Advertisement

Discovered: ಅಮೆರಿಕ ಕಂಡುಹಿಡಿದದ್ದು ಕೊಲಂಬಸ್‌ ಅಲ್ಲ, ಭಾರತೀಯ ನಾವಿಕ: ಮಧ್ಯಪ್ರದೇಶ ಸಚಿವ

08:23 AM Sep 12, 2024 | Team Udayavani |

ಭೋಪಾಲ್‌: ಅಮೆರಿಕವನ್ನು ಕಂಡುಹಿಡಿದದ್ದು ಕೊಲಂಬಸ್‌ ಅಲ್ಲ, ಭಾರತೀಯ ನಾವಿಕ ವಾಸುಲುನ್‌ ಎಂದು ಮಧ್ಯಪ್ರದೇಶ ಉನ್ನತ ಶಿಕ್ಷಣ ಸಚಿವ ಇಂದರ್‌ ಸಿಂಗ್‌ ಪರ್ಮಾರ್‌ ಹೇಳಿದ್ದಾರೆ.

Advertisement

ಭೋಪಾಲದಲ್ಲಿ ಮಾತಾಡಿದ ಅವರು, ವಾಸುಲನ್‌ ಅಮೆರಿಕದ ಸ್ಯಾನ್‌ಡಿಯಾಗೋದಲ್ಲಿ ದೇಗುಲವನ್ನೂ ನಿರ್ಮಿಸಿದ್ದಾನೆ ಎಂದರು. ವಾಸ್ಕೋಡಗಾಮಾ ಭಾರತಕ್ಕೆ ಹೋಗುವ ಮಾರ್ಗವನ್ನು ಕಂಡುಹಿಡಿಯಲಿಲ್ಲ. ಆದರೆ ಆತ “ಗುಜರಾತಿ ವ್ಯಾಪಾರಿ ಚಂದನ್‌ ಎಂಬಾತನ ಸಮುದ್ರ ಮಾರ್ಗವನ್ನು ಅನುಸರಿಸಿದ ಎಂದಿದ್ದಾರೆ. ಈ ದೇಶದ ವಿದ್ಯಾರ್ಥಿಗಳಿಗೆ ತಪ್ಪು ಮಾಹಿತಿ ನೀಡಲಾಗುತ್ತಿದೆ. ಹೀಗಾಗಿ, ಕೊಲಂಬಸ್‌ ಮತ್ತು ವಾಸ್ಕೋಡಗಾಮಾ ಅಂಶಗಳನ್ನು ಪಠ್ಯಕ್ರಮದಿಂದ ತೆಗೆದುಹಾಕಲಾಗುವುದು. ಭಾರತ ವ್ಯಾಪಾರಿಗಳು 11ನೇ ಶತಮಾನದಲ್ಲಿಯೇ ಅಮೆರಿಕದ ಜತೆಗೆ ವ್ಯಾಪರ ನಡೆಸುತ್ತಿದ್ದರು ಎಂದರು.

ಇದನ್ನೂ ಓದಿ: Lokpal: ಕಾಯಿದೆ ರಚನೆಯಾಗಿ 10 ವರ್ಷ ಬಳಿಕ ತನಿಖಾ ವಿಭಾಗ ರಚಿಸಿದ ಲೋಕಪಾಲ್‌

Advertisement

Udayavani is now on Telegram. Click here to join our channel and stay updated with the latest news.