳ ಪ್ರಕಾರ, ಇದೇ ಯುಗಾದಿ ಹಬ್ಬದ ವೇಳೆಗೆ ಈ ಸಿನಿಮಾದ ಟೈಟಲ್‌ ಟೀಸರ್‌ ಮತ್ತು ಫ‌ಸ್ಟ್‌ಲುಕ್‌ ರಿಲೀಸ್‌ ಮಾಡುವ ಯೋಜನೆ ಹಾಕಿಕೊಂಡಿದೆ ಚಿತ್ರತಂಡ.

ಅಂದಹಾಗೆ, ಝೈದ್‌ ಖಾನ್‌ ನಾಯಕರಾಗಿ ನಟಿಸುತ್ತಿರುವ ಎರಡನೇ ಸಿನಿಮಾ ಇದಾಗಿದ್ದು, “ಆಶ್ರಿತ್‌ ಸಿನಿಮಾಸ್‌’ ಬ್ಯಾನರಿನಲ್ಲಿ ನಿರ್ಮಾಣವಾಗು ತ್ತಿರುವ ಈ ಸಿನಿಮಾಕ್ಕೆ ಅರ್ಜುನ್‌ ಜನ್ಯ ಸಂಗೀತ ಸಂಯೋಜಿಸು ತ್ತಿದ್ದಾರೆ. ಜೆ. ಎಸ್‌ ವಾಲಿ ಛಾಯಾಗ್ರಹಣ, ಕೆ. ಎಂ. ಪ್ರಕಾಶ್‌ ಸಂಕಲನವಿದೆ. ಸಿನಿಮಾಕ್ಕೆ ರವಿವರ್ಮ ಸಾಹಸ ನಿರ್ದೇಶನವಿದೆ. ಎಲ್ಲ ಅಂದುಕೊಂಡಂತೆ ನಡೆದರೆ, ಈ ವರ್ಷಾಂತ್ಯಕ್ಕೆ ಝೈದ್‌ ಖಾನ್‌ ನಾಯಕರಾಗಿ ನಟಿಸುತ್ತಿರುವ ಎರಡನೇ ಸಿನಿಮಾ ತೆರೆಗೆ ಬರುವ ಸಾಧ್ಯತೆ ಇದೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next