Advertisement

T20 World Cup; ಪಾಕಿಸ್ಥಾನ ತಂಡದ ಆಯ್ಕೆ ವಿಳಂಬ

01:05 AM May 02, 2024 | Team Udayavani |

ಕರಾಚಿ: ಪಾಕಿಸ್ಥಾನದ ಟಿ20 ವಿಶ್ವಕಪ್‌ ತಂಡದ ಆಯ್ಕೆ ವಿಳಂಬಗೊಳ್ಳಲಿದೆ. ಕೆಲವು ಪ್ರಮುಖ ಕ್ರಿಕೆಟಿಗರ ಫಿಟ್‌ನೆಸ್‌ ಸಮಸ್ಯೆಯೇ ಇದಕ್ಕೆ ಕಾರಣ. ಹೀಗಾಗಿ ಮೇ 23 ಅಥವಾ 24ರ ವೇಳೆ ತಂಡವನ್ನು ಪ್ರಕಟಿಸುವುದು ಪಿಸಿಬಿ ಯೋಜನೆಯಾಗಿದೆ.

Advertisement

ಈಗಾಗಲೇ ಪ್ರಕಟಿಸಬೇಕಾದ ತಂಡಗಳಲ್ಲಿ ಪರಿವರ್ತನೆ ಮಾಡ ಬೇಕಾದ್ದಲ್ಲಿ ಮೇ 24 ಅಂತಿಮ ದಿನ ವಾದ ಕಾರಣ, ಇದೇ ವೇಳೆ ತಂಡ ವನ್ನು ಹೆಸರಿಸುವುದು ಪಾಕ್‌ ಯೋಜನೆಯಾಗಿದೆ. ಆದರೆ ಮೇ ಒಂದು ತಂಡದ ಆಯ್ಕೆಗೆ ಅಂತಿಮ ದಿನವಾದ ಕಾರಣ ಐಸಿಸಿ ಪಾಕಿಸ್ಥಾನಕ್ಕೆ ಅನುಮತಿ ನೀಡಲಿದೆಯೇ ಎಂಬು ದೊಂದು ಪ್ರಶ್ನೆ.

ಪ್ರಮುಖ ಟಿ20 ಆಟಗಾರರಾದ ಮೊಹಮ್ಮದ್‌ ರಿಜ್ವಾನ್‌, ಆಜಂ ಖಾನ್‌, ಇರ್ಫಾನ್‌ ಖಾನ್‌ ನಿಯಾಜಿ ಮತ್ತು ಹ್ಯಾರಿಸ್‌ ರೌಫ್ ಅವರು ಫಿಟ್‌ನೆಸ್‌ ಹೊಂದಿಲ್ಲ. ಇವರನ್ನು ಮುಂಬರುವ ಐರ್ಲೆಂಡ್‌, ಇಂಗ್ಲೆಂಡ್‌ ಸರಣಿಗಳಲ್ಲಿ ಆಡಿಸಿ ನೋಡುವುದು ಪಾಕಿಸ್ಥಾನದ ಉದ್ದೇಶವಾಗಿದೆ. ಈ ಸರಣಿಗಾಗಿ ಸಂಭಾವ್ಯ ತಂಡವನ್ನೂ ಆರಿಸಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next