Advertisement

Israel- Iran ಮಧ್ಯೆ ಯುದ್ಧದ ಕಾರ್ಮೋಡ! : ಭಾರೀ ಸೇನೆ ಕಳುಹಿಸಿದ ಅಮೆರಿಕ

11:52 PM Aug 03, 2024 | Team Udayavani |

ವಾಷಿಂಗ್ಟನ್‌: ಇರಾನ್‌ ಮತ್ತು ಇಸ್ರೇಲ್‌ ನಡುವೆ ಉದ್ವಿ ಗ್ನತೆ ಹೆಚ್ಚುತ್ತಿರುವಂತೆಯೇ, ಇರಾನ್‌ ಮತ್ತು ಮಿತ್ರ ರಾಷ್ಟ್ರಗಳ ಸಂಭಾವ್ಯ ದಾಳಿಯಿಂದ ಇಸ್ರೇಲ್‌ ಅನ್ನು ರಕ್ಷಿಸುವ ನಿಟ್ಟಿನಲ್ಲಿ ಅಮೆರಿಕ ಹೆಜ್ಜೆಯಿಟ್ಟಿದೆ. ಅದರಂತೆ ಅಮೆರಿಕ ರಕ್ಷಣ ಇಲಾಖೆಯು ಮಧ್ಯಪ್ರಾಚ್ಯದತ್ತ ಯುದ್ಧ ವಿಮಾನಗಳ ಸ್ಕ್ವಾಡ್ರನ್‌ ಅನ್ನು ರವಾನಿಸುವು ದರ ಜತೆಗೆ, ವಿಮಾನವಾಹಕ ನೌಕೆಯೊಂದನ್ನೂ ನಿಯೋಜಿಸುವುದಾಗಿ ಪೆಂಟಗನ್‌ ಘೋಷಿಸಿದೆ.

Advertisement

ಇದಲ್ಲದೆ ಐರೋಪ್ಯ ಮತ್ತು ಮಧ್ಯಪ್ರಾಚ್ಯ ಪ್ರದೇಶಗಳಿಗೆ ಹೆಚ್ಚುವರಿಯಾಗಿ ಬ್ಯಾಲಿಸ್ಟಿಕ್‌ ಕ್ಷಿಪಣಿಗಳನ್ನು ಹೊಡೆದುರುಳಿಸಬಲ್ಲಂಥ ಕ್ರೂಸರ್‌ಗಳು ಮತ್ತು ಡೆಸ್ಟ್ರಾಯರ್‌ಗಳನ್ನೂ ಕಳುಹಿಸುವ ಬಗ್ಗೆ ರಕ್ಷಣ ಸಚಿವ ಲಾಯ್ಡ ಆಸ್ಟಿನ್‌ ಆದೇಶಿಸಿದ್ದಾರೆ. ಹಮಾಸ್‌ ಮತ್ತು ಹೆಜ್ಬುಲ್ಲಾ ನಾಯಕರನ್ನು ಗುರಿಯಾಗಿಸಿಕೊಂಡು ಇಸ್ರೇಲ್‌ ಇತ್ತೀಚೆಗೆ ನಡೆಸಿರುವ ದಾಳಿಯು ಮಧ್ಯ ಪ್ರಾಚ್ಯದಲ್ಲಿ ಸಂಘರ್ಷವನ್ನು ಹೆಚ್ಚಿಸಿದ್ದು, ಇಸ್ರೇಲ್‌ ಮೇಲೆ ಪ್ರತೀಕಾರಕ್ಕೆ ಇರಾನ್‌ ಸಜ್ಜಾಗಿದೆ. ಈ ಹಿನ್ನೆಲೆಯಲ್ಲಿ ಅಮೆರಿಕ ಈ ಕ್ರಮಗಳನ್ನು ಕೈಗೊಂಡಿದೆ.

ಇಸ್ರೇಲ್‌ ದಾಳಿಗೆ 9 ಸಾವು: ಈ ನಡುವೆ, ಪ್ಯಾಲೆಸ್ತೀನಿ ಉಗ್ರರ ವಿರುದ್ಧ ಇಸ್ರೇಲ್‌ ಗಾಜಾ ಪಟ್ಟಿಯಲ್ಲಿ ಶನಿವಾರ 2 ದಾಳಿ ನಡೆಸಿದೆ. ಈ ಸಂದರ್ಭದಲ್ಲಿ 9 ಮಂದಿ ಸಾವಿ ಗೀಡಾಗಿದ್ದಾರೆ. ಇಸ್ರೇಲ್‌ ಸೇನೆಯ ಬಾಂಬ್‌ ದಾಳಿಗೆ ಉಗ್ರರ ಶರೀರಗಳು ಛಿದ್ರಗೊಂಡಿದ್ದು, ಗುರುತಿಸಲೂ ಅಸಾಧ್ಯವಾದಂತಾಗಿದೆ ಎಂದು ಹಮಾಸ್‌ ದೂರಿದೆ.

ಜಾಗರೂಕರಾಗಿರಿ: ಭಾರತೀಯರಿಗೆ ಸಲಹೆ
ಇಸ್ರೇಲ್‌ನಲ್ಲಿರುವ ಎಲ್ಲ ಭಾರತೀಯರೂ ಜಾಗರೂಕರಾಗಿರಬೇಕು. ಅನಗತ್ಯವಾಗಿ ಎಲ್ಲಿಗೂ ಪ್ರಯಾಣ ಬೆಳೆಸಬಾರದು. ಸ್ಥಳೀಯ ಸುರಕ್ಷತ ನಿಯಮಗಳನ್ನು ಪಾಲಿಸ ಬೇಕು ಎಂದು ಟೆಲ್‌ ಅವಿವ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಸಲಹೆ ನೀಡಿದೆ. ಜತೆಗೆ ನಾವು ಪರಿಸ್ಥಿತಿ ಮೇಲೆ ನಿಗಾ ಇಟ್ಟಿದ್ದೇವೆ. ನಮ್ಮ ಎಲ್ಲ ನಾಗರಿಕರ ಸುರಕ್ಷತೆಗೆ ಬದ್ಧವಾಗಿದ್ದೇವೆ ಎಂದೂ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next