Advertisement
ಇಲ್ಲಿನ ಶಾಲೆಯೊಂದರ ಆವರಣದಲ್ಲಿ ನಿರ್ಮಾಣ ಮಾಡಲಾಗಿದ್ದ 6 ಅಡಿ ಎತ್ತರದ ಲಿಂಕನ್ ಪ್ರತಿಮೆ ಕರಗಿದ್ದು, ಮೀಮ್‌ಗಳಿಗೆ ಆಹಾರವಾಗಿದೆ. ವಾಷಿಂಗ್ಟನ್‌ನಲ್ಲಿ ತಾಪಮಾನ 3 ಅಂಕಿಗಳನ್ನು ದಾಟಿದೆ. ಹೀಗಾಗಿ ಮೇಣದ ಪ್ರತಿಮೆ ಕರಗಿ, ಬೇರೆಯದೇ ಆಕಾರ ಪಡೆದಿದೆ. ಲಿಂಕನ್ ಅವರ ತಲೆಯ ಭಾಗ ಸಂಪೂರ್ಣವಾಗಿ ಕರಗಿ ಹೋಗಿದೆ ಎಂದು ವರದಿಗಳು ತಿಳಿಸಿವೆ.ಈ ಪ್ರತಿಮೆ ನಿರ್ಮಿಸಿರುವ ಸ್ಯಾಂಡಿ ವಿಲಿಯಮ್ಸ್ ಈ ಕುರಿತಾಗಿ ಮಾಹಿತಿ ನೀಡಿದ್ದು, 60 ಡಿಗ್ರಿ ಸೆ. (140 ಡಿಗ್ರಿ ಫ್ಯಾ.) ತಾಪಮಾನವನ್ನು ತಾಳಿಕೊಳ್ಳುವಂತೆ ಈ ಪ್ರತಿಮೆ ನಿರ್ಮಾಣ ಮಾಡಿದ್ದೆವು. ಆದರೆ ವಾಷಿಂಗ್ಟನ್‌ನಲ್ಲಿ ಇಷ್ಟು ತಾಪಮಾನ ದಾಖಲಾಗಿಲ್ಲ ಎಂದಿದ್ದಾರೆ. ಕಳೆದ ಕೆಲವು ದಿನಗಳಿಂದ ವಾಷಿಂಗ್ಟನ್‌ನಲ್ಲಿ ತಾಪಮಾನ ಸುಮಾರು 37 ಡಿಗ್ರಿಗೆ ಏರಿಕೆಯಾಗಿದೆ. ಬಾಲ್ಟಿಮೋರ್‌ನಲ್ಲಿ ಗರಿಷ್ಠ 37.77 ಡಿಗ್ರಿ ಸೆ. (101 ಡಿ. ಫ್ಯಾ)ಗೆ ತಾಪಮಾನ ಏರಿಕೆಯಾಗಿದೆ.